ಐಫೋನ್ ಉತ್ಪಾದನಾ ಸಂಸ್ಥೆ ಆಪಲ್ ಪಾಲುದಾರ ಫಾಕ್ಸ್ ಕಾನ್ ಟೆಕ್ನಾಲಜಿ ಗ್ರೂಪ್, ಬೆಂಗಳೂರು ಸಮೀಪ 700 ದಶಲಕ್ಷ ಡಾಲರ್ ಹೂಡಿಕೆ ಮಾಡಿ ತನ್ನ ಉತ್ಪಾದನಾ ಘಟಕ ಆರಂಭಿಸಲಿದೆ. ಇದರಿಂದ ಒಂದು ಲಕ್ಷ ಹೊಸ ಉದ್ಯೋಗ ಸೃಷ್ಟಿಯಾಗಲಿದೆ ಎಂಬ ನಿರೀಕ್ಷೆಯಲ್ಲಿದ್ದವರಿಗೆ ಶಾಕಿಂಗ್ ಸುದ್ದಿಯೊಂದು ಇಲ್ಲಿದೆ.
ತಾನು ಕರ್ನಾಟಕ ಸರ್ಕಾರದ ಜೊತೆ ಅಂತಹ ಯಾವುದೇ ಖಚಿತ ಮತ್ತು ನಿರ್ಣಾಯಕ ಒಪ್ಪಂದ ಮಾಡಿಕೊಂಡಿಲ್ಲ ಎಂದು ಫಾಕ್ಸ್ ಕಾನ್ ಟೆಕ್ನಾಲಜಿ ಗ್ರೂಪ್ ಸ್ಪಷ್ಟ ಮಾತುಗಳಲ್ಲಿ ಹೇಳಿದ್ದು, ಅಲ್ಲದೆ ಮಾಧ್ಯಮಗಳಲ್ಲಿ ಪ್ರಕಟವಾದ ಉದ್ಯೋಗ ಸೃಷ್ಟಿ ಮತ್ತು ಬಂಡವಾಳ ಮೊತ್ತದ ವಿವರ ಸತ್ಯಕ್ಕೆ ದೂರವಾಗಿದೆ ಎಂದು ಹೇಳಿದೆ.
ತೈವಾನ್ ನ ಪ್ರಮುಖ ತಂತ್ರಜ್ಞಾನ ಸಂಸ್ಥೆಯಾಗಿರುವ ಫಾಕ್ಸ್ ಕಾನ್ ಅಧ್ಯಕ್ಷ ಮತ್ತು ಸಿಇಒ ಯಂಗ್ ಲಿಯು ಭಾರತ ಪ್ರವಾಸದಲ್ಲಿದ್ದು, ಕರ್ನಾಟಕಕ್ಕೆ ಬಂದ ಸಂದರ್ಭದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿಯಾಗಿದ್ದರು. ಇದಾದ ಬಳಿಕ ಮುಖ್ಯಮಂತ್ರಿಗಳು ಈ ಕುರಿತು ಟ್ವೀಟ್ ಮಾಡಿದ್ದು, ಫಾಕ್ಸ್ ಕಾನ್ ಸ್ಪಷ್ಟನೆ ಬಳಿಕ ಹೂಡಿಕೆಯ ನಿರೀಕ್ಷೆ ಹುಸಿಯಾಗಿದೆ.
https://twitter.com/BSBommai/status/1631703053861543936?ref_src=twsrc%5Etfw%7Ctwcamp%5Etweetembed%7Ctwterm%5E1631703053861543936%7Ctwgr%5E02951205d09285bbc41fa0dced6b47805593f02e%7Ctwcon%5Es1_&ref_url=https%3A%2F%2Fwww.livemint.com%2Fnews%2Findia%2Fkarnatakafoxconn-agreement-apple-iphone-to-be-manufactured-in-bengaluru-cm-basavaraj-bommai-promises-1-lakh-jobs-11677903029172.html