ಕಾರಿನ ವಿಮೆ ಪ್ರೀಮಿಯಂ ಲೆಕ್ಕಾಚಾರ ಮಾಡುವುದು ಹೇಗೆ ? ಇಲ್ಲಿದೆ ಮಾಹಿತಿ

 

ಕಾರು ಖರೀದಿ ಎನ್ನುವುದು ಬಡ ಹಾಗೂ ಮಧ್ಯಮ ವರ್ಗದ ಜನರಿಗೆ ಇಂದಿಗೂ ಸಹ ಜೀವನದ ದೊಡ್ಡ ಕನಸೇ ಆಗಿದೆ. ಕಾರು ಖರೀದಿ ಮಾಡುವುದಕ್ಕಿಂತಲೂ ಭಾರೀ ತಲೆನೋವಿನ ಸಂಗತಿ ಎಂದರೆ ಅದರ ನಿರ್ವಹಣೆ.

ಕಾರಿನ ನಿರ್ವಹಣೆಯ ವೆಚ್ಚಗಳ ಹೊರೆಯನ್ನು ತಗ್ಗಿಸಲು ಕಾರಿನ ವಿಮೆ ಅತ್ಯುತ್ತಮ ಮಾರ್ಗವಾಗಿದೆ. ಈಗಂತೂ ನಾನಾ ಬಗೆಯ ವಿಮಾ ಯೋಜನೆಗಳನ್ನು ನೀಡಲು ಬಹಳಷ್ಟು ಕಂಪನಿಗಳಿವೆ. ’ಮೂರನೇ ಪಾರ್ಟಿಯ’ ವಿಮೆಯಿಂದ ಹಿಡಿದು ಸಮಗ್ರ ವಿಮೆವರೆಗೂ ಬಗೆಬಗೆಯ ವಿಮಾ ಯೋಜನೆಗಳಿದ್ದು, ಅವಕ್ಕೆ ತಕ್ಕಂತೆ ಪ್ರೀಮಿಯಂಗಳನ್ನೂ ಹೊಂದಿವೆ.

ಕಾರು ವಿಮೆಗೆ ಪ್ರೀಮಿಯಂ ಹಣದ ಲೆಕ್ಕಾಚಾರ ಮಾಡುವುದು ಇದೀಗ ಬಹಳ ಸರಳ ಪ್ರಕ್ರಿಯೆಯಾಗಿದೆ. ಈ ಸರಳ ಸೂತ್ರವು ವಿಮಾ ಪ್ರೀಮಿಯಂ ನಿಗದಿ ಮಾಡಲು ಸಾಮಾನ್ಯವಾಗಿ ಬಳಸಲ್ಪಡುತ್ತದೆ.

ಸ್ವಯಂ ಹಾನಿ ಪ್ರೀಮಿಯಂ – (ಕ್ಲೇಮ್ ಮಾಡದಿರುವ ಬೋನಸ್ + ವಿನಾಯಿತಿಗಳು) + ಬಾಧ್ಯತೆ ಪ್ರೀಮಿಯಂ .

ಮೂರನೇ ಪಾರ್ಟಿ ಕವರ್‌‌

ಮೋಟಾರು ವಾಹನ ಕಾಯಿದೆ, 1988ರ ಪ್ರಕಾರ, ನಿಮ್ಮ ಕಾರಿಗೆ ಮೂರನೇ ಪಾರ್ಟಿಯ ವಿಮೆ ಮಾಡಿಸುವುದು ಕಡ್ಡಾಯವಾಗಿದೆ. ನಿಮ್ಮ ಕಾರಿನಿಂದ ಮೂರನೇ ವ್ಯಕ್ತಿಗೆ ಆಗುವ ಹಾನಿಯನ್ನು ಈ ವಿಮೆ ಕಟ್ಟಿಕೊಡುತ್ತದೆ. ಭಾರತೀಯ ವಿಮಾ ನಿಯಂತ್ರಣ ಹಾಗೂ ಅಭಿವೃದ್ಧಿ ಪ್ರಾಧಿಕಾರ ಹೊರಡಿಸಿರುವ ಸೂಚನೆಗಳ ಅನುಸಾರ ಕಾರಿನ ಗಾತ್ರದ ಮೇಲೆ ಮೂರನೇ ಪಾರ್ಟಿ ವಿಮೆಯ ಪ್ರೀಮಿಯಂ ನಿರ್ಧಾರವಾಗುತ್ತದೆ.

ಸ್ವಯಂ ಹಾನಿ ವಿಮೆ

ಬಹಳ ಪ್ರಯೋಜನಕಾರಿಯಾದ ಈ ವಿಮೆಯು ಐಚ್ಛಿಕವಾದದ್ದಾಗಿದೆ. ಮಾನವನಿಂದ ಅಥವಾ ಪ್ರಾಕೃತಿಕ ವಿಪತ್ತುಗಳಿಂದಾಗುವ ಹಾನಿಯನ್ನು ಸ್ವಯಂ ಹಾನಿ ವಿಮೆ ಕಟ್ಟಿಕೊಡುತ್ತದೆ. ಪ್ರೀಮಿಯಂ ಮೊತ್ತವು ವಿಮಾ ಘೋಷಿತ ಮೌಲ್ಯಕ್ಕೆ (ಐಡಿವಿ) ಪರೋಕ್ಷ ಅನುಪಾತದಲ್ಲಿರುತ್ತದೆ. ನಿಮ್ಮ ಕಾರಿನ ವಯಸ್ಸು ಹೆಚ್ಚಾದಂತೆ ಅದರ ಐಡಿವಿ ಮೌಲ್ಯ ಕುಸಿಯುತ್ತಾ ಸಾಗುತ್ತದೆ. ಭಾರತೀಯ ಮೋಟಾರು ಸುಂಕ (ಐಎಂಟಿ) ನಿರ್ಧರಿಸಿದಂತೆ, ಸ್ವಯಂ ಹಾನಿ ವಿಮೆಯ ಪ್ರೀಮಿಯಂ ಅನ್ನು ಐಡಿವಿಯ ಒಂದು ಅನುಪಾತದ ಮೇಲೆ ಲೆಕ್ಕಾಚಾರ ಮಾಡಲಾಗುತ್ತದೆ.

ಐಡಿವಿ ಲೆಕ್ಕಾಚಾರದ ಸೂತ್ರ ಇಂತಿದೆ:

ಐಡಿವಿ = ವಿಮೆಗೆ ಒಳಪಟ್ಟ ನಿಮ್ಮ ಕಾರಿನ ಶೋರೂಂ ಬೆಲೆ + ಅಕ್ಸೆಸರಿಗಳ ವೆಚ್ಚ – ಐಆರ್‌ಡಿಎಐ ನಿಗದಿತ ಸವಕಳಿ ಮೌಲ್ಯ

ಸ್ವಯಂ ಹಾನಿ ಪ್ರೀಮಿಯಂ = ಐಡಿವಿ * {ಪ್ರೀಮಿಯಂ ದರ (ವಿಮಾ ಸೇವಾದಾರ ನಿರ್ಧರಿಸಿದಂತೆ)} + {ಹೆಚ್ಚುವರಿಗಳು} – {ವಿನಾಯಿತಿಗಳು ಮತ್ತು ಪ್ರಯೋಜನಗಳು (ಕಳ್ಳತನದ ವಿನಾಯಿತಿ, ಕ್ಲೇಮ್ ರಾಹಿತ್ಯದ ಬೋನಸ್, ಇತರೆ}

ವೈಯಕ್ತಿಕ ಅಪಘಾತದ ವಿಮೆ

ಈ ವಿಮೆಯು ಅಪಘಾತಗಳು ಅಥವಾ ಕಾರಿನಲ್ಲಿ ಸಂಭವಿಸುವ ಇನ್ಯಾವ ರೀತಿಯ ದುರಂತದಿಂದಲೂ ನಿಮಗೆ ಆಗಬಹುದಾದ ಅಂಗ ವೈಕಲ್ಯತೆಗಳಿಗೆ ಪರಿಹಾರ ನೀಡುತ್ತದೆ. ವಿಮಾ ಪಾಲಿಸಿಯಲ್ಲಿ ಸೇರಿಸದೇ ಬಿಟ್ಟಿರುವ ಪ್ರಯಾಣಿಕರನ್ನೂ ಈ ವಿಮಾ ಮೊತ್ತ ಒಳಗೊಂಡಿರುತ್ತದೆ. ವಿಮಾ ಮೊತ್ತಕ್ಕನುಗುಣವಾಗಿ ಪ್ರೀಮಿಯಂ ಮೊತ್ತವೂ ಹೆಚ್ಚುತ್ತದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read