ಕನಸಿನಲ್ಲಿ ಈ ಹೂವು ಕಂಡರೆ ಏನರ್ಥ ಗೊತ್ತಾ….?

ಕಮಲದ ಹೂವು ನಮ್ಮ ಪ್ರಾಚೀನ ವೇದಗಳಲ್ಲಿ, ಪುರಾಣಗಳಲ್ಲಿ ಉಲ್ಲೇಖವಿರುವ ಹೂವು. ಈಗಲೂ ಈ ಹೂವು ಬಳಕೆಯಲ್ಲಿದೆ. ಲಕ್ಷ್ಮಿಯ ಮುಖವನ್ನು ಕಮಲಕ್ಕೆ ಹೋಲಿಸಲಾಗುತ್ತದೆ. ಭಾರತೀಯ ಸಂಸ್ಕತಿಯಲ್ಲಿ ಕಮಲಕ್ಕೆ ವಿಶೇಷ ಸ್ಥಾನವಿದೆ. ಕಮಲದ ಹೂವು ಸೃಷ್ಟಿಯ ಸಂಕೇತ. ಕಮಲದ ಹೂವನ್ನು ಹೆಣ್ಣಿನ ಗರ್ಭಕ್ಕೆ ಹೋಲಿಸಲಾಗಿದೆ.

ವಿಷ್ಣುವಿನ ನಾಭಿಯಿಂದ ಬಳ್ಳಿಯಂತೆ ಕಮಲದ ಹೂವು ಹೊಮ್ಮಿ ಅದರ ಮೇಲೆ ಬ್ರಹ್ಮದೇವ ಕುಳಿತಿರುವ ಚಿತ್ರವನ್ನು ಗಮನಿಸಿರಬಹುದು. ಕಮಲ ಸೃಷ್ಠಿಯ ಸಂಕೇತ. ಹಾಗಾಗಿ ಕನಸಿನಲ್ಲಿ ಕಮಲದ ಹೂವು ಕಂಡರೆ ಸಂತಾನ ಪ್ರಾಪ್ತಿಯಾಗುತ್ತದೆ ಎಂಬ ನಂಬಿಕೆ ಇದೆ. ಸಂತಾನಕ್ಕಾಗಿ ಹಂಬಲಿಸುವ ದಂಪತಿಗಳು ಕಮಲದ ಹೂವಿಂದ ಪೂಜಿಸಿದರೆ ಶೀಘ್ರ ಫಲ ದೊರೆಯುತ್ತದೆ ಎಂಬ ನಂಬಿಕೆ ಇದೆ.

ಕಮಲದ ಹೂವು ಪೂಜೆಗಷ್ಟೇ ಅಲ್ಲ, ಔಷಧಿಯಾಗಿ ಬಳಕೆಯಲ್ಲಿದೆ. ಕಮಲದ ಹೂವಿನ ಪ್ರತಿ ಭಾಗವೂ ಔಷಧೀಯ ಗುಣಗಳನ್ನು ಹೊಂದಿರುವುದು ವಿಶೇಷ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read