
ಬೆಂಗಳೂರು: ವಿಧಾನಸಭೆ ಕಲಾಪಕ್ಕೆ ಇಂದು ಸ್ಪೀಕರ್ ಯು.ಟಿ. ಖಾದರ್ ನಗು ನಗುತ್ತಲೇ ಎಂಟ್ರಿ ಕೊಟ್ಟಿದ್ದು, ಕಲಾಪ ಆರಂಭಕ್ಕೂ ಮೊದಲೇ ನಗೆ ಚಟಾಕಿ ಹಾರಿಸಿದರು.
ನಗುತ್ತಲೇ ಸದನಕ್ಕೆ ಆಗಮಿಸಿದ ಸ್ಪೀಕರ್ ಯು.ಟಿ. ಖಾದರ್ ಅವರನ್ನು, ಬಿಜೆಪಿ ಸದಸ್ಯರು ಏನು ಖುಷಿಯಾಗಿದ್ದೀರಿ? ಎಂದು ಪ್ರಶ್ನಿಸಿದ್ದಾರೆ. ಸ್ಪೀಕರ್ ಆದ ನಾನು ನಗುತ್ತ ಇದ್ದರೆ ನೀವು ನಗುತ್ತಾ ಇರುತ್ತೀರಿ. ನಾನು ಟೆನ್ಷನ್ ನಲ್ಲಿ ಇದ್ದರೆ ನೀವೂ ಟೆನ್ಷನ್ ಆಗ್ತೀರಿ ಅದಕ್ಕೆ ನಾನು ಯಾವಾಗಲೂ ನಗುತ್ತಾ ಇರುತ್ತೇನೆ ಎಂದರು.
ಇನ್ನು ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ ಎಂಬ ವಿಚಾರವಾಗಿ ಇಂದು ವಿಧಾನಸಭೆ ಹಾಗೂ ವಿಧಾನ ಪರಿಷತ್ ಕಲಾಪದಲ್ಲಿ ಬಿಜೆಪಿ ಸದಸ್ಯರು ಪ್ರತಿಭಟನೆಗೆ ಸಜ್ಜಾಗಿದ್ದಾರೆ.
