ಕುಳ್ಳಗಿರುವವರೂ ಉದ್ದವಾಗಿ ಕಾಣಿಸಿಕೊಳ್ಳಲು ಇಲ್ಲಿವೆ ಕೆಲ ಟಿಪ್ಸ್

ನೀವು ತುಸು ಕುಳ್ಳಗಿದ್ದೀರೇ, ಆ ಕೀಳರಿಮೆ ನಿಮ್ಮನ್ನು ಕಾಡುತ್ತಿದೆಯೇ. ಕೆಲವು ಟಿಪ್ಸ್ ಗಳನ್ನು ಅನುಸರಿಸುವ ಮೂಲಕ ನೀವು ಸಾಮಾನ್ಯರಂತೆ ಉದ್ದವಾಗಿ ಮತ್ತು ಆಕರ್ಷಕವಾಗಿ ಕಾಣಿಸಿಕೊಳ್ಳಬಹುದು. ಹೇಗೆನ್ನುತ್ತೀರಾ?

ಪಾರ್ಟಿ ಫಂಕ್ಷನ್ ಗಳಲ್ಲಿ ಪಾಲ್ಗೊಳ್ಳುವಾಗ ಎರಡರಿಂದ ಮೂರು ಇಂಚು ಉದ್ದದ ಹೀಲ್ಸ್ ಧರಿಸಿ. ಇದು ನಿಮ್ಮನ್ನು ಉದ್ದವಾಗಿ ಹಾಗೂ ಸುಂದರವಾಗಿ ಕಾಣುವಂತೆ ಮಾಡುತ್ತದೆ. ಆದರೆ ನಿತ್ಯ ಹೀಲ್ಸ್ ಬಳಸುವುದು ಒಳ್ಳೆಯದಲ್ಲ. ಇದರಿಂದ ಕಾಲು ನೋವು ಬಂದೀತು.

ಸಣ್ಣ ಸ್ಕರ್ಟ್ ಧರಿಸುವುದರಿಂದ ನೀವು ಮತ್ತಷ್ಟು ಉದ್ದ ಕಾಣಿಸುತ್ತೀರಿ. ಉಡುಪಿನ ಆಯ್ಕೆಯಲ್ಲೂ ಎಚ್ಚರ ವಹಿಸಿ. ಶರ್ಟ್ ಮತ್ತು ಜಾಕೆಟ್ ಹಾಕುವುದಿದ್ದರೆ ಬೆಲ್ಟ್ ಧರಿಸಿ. ಇದು ನಿಮ್ಮ ಸೊಂಟವನ್ನು ಸಣ್ಣದಾಗಿ ಕಾಣುವಂತೆ ಮಾಡುತ್ತದೆ.

ಗಾಢ ಬಣ್ಣದ ಉಡುಪುಗಳನ್ನೇ ಆಯ್ಕೆ ಮಾಡಿ. ಇದು ನಿಮ್ಮ ದೇಹವನ್ನು ಉದ್ದವಾಗಿ ಕಾಣುವಂತೆ ಮಾಡುತ್ತದೆ. ದೊಡ್ಡ ಹ್ಯಾಂಗಿಂಗ್ ಗಳು ನಿಮ್ಮ ಕಿವಿಗೆ ಆಕರ್ಷಣೆ ತಂದು ಕೊಡುವುದು ಮಾತ್ರವಲ್ಲ, ಕುತ್ತಿಗೆ ನೀಳವಾಗಿ ಕಾಣುವಂತೆಯೂ ಮಾಡುತ್ತದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read