ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಭರ್ಜರಿ ಗೆಲುವು ಸಾಧಿಸ್ತಿದ್ದಂತೆ ಪಕ್ಷದ ಕಾರ್ಯಕರ್ತರ ಸಂಭ್ರಮ ಮುಗಿಲುಮುಟ್ಟಿದೆ. ಇತ್ತ ಕೈ ಪಕ್ಷ ಹೆಚ್ಚಿನ ಸ್ಥಾನ ಗೆಲ್ಲುತ್ತಿದ್ದಂತೆ ದೆಹಲಿಯಲ್ಲಿನ ಕಾಂಗ್ರೆಸ್ ಪಕ್ಷದ ಕಚೇರಿ ಮುಂದೆ ನೂರಾರು ಕಾರ್ಯಕರ್ತರು ಪಟಾಕಿ ಹಚ್ಚಿ ಸಿಹಿ ಹಂಚಿ ಸಂಭ್ರಮಿಸಿದರು. ಆದರೆ ಈ ವೇಳೆ ಅವಘಡವೊಂದು ಜರುಗಿತು. ಘಟನೆಯಲ್ಲಿ ಯಾವುದೇ ಅನಾಹುತ ಸಂಭವಿಸಿಲ್ಲ.
ಕಾಂಗ್ರೆಸ್ ನಾಯಕರೊಬ್ಬರು ಪಟಾಕಿ ಸಿಡಿಸುವ ವೇಳೆ ಗಾಯದಿಂದ ಪಾರಾಗಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ವಿಡಿಯೋದಲ್ಲಿ ಕಾಂಗ್ರೆಸ್ ನಾಯಕರೊಬ್ಬರು ಪಟಾಕಿ ಹಚ್ಚಿ, ಬ್ಯಾಲೆನ್ಸ್ ಕಳೆದುಕೊಂಡು ಪಟಾಕಿ ಪೆಟ್ಟಿಗೆಯನ್ನು ಬೀಳಿಸುತ್ತಿರುವುದನ್ನು ತೋರಿಸುತ್ತದೆ. ಈ ವೇಳೆ ಪಟಾಕಿಗಳು ಸ್ಫೋಟಗೊಳ್ಳುತ್ತಲೇ ಇದ್ದವು. ಪೆಟ್ಟಿಗೆಯನ್ನು ತೆಗೆದುಕೊಳ್ಳಲು ಪ್ರಯತ್ನಿಸುತ್ತಿರುವಾಗ ಪಟಾಕಿಯು ಅವರ ಕಣ್ಣುಗಳಿಗೆ ಅಪಾಯಕಾರಿಯಾಗಿ ಸ್ಫೋಟಗೊಳ್ಳುತ್ತದೆ. ಅದೃಷ್ಟವಶಾತ್ ಈ ವೇಳೆ ಕಾಂಗ್ರೆಸ್ ನಾಯಕನು ಘಟನೆಯಿಂದ ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.
https://twitter.com/ANI/status/1657253538584743937?ref_src=twsrc%5Etfw%7Ctwcamp%5Etweetembed%7Ctwterm%5E1657253538584743937%7Ctwgr%5Ee91f156fa129a48ad1c81de358b9128a93849e8e%7Ctwcon%5Es1_&ref_url=http%3A%2F%2Fm.dailyhunt.in%2Fnews%2Findia%2Fenglish%2Flokmat08408565043306-epaper-dhfd5012174f5c4159918eaf51ebc42a19%2Fwatchkarnatakaelectioncelebrationsturndangerousasfirecrackerexplodesnearcongressleader-newsid-n499302152