ಕಾಗೋಡು ತಿಮ್ಮಪ್ಪ ಕುಟುಂಬಕ್ಕೆ ಸೇರಿದ ಕಂಪನಿಯಲ್ಲಿ ಕಳವು; 17 ಲಕ್ಷ ರೂ. ಮೌಲ್ಯದ ಸಿಗರೇಟ್ ಬಂಡಲ್ ಹೊತ್ತೊಯ್ದ ಚೋರರು…!

ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಕುಟುಂಬದ ಒಡೆತನಕ್ಕೆ ಸೇರಿದ ಕಂಪನಿಯಲ್ಲಿ ಕಳವು ಮಾಡಲಾಗಿದ್ದು, ಸುಮಾರು 17 ಲಕ್ಷ ರೂಪಾಯಿ ಮೌಲ್ಯದ ಸಿಗರೇಟ್ ಬಂಡಲ್ ಗಳನ್ನು ಚೋರರು ಹೊತ್ತೊಯ್ದಿದ್ದಾರೆ.

ಶಿವಮೊಗ್ಗ ಜಿಲ್ಲೆ ಸಾಗರ ನಗರದ ಸೊರಬ ರಸ್ತೆಯಲ್ಲಿರುವ ಯುನೈಟೆಡ್ ಟ್ರೇಡಿಂಗ್ ಕಂಪನಿಯಲ್ಲಿ ಭಾನುವಾರ ರಾತ್ರಿ ಈ ಘಟನೆ ನಡೆದಿದ್ದು, ಅಂಗಡಿಯ ರೋಲಿಂಗ್ ಶಟರ್ ಒಡೆದು ಕಳ್ಳರು ಒಳ ಪ್ರವೇಶಿಸಿದ್ದಾರೆ.

ಬಳಿಕ 9,000 ನಗದು, 17 ಲಕ್ಷ ರೂಪಾಯಿ ಮೌಲ್ಯದ ಸಿಗರೇಟ್ ಬಂಡಲ್ ಜೊತೆಗೆ ಸಿಸಿ ಟಿವಿ ಕ್ಯಾಮರಾಗೆ ಸಂಬಂಧಿಸಿದ ಉಪಕರಣಗಳನ್ನು ಕಳವು ಮಾಡಲಾಗಿದ್ದು, ಘಟನೆ ಸಂಬಂಧ ಕಂಪನಿಯ ಮಾಲೀಕರಾದ ಅನುರಾಧ ಕಾಗೋಡು ಸಾಗರ ನಗರ ಠಾಣೆ ಪೊಲೀಸರಿಗೆ ದೂರು ನೀಡಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read