‘ಕೂದಲು’ ಬಹು ಬೇಗನೆ ಒಣಗಿಸುವುದು ಹೇಗೆ….?

ಒದ್ದೆ ಕೂದಲನ್ನು ಬಾಚುವುದರಿಂದ ಕೂದಲು ಬಹುಬೇಗ ತುಂಡಾಗುತ್ತವೆ. ಒದ್ದೆ ಕೂದಲಿನೊಂದಿಗೆ ಮನೆಯಿಂದ ಹೊರಹೋದರೆ ಧೂಳು, ಕೊಳೆ ನಿಮ್ಮ ಕೂದಲಿನಲ್ಲಿ ಕೂತು ತಲೆಹೊಟ್ಟು ಸಮಸ್ಯೆಗೆ ಕಾರಣವಾಗುತ್ತದೆ. ಹಾಗಾದರೆ ಒದ್ದೆ ಕೂದಲನ್ನು ಬಹುಬೇಗ ಒಣಗಿಸುವುದು ಹೇಗೆ…?

ಎಣ್ಣೆ ಹಚ್ಚಿ ಮಸಾಜ್ ಮಾಡಿದ ಬಳಿಕ ನೀವು ಸ್ನಾನ ಮಾಡುತ್ತೀರಾದರೆ ಶಾಂಪೂ ಬಳಸಲು ಮರೆಯದಿರಿ. ಕೂದಲಲ್ಲಿ ಎಣ್ಣೆಯಂಶ ಇದ್ದರೆ ನೀರನ್ನು ಬೇಗ ಒಣಗಲು ಬಿಡುವುದಿಲ್ಲ.

ತಣ್ಣೀರಿನಿಂದ ಸ್ನಾನ ಮಾಡಿ. ಇದರಿಂದ ಕೂದಲಿನ ಹೊರ ಪೊರೆ ತೆರೆದುಕೊಳ್ಳುವುದಿಲ್ಲ. ಇದು ಕೂದಲು ಒಣಗಿಸಲೂ ನಿಮಗೆ ಸಹಾಯ ಮಾಡುತ್ತದೆ. ತಲೆಕೂದಲು ಶೇ.80 ರಷ್ಟು ಒಣಗಿದ ಬಳಿಕವೇ ಬಾಚಿ.

ದಪ್ಪನೆಯ ಟವಲ್ ಬಳಸುವ ಬದಲು ತೆಳುವಾದ ಎರಡು ಟವಲ್ ಗಳನ್ನು ಬಳಸಿ. ಯಾವುದೇ ಕಾರಣಕ್ಕೂ ಒದ್ದೆ ಕೂದಲನ್ನು ಬಾಚದಿರಿ.

ಸ್ನಾನ ಮಾಡುವಾಗ ಹೆಚ್ಚು ಹೊತ್ತು ಶವರ್ ಕೆಳಗೆ ನಿಲ್ಲಬೇಡಿ. ತಲೆ ಸ್ವಚ್ಛಗೊಳಿಸಿದ ಬಳಿಕ ನೀರನ್ನು ಹಿಂಡಿ ಟವೆಲ್ ನಿಂದ ಕೂದಲನ್ನು ಸುತ್ತಿಡಿ. ಬಳಿಕ ಮೈಗೆ ಸ್ನಾನ ಮಾಡಿ. ಇದರಿಂದ ತಲೆಯ ನೀರನ್ನು ಟವೆಲ್ ಬಹುಬೇಗ ಹೀರಿಕೊಳ್ಳುತ್ತದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read