ಕೂದಲಿನ ಬೆಳವಣೆಗೆಗೆ ಅತ್ಯಗತ್ಯವಾದ ವಿಟಮಿನ್ ಗಳು ಯಾವುವು ಗೊತ್ತಾ….?

ನಮ್ಮ ದೇಹದ ಜೀವಕೋಶಗಳ ಬೆಳವಣಿಗೆಗೆ ಜೀವಸತ್ವಗಳು ಬೇಕಾಗುತ್ತದೆ.

ಅದರಲ್ಲಿ ಕೂದಲು ಕೂಡ ಒಂದು. ಮಾನವ ದೇಹದಲ್ಲಿ ಕೂದಲು ಬೆಳೆಯುವ ಅಂಗಾಂಶವಾದ ಕಾರಣ ಅದರ ಬೆಳವಣಿಗೆಗೆ ಅಗತ್ಯವಾದ ವಿಟಮಿನ್ ಗಳು ಬೇಕಾಗುತ್ತದೆ. ಹಾಗಾದ್ರೆ ಆ ವಿಟಮಿನ್ ಗಳು ಯಾವುದೆಂದು ತಿಳಿದು ಕೂದಲಿನ ಆರೋಗ್ಯ ಕಾಪಾಡಿ.

*ವಿಟಮಿನ್ ಎ : ಇದು ಕೂದಲಿನ ಬೆಳವಣಿಗೆಗೆ ಅತಿ ಅವಶ್ಯಕ. ಹಾಗೇ ಇದು ಮಿತಿಮೀರಿದರೆ ಕೂದಲಿನ ಸಮಸ್ಯೆ ಕೂಡ ಕಾಡುತ್ತದೆ. ಗೆಣಸು, ಕುಂಬಳಕಾಯಿ, ಪಾಲಕ್, ಹಾಲು, ಮೊಟ್ಟೆ, ಮೊಸರಿನಲ್ಲಿ ಇದು ಅಧಿಕವಾಗಿರುತ್ತದೆ.

*ವಿಟಮಿನ್ ಬಿ : ಇದು ಕೂದಲು ದಪ್ಪವಾಗಿ ಬೆಳೇಯಲು ಸಹಕರಿಸುತ್ತದೆ. ಇದು ಅಣಬೆ, ಅವಕಾಡೊ, ಮೊಟ್ಟೆ, ಕಡಲೆಕಾಯಿ, ಬೆಣ್ಣೆ, ಹೂಕೋಸು, ವಾಲ್ ನಟ್ಸ್ ನಲ್ಲಿ ಅಧಿಕವಾಗಿರುತ್ತದೆ.

*ವಿಟಮಿನ್ ಸಿ : ಇದು ಕೂದಲಿನ ಆರೋಗ್ಯವನ್ನು ಕಾಪಾಡುವ ಅತ್ಯುತ್ತಮ ಪೋಷಕಾಂಶ. ಇದು ಕೂದಲು ಬೂದು ಬಣ್ಣಕ್ಕೆ ತಿರುಗುವುದನ್ನು ಮತ್ತು ಕೂದಲು ಶುಷ್ಕವಾಗುವುದನ್ನು ತಡೆಗಟ್ಟುತ್ತದೆ. ಇದು ಮೊಸರು, ಕಿತ್ತಳೆ, ನಿಂಬೆ, ಸ್ಟ್ರಾಬೆರಿ ಮುಂತಾದವುಗಳಲ್ಲಿ ಹೇರಳವಾಗಿರುತ್ತದೆ.

*ವಿಟಮಿನ್ ಡಿ : ಇದು ಕೂದಲುದುರುವುದನ್ನು ತಡೆಯುತ್ತದೆ. ಇದು ಹೊಸ ಕೂದಲು ಬೆಳೆಯಲು ಸಹಕಾರಿಯಾಗಿದೆ. ಇದು ಆಹಾರದ ಮೂಲಕ ಹಾಗೂ ಸೂರ್ಯ ಬೆಳಕಿನ ಮೂಲಕ ನಿಮಗೆ ಸಿಗುತ್ತದೆ.

*ವಿಟಮಿನ್ ಇ : ಇದು ಕೂದಲಿನ ಅಂಗಾಂಶಗಳನ್ನು ಸರಿಪಡಿಸುತ್ತದೆ ಮತ್ತು ಕೂದಲಿನ ಬೆಳವಣೆಗೆಗೆ ಇದು ಅಗತ್ಯವಾಗಿರುತ್ತದೆ. ಇದು ಸೂರ್ಯಕಾಂತಿ ಬೀಜ, ಬಾದಾಮಿ, ಅವಕಾಡೊ, ಮೀನು, ಕಡಲೆಕಾಯಿಗಳಲ್ಲಿ ಅಧಿಕವಾಗಿರುತ್ತದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read