ಕುಮಾರಸ್ವಾಮಿಯವರದ್ದು ಮನೆಯಿಂದ ಊರಿಂದ ದಾಟಿದ ಸಾಮರ್ಥ್ಯ; JDS ನಪುಂಸಕ ಹೇಳಿಕೆಗೆ ಸಿ.ಟಿ. ರವಿ ಟಾಂಗ್

ಪ್ರಹ್ಲಾದ್ ಜೋಶಿ ಕುರಿತ ಕುಮಾರಸ್ವಾಮಿ ಅವರ ಹೇಳಿಕೆ ಬಳಿಕ ರಾಜ್ಯ ರಾಜಕಾರಣದಲ್ಲಿ ವಾಗ್ವಾದ ಆರಂಭವಾಗಿದೆ. ಅದರಲ್ಲೂ ಜೆಡಿಎಸ್, ಬಿಜೆಪಿ ನಾಯಕರು ಮಾತಿನ ಸಮರದಲ್ಲಿ ತೊಡಗಿದ್ದು ಇದು ಮುಗಿಲು ಮುಟ್ಟಿದೆ.

ಇದರ ಮಧ್ಯೆ ಜೆಡಿಎಸ್ ನಿಂದ ಸೋಮವಾರ ಟ್ವೀಟ್ ಮಾಡಲಾಗಿದ್ದು, ಬೊಮ್ಮಾಯಿ ನೇತೃತ್ವದ ಸರ್ಕಾರವನ್ನು ನಪುಂಸಕ ಎಂದು ಹೇಳಲಾಗಿದೆ. ಅಲ್ಲದೆ ಚುನಾವಣೆ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರನ್ನು ಪದೇ ಪದೇ ಕರೆಯಿಸಲಾಗುತ್ತಿದೆ ಎಂದು ಟಾಂಗ್ ನೀಡಲಾಗಿದೆ.

ಈ ಕುರಿತಂತೆ ಚಿಕ್ಕಮಗಳೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳಿಗೆ ಪ್ರತಿಕ್ರಿಯೆ ನೀಡಿರುವ ಮಾಜಿ ಸಚಿವ ಸಿ.ಟಿ. ರವಿ, ವೈಯಕ್ತಿಕ ವಿಷಯವಾಗಿ ಹೇಳುವುದಾದರೆ ಕುಮಾರಸ್ವಾಮಿ ಅವರಷ್ಟು ಸಾಮರ್ಥ್ಯ ನಮಗೆ ಇಲ್ಲ. ಅವರದ್ದು ಮನೆಯಿಂದ, ಊರಿನಿಂದ ಹೊರಗಿನ ಸಾಮರ್ಥ್ಯ ಎಂದು ವ್ಯಂಗ್ಯವಾಡಿದ್ದಾರೆ.

ಇನ್ನು ಸರ್ಕಾರ ಸಾಮರ್ಥ್ಯಕ್ಕೆ ಸಂಬಂಧಪಟ್ಟ ವಿಚಾರಕ್ಕೆ ಹೇಳುವುದಾದರೆ ಬಸವರಾಜ ಬೊಮ್ಮಾಯಿ ನೇತೃತ್ವದ ಸರ್ಕಾರ ಅತ್ಯುತ್ತಮವಾಗಿ ಕಾರ್ಯ ನಿರ್ವಹಿಸುತ್ತಿದೆ. ಇದನ್ನು ರಾಜ್ಯದ ಜನತೆ ಗಮನಿಸಿದ್ದಾರೆ ಎಂದು ತಿಳಿಸಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read