ಬೆಂಗಳೂರು : ಕರ್ನಾಟಕದಲ್ಲಿ TET ಪರೀಕ್ಷೆಗೆ ಅರ್ಜಿ ಆಹ್ವಾನಿಸಲಾಗಿದ್ದು, ಡಿ.7 ರಂದು ಶಿಕ್ಷಕರ ಅರ್ಹತಾ ಪರೀಕ್ಷೆ ನಡೆಯಲಿದೆ. ಪರೀಕ್ಷೆಗೆ ಅರ್ಜಿ ಸಲ್ಲಿಸುವ ಸಂಬಂಧ ಅಧಿಕೃತ ಸುತ್ತೋಲೆ ಹೊರಡಿಸಲಾಗಿದೆ. ಇದೀಗ ಹೊಸ ನಿಯಮ ತಿದ್ದುಪಡಿ ಪ್ರಕಟ ಮಾಡಿ ಸುತ್ತೋಲೆ ಹೊರಡಿಸಿದೆ.
ಕರ್ನಾಟಕ ಶಿಕ್ಷಕರ ಅರ್ಹತಾ ಪರೀಕ್ಷೆ-2025ರ ಸಂಬಂಧ ದಿನಾಂಕ:18/10/2025 ರಂದು ಹೊರಡಿಸಲಾದ ಅಧಿಸೂಚನೆಯ ಪುಟ ಸಂಖ್ಯೆ: 06 ರಲ್ಲಿ ಕಂಡಿಕೆಯ ಕ್ರ.ಸಂ.7.2 ಪತ್ರಿಕೆ-1 (1 ರಿಂದ 5ನೇ ತರಗತಿಗಳಿಗೆ) ಅಗತ್ಯವಿರುವ ಕನಿಷ್ಟ ವಿದ್ಯಾರ್ಹತೆ – ರಲ್ಲಿನ ಕೊನೆಯ ಉಪಕಂಡಿಕೆಯಾದ”ಅಥವಾ ಪದವಿಯಲ್ಲಿ ಕನಿಷ್ಠ ಶೇ.50 ರಷ್ಟು ಅಂಕಗಳನ್ನು ಗಳಿಸಿರಬೇಕು ಹಾಗೂ ಬಿ.ಇಡಿ ಪದವಿಯಲ್ಲಿ ತೇರ್ಗಡೆ ಹೊಂದಿರುವವರು ಅಥವಾ ಪ್ರವೇಶ ಪಡೆದು ಅಭ್ಯಾಸ ಮಾಡುತ್ತಿರುವ ಅಭ್ಯರ್ಥಿಗಳು” ಎಂದಿರುವುದನ್ನು ಹಿಂಪಡೆಯಲಾಗಿದೆ.


 
			 
		 
		 
		 
		 Loading ...
 Loading ... 
		 
		