ಒತ್ತಡ ನಿವಾರಿಸಲು ಇದು ಬೆಸ್ಟ್‌ ಪ್ಲೇಸ್

ಅನೇಕ ಜನರು ಆರೋಗ್ಯದತ್ತ ಗಮನ ಹರಿಸುತ್ತಿದ್ದಾರೆ. ಪ್ರಕೃತಿಯೊಂದಿಗೆ ಸಂಪರ್ಕ ಸಾಧಿಸಲು ಮತ್ತು ತಾಜಾತನವನ್ನು ಅನುಭವಿಸಲು ಹಲವರು ಪ್ರವಾಸ ಕೈಗೊಳ್ಳಲು ಇಷ್ಟಪಡುತ್ತಾರೆ.

ಒತ್ತಡ ಮತ್ತು ನೋವನ್ನು ನಿವಾರಿಸಲು ಹಾಂಗ್ ಕಾಂಗ್‌ನ ಹಕ್ಕಾ ಗ್ರಾಮವು ಪ್ರವಾಸಿಗರ ಆಕರ್ಷಣೀಯ ಕೇಂದ್ರ ಬಿಂದುವಾಗಿದೆ. ಪ್ರಕೃತಿಯ ರುದ್ರರಮಣೀಯ ಸೌಂದರ್ಯ ಮತ್ತು ಪ್ರಶಾಂತವಾದ ಕಡಲತೀರಗಳು ಮತ್ತು ಸಮುದ್ರ ತೀರದಿಂದ ಹುಲ್ಲುಗಾವಲುಗಳು ಮತ್ತು ಪರ್ವತ ಶ್ರೇಣಿಗಳು ನಗರದ ಗದ್ದಲದಿಂದ ಕೇವಲ ಹೆಜ್ಜೆ ದೂರದಲ್ಲಿವೆ.

ಲೈ ಚಿ ವೋ, 300 ವರ್ಷಗಳ ಇತಿಹಾಸ ಹೊಂದಿರುವ ಆಕರ್ಷಕ ಹಳೆಯ ಹಕ್ಕಾ ಗ್ರಾಮ ಆಕರ್ಷಣೆಯ ಕೇಂದ್ರ ಬಿಂದು. ಲೈ ಚಿ ವೋ 200ಕ್ಕೂ ಹೆಚ್ಚು ಶ್ರೀಮಂತ ಪರ್ವತ ಕುಟೀರಗಳ ಗ್ರಾಮವಾಗಿದೆ. ಸೊಂಪಾದ ಫಂಗ್ ಶೂಯಿ ಮರ ಮತ್ತು ಮ್ಯಾಂಗ್ರೋವ್ ಅರಣ್ಯದಿಂದ ಆವೃತವಾಗಿದೆ ಮತ್ತು ಇದು ಹಾಂಗ್ ಕಾಂಗ್‌ನ ಅತ್ಯಂತ ಹಳೆಯ ಮತ್ತು ಹೆಚ್ಚು ಸಂರಕ್ಷಿಸಲ್ಪಟ್ಟ ಗ್ರಾಮೀಣ ವಸಾಹತುಗಳಾಗಿವೆ.

ಸಾಂಸ್ಕೃತಿಕ ಪರಂಪರೆಯ ಸಂರಕ್ಷಣೆಯನ್ನು ಉತ್ತೇಜಿಸಲು, ನಗರವು ಯುನೆಸ್ಕೋದ ಪ್ರತಿಷ್ಠಿತ 2020ರ ಸುಸ್ಥಿರ ಅಭಿವೃದ್ಧಿಗಾಗಿ ವಿಶೇಷ ಮಾನ್ಯತೆ ಪ್ರಶಸ್ತಿಯನ್ನು ಪಡೆದುಕೊಂಡಿದೆ. ವಿವಿಧ ರೀತಿಯ ಸಸ್ತನಿಗಳು ಮತ್ತು ಚಿಟ್ಟೆಗಳಿಗೆ ನೆಲೆಯಾಗಿರುವ ಲೈ ಚಿ ವೋ ನೇಚರ್ ಟ್ರಯಲ್‌ನ ಮರದ ಅಂಚಿನಲ್ಲಿ ಅಡ್ಡಾಡುತ್ತಿದ್ದರೆ ಅದರ ಮಜಾನೇ ಬೇರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read