ಕಾಲೇಜು ವಿದ್ಯಾರ್ಥಿನಿಯರಿಗೆ ‘ದಿ ಕೇರಳ ಸ್ಟೋರಿ’ ಉಚಿತ ವೀಕ್ಷಣೆಗೆ ಬಜರಂಗ ದಳದಿಂದ ಆಯೋಜನೆ

ಕೇರಳದಲ್ಲಿನ ಮತಾಂತರ ಕುರಿತ ಕಥಾ ಹಂದರ ಹೊಂದಿರುವ ‘ದಿ ಕೇರಳ ಸ್ಟೋರಿ’ ಈಗಾಗಲೇ ಬಿಡುಗಡೆಯಾಗಿದ್ದು, ಬಿಜೆಪಿ ಆಡಳಿತದಲ್ಲಿರುವ ಕೆಲ ರಾಜ್ಯಗಳು ಈ ಚಿತ್ರಕ್ಕೆ ತೆರಿಗೆ ವಿನಾಯಿತಿಯನ್ನು ಘೋಷಿಸಿವೆ.

ಕರ್ನಾಟಕದಲ್ಲಿಯೂ ಈ ಚಿತ್ರ ಪ್ರದರ್ಶನಗೊಳ್ಳುತ್ತಿದ್ದು, ಶಿವಮೊಗ್ಗ ಜಿಲ್ಲೆ ಭದ್ರಾವತಿಯಲ್ಲಿ ತಾಲೂಕು ಬಜರಂಗದಳದ ಕಾರ್ಯಕರ್ತರು ಕಾಲೇಜು ವಿದ್ಯಾರ್ಥಿನಿಯರಿಗಾಗಿ ಗುರುವಾರದಂದು ಈ ಚಿತ್ರದ ಉಚಿತ ಪ್ರದರ್ಶನವನ್ನು ಏರ್ಪಡಿಸಿದ್ದರು.

ಕಾಲೇಜು ವಿದ್ಯಾರ್ಥಿನಿಯರ ವೀಕ್ಷಣೆಗಾಗಿ ಭದ್ರಾವತಿಯ ನೇತ್ರಾವತಿ ಚಿತ್ರಮಂದಿರದಲ್ಲಿ 150 ಸೀಟುಗಳನ್ನು ಕಾಯ್ದಿರಿಸಿದ್ದು, ವಿವಿಧ ಕಾಲೇಜುಗಳ ನೂರು ಮಂದಿ ವಿದ್ಯಾರ್ಥಿನಿಯರು ಆಗಮಿಸಿ ‘ದಿ ಕೇರಳ ಸ್ಟೋರಿ’ ವೀಕ್ಷಿಸಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read