ಕುಚ್ಚಲಕ್ಕಿಯಿಂದ ವೃದ್ಧಿಸಿಕೊಳ್ಳಿ ಸೌಂದರ್ಯ

ಬೆಳ್ತಿಗೆ ಅನ್ನಕ್ಕೆ ಹೋಲಿಸಿದರೆ ಕುಚ್ಚಲಕ್ಕಿಯಲ್ಲಿ ಹೆಚ್ಚಿನ ಪೋಷಕಾಂಶಗಳಿವೆ ಮತ್ತು ಕೊಲೆಸ್ಟ್ರಾಲ್ ಕಡಿಮೆ ಮಾಡುವ ಗುಣವಿದೆ ಎಂಬುದು ಎಲ್ಲರಿಗೂ ತಿಳಿದ ಸಂಗತಿಯೇ. ಈಗ ಹೊಸ ವಿಷಯ ಎಂದರೆ ಕುಚ್ಚಲಕ್ಕಿಯಿಂದಲೂ ನಿಮ್ಮ ಸೌಂದರ್ಯ ಇಮ್ಮಡಿಗೊಳಿಸಬಹುದು.

ಕುಚ್ಚಲಕ್ಕಿ ಸೇವಿಸುವುದರಿಂದ ತ್ವಚೆಗೆ ಆಗುವ ಹಾನಿಯನ್ನು ತಡೆಯಬಹುದು. ಧೂಳು, ಕಲ್ಮಶ ಮತ್ತು ಯುವಿ ಕಿರಣಗಳಿಂದ ತ್ವಚೆಯ ಮೇಲಾಗುವ ಹಾನಿಯನ್ನು ಅದು ತಪ್ಪಿಸುತ್ತದೆ.
ವಿನಾಕಾರಣ ತ್ವಚೆ ಕಪ್ಪಾಗುವುದು, ಸುಟ್ಟಂತಾಗುವುದು ಮೊದಲಾದ ಸಮಸ್ಯೆಯನ್ನು ಇದು ಪರಿಹರಿಸುತ್ತದೆ. ತ್ವಚೆಯನ್ನು ಕಲೆ ಮುಕ್ತಗೊಳಿಸುತ್ತದೆ. ಸಣ್ಣ ವಯಸ್ಸಿನಲ್ಲೇ ನಿಮ್ಮ ಮುಖದಲ್ಲಿ ಮೂಡುವ ಸುಕ್ಕಿನ ಲಕ್ಷಣಗಳನ್ನು ಕಡಿಮೆ ಮಾಡುತ್ತದೆ.

ಕುಚ್ಚಲಕ್ಕಿ ಅನ್ನವನ್ನು ರುಬ್ಬಿ ಮೊಸರು ಬೆರೆಸಿ ಮುಖಕ್ಕೆ ಹಚ್ಚಿ ಫೇಸ್ ಪ್ಯಾಕ್ ಮಾಡಿಕೊಂಡರೆ ಮೊಡವೆ ಕಲೆಗಳು ದೂರವಾಗಿ ತ್ವಚೆಗೆ ಸಹಜವಾದ ಹೊಳಪು ಸಿಗುತ್ತದೆ.

ಕುಚ್ಚಲಕ್ಕಿ ತೊಳೆದ ನೀರನ್ನು ಮೈಗೆ ಹಚ್ಚಿಕೊಳ್ಳುವುದರಿಂದ ಅಲರ್ಜಿಯ ಲಕ್ಷಣಗಳು ದೂರವಾಗುತ್ತದೆ. ತುರಿಕೆ, ಇಸುಬು ಮೊದಲಾದ ಸಮಸ್ಯೆಗಳಿಗೆ ಇದು ಮನೆಮದ್ದು.

ಕುಚ್ಚಲಕ್ಕಿ ನೀರನ್ನು ಕಂಡಿಷನರ್ ಆಗಿಯೂ ಬಳಸಬಹುದು. ಇದರಿಂದ ತಲೆ ತೊಳೆಯುವುದರಿಂದ ಕೂದಲು ಉದ್ದ, ದಟ್ಟವಾಗಿ ಬೆಳೆಯುತ್ತದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read