ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಗಲಭೆ ಸೃಷ್ಟಿಸುವುದಾಗಿ ಧಮಕಿ ಹಾಕುತ್ತಿದ್ದಿರಾ ? ಅಮಿತ್‌ ಶಾ ಗೆ ಟ್ವೀಟ್‌ ಮೂಲಕ ಕಾಂಗ್ರೆಸ್ ಪ್ರಶ್ನೆ

ಮೇ 10ರಂದು ನಡೆಯಲಿರುವ ರಾಜ್ಯ ವಿಧಾನಸಭಾ ಚುನಾವಣೆಗೆ ಮೂರೂ ಪ್ರಮುಖ ಪಕ್ಷಗಳಿಂದ ಅಬ್ಬರದ ಪ್ರಚಾರ ನಡೆಸಲಾಗುತ್ತಿದ್ದು, ಕೇಂದ್ರ ಸಚಿವ ಅಮಿತ್ ಶಾ, ಬಿಜೆಪಿ ಅಭ್ಯರ್ಥಿಗಳ ಪರವಾಗಿ ಪ್ರಚಾರ ಕಾರ್ಯ ನಡೆಸಿದ್ದಾರೆ.

ಈ ವೇಳೆ ಮಾತನಾಡಿದ ಅವರು, ಬಿಜೆಪಿ ಅಧಿಕಾರದಲ್ಲಿದ್ದ ಸಂದರ್ಭದಲ್ಲಿ ಶಾಂತಿ ಸುವ್ಯವಸ್ಥೆ ನೆಲೆಸಿತ್ತು. ಒಂದೊಮ್ಮೆ ಕಾಂಗ್ರೆಸ್ ಪಕ್ಷಕ್ಕೆ ಗೆಲುವು ಸಿಕ್ಕರೆ ರಾಜ್ಯದಲ್ಲಿ ಮತ್ತೆ ಗಲಭೆ ಆಗಲಿದೆ ಎಂದು ಹೇಳಿದ್ದು, ಇದೇ ಹೇಳಿಕೆಯನ್ನು ಇಟ್ಟುಕೊಂಡು ಕಾಂಗ್ರೆಸ್ ಈಗ ಟ್ವೀಟ್ ಮಾಡಿದೆ.

ಅಮಿತ್ ಶಾ ಅವರೇ, ಕಾಂಗ್ರೆಸ್ ಅಧಿಕಾರಕ್ಕೆ ಬಂದ ನಂತರ ನೀವೇ ಗಲಭೆ ಸೃಷ್ಟಿಸುವುದಾಗಿ ರಾಜ್ಯದ ಜನತೆಗೆ ಧಮಕಿ ಹಾಕುತ್ತಿದ್ದಿರಾ? ಇಂತಹ ಬೆದರಿಕೆಗೆ ರಾಜ್ಯದ ಪ್ರಜ್ಞಾವಂತ ಜನ ಸೊಪ್ಪು ಹಾಕುವುದಿಲ್ಲ. ನೀವೊಬ್ಬ ಗೃಹ ಸಚಿವ ಎಂಬುದು ನೆನಪಿನಲ್ಲಿಡಿ ಎಂದು ಟ್ವೀಟ್‌ ನಲ್ಲಿ ಹೇಳಿದೆ.

https://twitter.com/INCKarnataka/status/1651122292934725633

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read