ಕೀ ಲೆಸ್ ಆಕ್ಟಿವಾ 6 G ಶೀಘ್ರ ಮಾರುಕಟ್ಟೆಗೆ: ಹೀಗಿದೆ ಅದರ ವಿಶೇಷತೆ

ಕೀ ಲೆಸ್ ಆಕ್ಟಿವಾ 6G ಸ್ಮಾರ್ಟ್ ಕೀ ರೂಪಾಂತರವನ್ನು ಹೋಂಡಾ ಮೋಟಾರ್‌ ಸೈಕಲ್ ಮತ್ತು ಸ್ಕೂಟರ್ ಇಂಡಿಯಾ ಪ್ರಕಟಿಸಿದೆ. ಸ್ಮಾರ್ಟ್ ಕೀ ಬದಲಾವಣೆಯೊಂದಿಗೆ, ಸ್ಕೂಟರ್ ಅನ್ನು ಕೀ ಇಲ್ಲದೆಯೇ ಸಂಪೂರ್ಣವಾಗಿ ನಿರ್ವಹಿಸಬಹುದು. ಹ್ಯಾಂಡಲ್‌ ಬಾರ್‌ಗಳನ್ನು ಲಾಕ್ ಮಾಡುವುದು ಮತ್ತು ಅನ್‌ಲಾಕ್ ಮಾಡುವುದು ಕೂಡ ತುಂಬಾ ಸುಲಭ. ಇದರ ಬೆಲೆ ರೂ. 80,537 (ಎಕ್ಸ್ ಶೋ ರೂಂ, ದೆಹಲಿ).

ಕಳ್ಳತನವನ್ನು ತಡೆಗಟ್ಟುವ ವಿಶೇಷ ತಂತ್ರ ಈ ಸ್ಕೂಟರ್​ನಲ್ಲಿದೆ. ಪಾರ್ಕಿಂಗ್ ಮಾಡುವಾಗ ಇದು ಅನುಕೂಲ ಆಗಲಿದೆ. ಇದು ವಾಹನಕ್ಕೆ ಹೆಚ್ಚುವರಿ ರಕ್ಷಣೆಯನ್ನು ಒದಗಿಸುತ್ತದೆ. ಈ ವೈಶಿಷ್ಟ್ಯಗಳನ್ನು ಪ್ರವೇಶಿಸಲು ಸ್ಕೂಟರ್‌ನಲ್ಲಿ ಇರುವ ನಾಬ್-ಶೈಲಿಯ ಸ್ವಿಚ್ ಅನ್ನು ತಿರುಗಿಸುವ ಅಗತ್ಯವಿದೆ. ಸ್ಕೂಟರ್‌ನಲ್ಲಿ ಟೆಲಿಸ್ಕೋಪಿಕ್ ಫ್ರಂಟ್ ಫೋರ್ಕ್ಸ್, ಸಿಂಗಲ್-ರಿಯರ್ ಸ್ಪ್ರಿಂಗ್ ಮತ್ತು ಎರಡೂ ಚಕ್ರಗಳಲ್ಲಿ ಡ್ರಮ್ ಬ್ರೇಕ್‌ಗಳು ಇವೆ.

ಕಾರುಗಳಲ್ಲಿ ಕಂಡು ಬರುವಂತೆ ಇದರಲ್ಲಿ ಕೂಡ ಸ್ಮಾರ್ಟ್ ಕೀ ವೈಶಿಷ್ಟ್ಯವಿದೆ. ಈ ಮೊದಲಿನ ವೇರಿಯಂಟ್‌ಗಳಲ್ಲಿ ನಾವೇ ಕೈಯಾರೇ ಕೀ ಬಳಸಿ ವಾಹನ ಸ್ಟಾರ್ಟ್ ಮಾಡುತ್ತಿದ್ದೆವು. ಆದರೆ ಇಲ್ಲಿ ಭೌತಿಕ ಕೀ ಸ್ಟಾರ್ಟ್ ಬದಲಿಗೆ ನಾಬ್ ಇಗ್ನಿಷನ್ ಅನ್ನು ಅಳವಡಿಸಲಾಗಿದೆ. ಇದರಿಂದ ಕೀ ಇಲ್ಲದೇ ಸ್ಕೂಟರ್ ಸ್ಟಾರ್ಟ್‌ ಆಗುತ್ತದೆ. ಸ್ಕೂಟರ್‌ನಲ್ಲಿ ಟೆಲಿಸ್ಕೋಪಿಕ್ ಫ್ರಂಟ್ ಫೋರ್ಕ್ಸ್, ಸಿಂಗಲ್-ರಿಯರ್ ಸ್ಪ್ರಿಂಗ್ ಮತ್ತು ಎರಡೂ ಚಕ್ರಗಳಲ್ಲಿ ಡ್ರಮ್ ಬ್ರೇಕ್‌ ವ್ಯವಸ್ಥೆ ಇದೆ. ಒಂದು ವೇಳೆ ಸ್ಕೂಟರ್‌ ಕಳ್ಳತನವಾದರೆ ವಾಹನದ ಸ್ಥಳ ಪತ್ತೆಗೆ ಲೊಕೆಟಿಂಗ್ ತಂತ್ರಜ್ಞಾನ ವ್ಯವಸ್ಥೆ ಇದರಲ್ಲಿದೆ ಎಂದು ಕಂಪೆನಿ ಹೇಳಿದೆ. ಈ ತಿಂಗಳಾಂತ್ಯದಲ್ಲಿ ಇದು ಎಲ್ಲರ ಕೈ ಸೇರಲಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read