ಕಂಠಪೂರ್ತಿ ಕುಡಿದು ಬೆಳಗಿನ ಜಾವ 2 ಗಂಟೆಗೆ ಬಾಸ್ ​​ಗೆ ಮೆಸೇಜ್..!

Boss Receives Late-Night Drunk Text From Employee, Their Wholesome Chat Is Now Viral

ಕೈ ತುಂಬಾ ಸಂಬಳ ಸಿಗೋ, ಒಂದು ಒಳ್ಳೆ ಜಾಬ್ ಇದು ಅನೇಕ ಯುವಕರ ಕನಸು. ಅದಕ್ಕಾಗಿ ಅದೆಷ್ಟೊ ಕಂಪನಿಗಳನ್ನ ಸುತ್ತು ಹಾಕಿರ್ತಾರೆ. ಕೆಲವರು ಅಂದುಕೊಂಡಿರೋ ಹಾಗೆಯೇ ಕೆಲಸ ಸಿಕ್ಕರೆ, ಇನ್ನು ಕೆಲವರು ಸಿಕ್ಕ ಕೆಲಸದಲ್ಲೇ ತೃಪ್ತರಾಗಿ ಬಿಡುತ್ತಾರೆ. ಕೆಲಸ ಸಿಕ್ಕರಷ್ಟೆ ಮುಗಿಯೊಲ್ಲ, ಕಂಪನಿ ಬಾಸ್ ಕೂಡ ಖುಷಿ-ಖುಷಿ ಆಗಿರಬೇಕು. ಆಗಲೇ ಟೈಂ ಟು ಟೈಮ್ ಇನ್ಕ್ರಿಮೆಂಟ್, ಪ್ರಮೋಶನ್, ರಜೆ ಸಿಗೋದು. ಇಲ್ಲಾ ಅಂದ್ರೆ ಅದೇ ಬಾಸ್ ಕಿರಿಕಿರಿ ಮಿಸ್ಸೇ ಇಲ್ಲ.

ಇತ್ತೀಚೆಗೆ ಸೋಶಿಯಲ್ ಮಿಡಿಯಾದಲ್ಲಿ ಉದ್ಯೋಗಿ ಒಬ್ಬ ತನ್ನ ಬಾಸ್​​ಗೆ ಮಾಡಿರುವ ಮೆಸೇಜ್ ನೋಡಿ ಎಲ್ಲ ದಂಗಾಗಿ ಹೋಗಿದ್ದಾರೆ. ಸಾಮಾನ್ಯವಾಗಿ ಬಾಸ್ ಕೊಡುವ ಕಿರಿಕಿರಿಗೆ ಉದ್ಯೋಗಿಗಳು ಬೈಯ್ಯೋದೇ ಹೆಚ್ಚು. ಆದರೆ ಇಲ್ಲಿ ಎಲ್ಲ ಉಲ್ಟಾ ಪಲ್ಟಾ ಯಾಕಂದ್ರೆ. ಈ ಉದ್ಯೋಗಿ ಫುಲ್ ಟೈಟ್ ಆಗಿ ಬಾಸ್​​ನ ಹೊಗಳಿ ಹೊಗಳಿ ಮೆಸೇಜ್ ಮಾಡಿದ್ದ.

ಈ ಉದ್ಯೋಗಿ ಬೆಳಗಿನ ಜಾವ 2 ಗಂಟೆಗೆ ತನ್ನ ಬಾಸ್​ಗೆ ಮೆಸೇಜ್ ಮಾಡಿದ್ದ. ಕಂಠಪೂರ್ತಿ ಕುಡಿದವನಿಗೆ ಸಮಯದ ಅರಿವಾದರೂ ಹೇಗಿರಬೇಕು ಅಲ್ವಾ..! ಅಷ್ಟಕ್ಕೂ ಆ ಮೆಸೇಜ್ ಏನಾಗಿತ್ತು ಅಂದ್ರೆ, ’ಬಾಸ್, ನಾನು ಕುಡಿದಿದ್ದೇನೆ. ಆದರೂ, ನಾನು ನಿಮಗೆ ಒಂದು ವಿಚಾರ ಹೇಳಲೇ ಬೇಕು, ನೀವು ನನ್ನ ಕೆಲಸದಲ್ಲಿ ನಂಬಿಕೆ ಇಟ್ಟಿದ್ದಕ್ಕೆ ಧನ್ಯವಾದ. ನಾನು ಇನ್ನಷ್ಟು ಹಾರ್ಡ್​ವರ್ಕ್​ ಮಾಡುವುದಕ್ಕೆ ನೀವು ನನ್ನಲ್ಲಿ ಉತ್ಸಾಹ ತುಂಬಿದ್ದಿರಾ ! ಇಂತಹ ಉತ್ತಮ ಮಾರ್ಗದರ್ಶಕರು ತುಂಬಾ ಅಪರೂಪ. ನನಗೆ ನಿಮ್ಮಂತಹವರು ಬಾಸ್ ಆಗಿರುವುದು ಅದೃಷ್ಟ. ನಿಮ್ಮ ಬಗ್ಗೆ ನಾನು ಹೇಳುತ್ತಿರುವುದು ತುಂಬಾ ಕಡಿಮೆ. ಆದರೆ ನಿಮ್ಮ ಬಗ್ಗೆ ನನಗೆ ಅಪಾರ ಗೌರವವಿದೆ.’ ಎಂದು ಸಂದೇಶ ಟೈಪ್ ಮಾಡಿ ಕಳುಹಿಸಿದ್ದಾರೆ.

ಸಿದ್ದಾಂತ್ ಅನ್ನುವವರು ತಮ್ಮ ಟ್ವಿಟ್ಟರ್ ಅಕೌಂಟ್​​ನಲ್ಲಿ ಈ ಚಾಟ್ ಮೆಸೇಜ್​ನ್ನ ಪೋಸ್ಟ್ ಮಾಡಿದ್ದಾರೆ. ಕುಡಿದಾಗ ಮಾಜಿ ಪ್ರೇಮಿಗಳು ಈ ರೀತಿ ಸಂದೇಶಗಳು ಕಳುಹಿಸುವುದು ಸಾಮಾನ್ಯ. ಆದರೆ ಯಾವತ್ತಾದ್ರೂ ನಿಮಗೂ ಈ ರೀತಿ ಯಾರಿಂದಾದರೂ ಸಂದೇಶಗಳು ಸಿಕ್ಕಿದೆಯಾ? ಎಂದು ಶೀರ್ಷಿಕೆಯಲ್ಲಿ ಬರೆದುಕೊಂಡಿದ್ಧಾರೆ.

ನೆಟ್ಟಿಗರು ಈ ಪೋಸ್ಟ್ ನೋಡಿ ದಂಗಾಗಿ ಹೋಗಿದ್ದಾರೆ. ಬಾಸ್​ಗೆ ಹೀಗೂ ಮೆಸೇಜ್ ಮಾಡ್ಬಹುದಾ ಎಂದು ತಲೆಕೆರೆದುಕೊಂಡು ಯೋಚಿಸ್ತಿದ್ದಾರೆ.

https://twitter.com/siddhantmin/status/1687306842064756736?ref_src=twsrc%5Etfw%7Ctwcamp%5Etweetembed%7Ctwterm%5E1687306842064756736%7Ctwgr%5E6c8110b3faedc4d69aed24deacb8439de6f227c6%7Ctwcon%5Es1_&ref_url=https%3A%2F%2Fwww.ndtv.com%2Foffbeat%2Fboss-receives-late-night-drunk-text-from-employee-their-wholesome-chat-is-now-viral-4272971

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read