ಕಲ್ಯಾಣ ಜುವೆಲರ್ಸ್ ಗೆ ರಶ್ಮಿಕಾ ಮಂದಣ್ಣ ಈಗ ‘ಬ್ರಾಂಡ್ ಅಂಬಾಸಿಡರ್’

ದಕ್ಷಿಣ ಭಾರತದ ಖ್ಯಾತ ನಟಿ ರಶ್ಮಿಕಾ ಮಂದಣ್ಣ ಈಗ ಬಾಲಿವುಡ್ ಚಿತ್ರಗಳಲ್ಲೂ ಮಿಂಚುತ್ತಿದ್ದಾರೆ. ರಣಬೀರ್ ಕಪೂರ್ ಅವರ ಮುಂಬರುವ ಚಿತ್ರದಲ್ಲಿ ರಶ್ಮಿಕಾ ಮಂದಣ್ಣ ಕಾಣಿಸಿಕೊಳ್ಳಲಿದ್ದು, ಇದರ ಜೊತೆಗೆ ಅಲ್ಲು ಅರ್ಜುನ್ ಜೊತೆ ಪುಷ್ಪ 2 ರಲ್ಲೂ ನಟಿಸುತ್ತಿದ್ದಾರೆ.

ರಶ್ಮಿಕಾ ಮಂದಣ್ಣ ಅವರ ಜನಪ್ರಿಯತೆಯನ್ನು ಪರಿಗಣಿಸಿ ಈಗ ಪ್ರಮುಖ ಆಭರಣ ಬ್ರಾಂಡ್‌ಗಳಲ್ಲಿ ಒಂದಾದ ಕಲ್ಯಾಣ್ ಜುವೆಲರ್ಸ್, ದಕ್ಷಿಣದ ತನ್ನ ಬ್ರಾಂಡ್ ಅಂಬಾಸಿಡರ್ ಎಂದು ನೇಮಕ ಮಾಡಿಕೊಂಡಿದೆ. ಕನ್ನಡ, ತೆಲುಗು ಮತ್ತು ತಮಿಳುನಾಡು ಮಾರುಕಟ್ಟೆಗಳಿಗೆ ರಶ್ಮಿಕಾ ಮಂದಣ್ಣ ಅವರನ್ನು ಬ್ರಾಂಡ್ ಅಂಬಾಸಿಡರ್ ಆಗಿ ಆಯ್ಕೆ ಮಾಡಲಾಗಿದೆ.

ಕಲ್ಯಾಣ್ ಜುವೆಲರ್ಸ್ ಜೊತೆ ಈಗಾಗಲೇ ಸೆಲೆಬ್ರಿಟಿಗಳಾದ ಅಮಿತಾಬ್ ಬಚ್ಚನ್ (ಜಾಗತಿಕ ರಾಯಭಾರಿ), ಕತ್ರಿನಾ ಕೈಫ್ (ರಾಷ್ಟ್ರೀಯ ರಾಯಭಾರಿ), ನಾಗಾರ್ಜುನ (ಆಂಧ್ರ ಮತ್ತು ತೆಲಂಗಾಣ), ಪ್ರಭು (ತಮಿಳುನಾಡು), ಶಿವರಾಜ ಕುಮಾರ್ (ಕರ್ನಾಟಕ) ಮತ್ತು ಕಲ್ಯಾಣಿ ಪ್ರಿಯದರ್ಶನ್ (ಕೇರಳ) ಒಡಂಬಡಿಕೆ ಮಾಡಿಕೊಂಡಿದ್ದು ಈಗ ರಶ್ಮಿಕಾ ಮಂದಣ್ಣ ಈ ಪಟ್ಟಿಗೆ ಸೇರ್ಪಡೆಗೊಂಡಿದ್ದಾರೆ.

Kalyan Jewellers announces Rashmika Mandanna as brand ambassador -  Exchange4media

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read