ಕಪ್ಪೆಗಳು ಮನೆ ಬಳಿ ಬರದಂತೆ ತಡೆಯಲು ಹೀಗೆ ಮಾಡಿ

ಮಳೆಗಾಲ ಪ್ರಾರಂಭವಾಗುತ್ತಿದ್ದಂತೆ ಕಪ್ಪೆಗಳು, ಕೀಟಗಳ ಹಾವಳಿ ಹೆಚ್ಚಾಗುತ್ತದೆ. ಎಲ್ಲವೂ ಮನೆಯ ಬಳಿ ಬಂದು ಕಿರಿಕಿರಿ ಉಂಟುಮಾಡುತ್ತವೆ. ಕೆಲವರು ಕಪ್ಪೆಗಳನ್ನು ಕಂಡು ಭಯಭೀತರಾಗುತ್ತಾರೆ. ಅದನ್ನು ಓಡಿಸಲು ತುಂಬಾ ಕಷ್ಟಪಡುತ್ತಾರೆ. ಹಾಗಾಗಿ ಈ ಕಪ್ಪೆಗಳು ಮನೆಯ ಬಳಿ ಬರದಂತೆ ತಡೆಯಲು ಮತ್ತು ಅವುಗಳನ್ನು ಓಡಿಸಲು ಈ ಸರಳ ಮಾರ್ಗಗಳನ್ನು ಬಳಸಿ.

  • ಕಪ್ಪೆಗಳು ಮನೆಯ ಬಳಿ ಬರದಂತೆ ತಡೆಯಲು ಉಪ್ಪನ್ನು ಬಳಸಬಹುದು. ಆದರೆ ಕಪ್ಪೆಗಳ ಮೇಲೆ ಉಪ್ಪನ್ನು ಸಿಂಪಡಿಸದಂತೆ ನೋಡಿಕೊಳ್ಳಿ. ಯಾಕೆಂದರೆ ಇದರಿಂದ ಅವುಗಳಿಗೆ ತೊಂದರೆಯಾಗಬಹುದು. ಹಾಗಾಗಿ ಸುತ್ತಮುತ್ತಲಿನ ಸ್ಥಳಗಳಲ್ಲಿ ಸಿಂಪಡಿಸಿ.
  • ಕಪ್ಪೆಗಳನ್ನು ದೂರ ಓಡಿಸಲು ಕಾಫಿ ಕೂಡ ಸಹಕಾರಿಯಾಗಿದೆ. ಹಾಗಾಗಿ ಕಾಫಿ ಪುಡಿಯನ್ನು ಬಿಸಿ ನೀರಿನಲ್ಲಿ ಮಿಕ್ಸ್ ಮಾಡಿ ಮನೆಯ ಸುತ್ತಲೂ ಸಿಂಪಡಿಸಿ.
    -4 ಗ್ಲಾಸ್ ನೀರಿಗೆ ನಿಂಬೆ 3 ಚಮಚ, ವಿನೆಗರ್ 2 ಕಪ್ ಬೆರೆಸಿ ಸ್ಪ್ರೇ ಬಾಟಲಿನಲ್ಲಿ ತುಂಬಿಸಿ ಕಪ್ಪೆ ಬರುವಂತಹ ಸ್ಥಳಗಳಲ್ಲಿ ಸಿಂಪಡಿಸಿ. ಇದರಿಂದ ಕಪ್ಪೆ ತಕ್ಷಣ ಓಡಿಹೋಗುತ್ತದೆ.

ಕಪ್ಪೆಗಳು ಕೀಟಗಳನ್ನು ತಿನ್ನಲು ಹುಲ್ಲುಗಳಿರುವ ಪ್ರದೇಶಕ್ಕೆ ಬರುತ್ತದೆ. ಹಾಗಾಗಿ ನಿಮ್ಮ ಮನೆಯ ಬಳಿ ಹುಲ್ಲು ಬೆಳೆದ ಪ್ರದೇಶದಲ್ಲಿ ಬ್ಲೀಚಿಂಗ್ ಪೌಡರ್ ಅನ್ನು ಸಿಂಪಡಿಸಿ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read