ಒಳ ಉಡುಪು ಆರಿಸಿಕೊಳ್ಳುವಾಗ ಈ ತಪ್ಪುಗಳನ್ನು ಮಾಡದಿರಿ

ಜನರು ಸಾಕಷ್ಟು ವಿಚಾರಗಳ ಬಗ್ಗೆ ಮುಕ್ತವಾಗಿ ಮಾತನಾಡುತ್ತಾರೆ. ಆದರೆ ಒಳ ಉಡುಪುಗಳ ವಿಚಾರದಲ್ಲಿ ಸಾರ್ವಜನಿಕವಾಗಿ ಮಾತನಾಡೋದು ಅನೇಕರಿಗೆ ಮುಜುಗರ ತರಿಸುವಂತಹ ವಿಚಾರವಾಗಿದೆ. ಆರೋಗ್ಯದ ವಿಚಾರ ಎಂದು ಬಂದಾಗ ನಿಮ್ಮ ಉಳ ಉಡುಪುಗಳ ಬಗಗೆಗಿನ ಕಾಳಜಿ ಕೂಡ ಪ್ರಮುಖ ಪಾತ್ರ ವಹಿಸುತ್ತದೆ. ಹೀಗಾಗಿ ಒಳ ಉಡುಪುಗಳನ್ನ ಧರಿಸುವ ವಿಚಾರದಲ್ಲಿ ನಾವು ಮಾಡುವ ತಪ್ಪುಗಳು ಎಂತದ್ದು ಹಾಗೂ ಇದರಿಂದ ಆರೋಗ್ಯದ ಮೇಲೆ ಉಂಟಾಗುವ ಪರಿಣಾಮ ಏನು ಅನ್ನೋದರ ಬಗ್ಗೆ ಇಲ್ಲಿದೆ ಮಾಹಿತಿ:

ಒಂದೇ ಉಳ ಉಡುಪನ್ನ ಪದೇ ಪದೇ ಧರಿಸುವುದು : ಒಳ ಉಡುಪನ್ನ ಪ್ರತಿದಿನ ಸ್ವಚ್ಛಗೊಳಿಸೋದನ್ನ ಬಿಟ್ಟು ಅದೇ ಒಳ ಉಡುಪುಗಳನ್ನ ಪದೇ ಪದೇ ಧರಿಸೋದ್ರಿಂದ ನೀವು ಸೋಂಕಿನ ದಾಳಿಗೆ ಬಹುಬೇಗ ತುತ್ತಾಗಲಿದ್ದೀರಿ. ಈ ರೀತಿಯ ದುರಾಭ್ಯಾಸದಿಂದ ಬ್ಯಾಕ್ಟೀರಿಯಾ ಹಾಗೂ ಶಿಲೀಂದ್ರ ಸೋಂಕು ನಿಮ್ಮನ್ನ ಕಾಡಲಿದೆ.

ಬೆವರುಯುಕ್ತ ಒಳ ಉಡುಪುಗಳ ಬಳಕೆ : ಒಂದೇ ಒಳ ಉಡುಪನ್ನ ಹೆಚ್ಚು ಸಮಯ ಹಾಕಿಕೊಳ್ಳೋದ್ರಿಂದ, ಬೆವರು ಆಗಿದೆ ಎಂದು ತಿಳಿದರೂ ಸಹ ಒಳ ಉಡುಪನ್ನ ಬದಲಾವಣೆ ಮಾಡದೇ ಇರೋದು ಸಹ ನಾವು ಮಾಡುವ ಬಹು ದೊಡ್ಡ ತಪ್ಪುಗಳಲ್ಲಿ ಒಂದಾಗಿದೆ. ನಿಮ್ಮ ಗುಪ್ತಾಂಗ ಬೆವರೋದ್ರಿಂದ ಶಿಲೀಂದ್ರ ಸೋಂಕು ಉಂಟಾಗುವ ಸಾಧ್ಯತೆ ಹೆಚ್ಚಿರುತ್ತದೆ. ಇದರಿಂದ ನಿಮಗೆ ಗುಪ್ತಾಂಗ ತುರಿಕೆ ಸಮಸ್ಯೆ ಕಾಣಿಸಿಕೊಳ್ಳಲಿದೆ. ಹೀಗಾಗಿ ಜಿಮ್​ ಮಾಡಿದ ಬಳಿಕ ಒಳ ಉಡುಪು ಬದಲಾಯಿಸೋದನ್ನ ಮರೆಯಬೇಡಿ.

ಬಿಗಿಯಾದ ಒಳ ಉಡುಪು ಧರಿಸುವುದು : ಒಳ ಉಡುಪು ಧರಿಸುವ ವಿಚಾರದಲ್ಲಿ ನಾವು ಮಾಡುವ ತಪ್ಪುಗಳಲ್ಲಿ ಇದೂ ಸಹ ಒಂದು. ಬಿಗಿಯಾದ ಒಳ ಉಡುಪು ಧರಿಸೋದ್ರಿಂದ ಚರ್ಮದ ಆರೋಗ್ಯಕ್ಕೆ ಹಾನಿ ಉಂಟಾಗಲಿದೆ. ರಕ್ತದ ಹರಿವಿಗೆ ಇದು ತೊಂದರೆ ಉಂಟು ಮಾಡುತ್ತದೆ. ನರಗಳು ಸಹ ಸಂಕುಚಿತಗೊಳ್ಳುತ್ತದೆ. ಹೀಗಾಗಿ ನಿಮ್ಮ ಅಳತೆಗೆ ಸೂಕ್ತವಾದ ಒಳ ಉಡುಪನ್ನೇ ಧರಿಸಿ.

ಫ್ಯಾನ್ಸಿ ಬಟ್ಟೆಗಳಿಂದ ತಯಾರಾದ ಒಳ ಉಡುಪು ಧರಿಸುವುದು : ಸ್ಯಾಟಿನ್​, ಲೇಸ್​ ಹಾಗೂ ಸ್ಪ್ಯಾಂಡೆಕ್ಸ್​ಗಳು ನಿಮ್ಮ ಯೋನಿಯ ಆರೋಗ್ಯವನ್ನ ಹಾಳುಗೆಡುವಬಹುದು. ಇದು ತೇವಾಂಶ ಬಿಡುಗಡೆಯಾಗೋದನ್ನ ನಿಯಂತ್ರಿಸುತ್ತದೆ. ಹೀಗಾಗಿ ಚರ್ಮಕ್ಕೆ ಅನುಕೂಲಕರ ಎನಿಸುವ ಬಟ್ಟೆಯಿಂದ ತಯಾರಾದ ಒಳ ಉಡುಪುಗಳೇ ನಿಮ್ಮ ಆಯ್ಕೆಯಾಗಿರಲಿ.

ಸುಗಂಧಯುಕ್ತ ಡಿಟರ್ಜೆಂಟ್​ಗಳಿಂದ ಒಳ ಉಡುಪುಗಳನ್ನ ತೊಳೆಯೋದು : ಸುಗಂಧಯುಕ್ತ ಡಿಟರ್ಜಂಟ್​ಗಳಿಂದ ನಿಮ್ಮ ಒಳ ಉಡುಪುಗಳನ್ನ ಸ್ವಚ್ಛಗೊಳಿಸೋದು ಸಹ ಯೋನಿಯ ಅನಾರೋಗ್ಯಕ್ಕೆ ಕಾರಣವಾಗಲಿದೆ. ಇದರಲ್ಲಿ ಬಳಕೆ ಮಾಡುವ ಅಪಾಯಕಾರಿ ರಾಸಾಯನಿಕಗಳು ನಿಮ್ಮ ಚರ್ಮದ ಮೇಲೆ ಗಂಭೀರ ಪರಿಣಾಮ ಉಂಟು ಮಾಡುವ ಸಾಧ್ಯತೆ ಇದೆ.

ಥಾಂಗ್ಸ್​ ಧರಿಸುವುದು : ಥಾಂಗ್ಸ್​ಗಳನ್ನ ಧರಿಸಿದಾಗ ಆರಾಮದಾಯಕ ಎನಿಸುವುದು ಎಷ್ಟು ಸತ್ಯವೋ ಇದರಿಂದ ಗುಪ್ತಾಂಗಗಳ ಆರೋಗ್ಯಕ್ಕೆ ಹಾನಿ ಉಂಟಾಗುತ್ತದೆ ಅನ್ನೋದು ಸಹ ಅಷ್ಟೇ ಸತ್ಯ, ಥಾಂಗ್ಸ್​ಗಳ ಬಳಕೆಯಿಂದ ಮೂತ್ರ ಸಂಬಂಧಿ ಸೋಂಕು ಉಂಟಾಗುತ್ತದೆ. ಹೀಗಾಗಿ ನಿಮ್ಮ ಚರ್ಮಗಳಿಗೆ ಉಸಿರಾಡುವಷ್ಟು ಅವಕಾಶ ನೀಡುವಂತಹ ಒಳ ಉಡುಪುಗಳೇ ನಿಮ್ಮ ಆಯ್ಕೆಯಾಗಿರಲಿ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read