ಐದಾರು ಮಂದಿಗೆ ಟಿಕೆಟ್ ಕೈತಪ್ಪುವ BSY ಹೇಳಿಕೆಯಿಂದ ಬಿಜೆಪಿ ಶಾಸಕರಿಗೆ ಟೆನ್ಶನ್; ಪರ್ಯಾಯ ಮಾರ್ಗಗಳತ್ತ ಚಿಂತನೆ

ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರು ಇಂದು ಸಿಡಿಸಿರುವ ಹೊಸ ಬಾಂಬ್ ಒಂದು ಹಾಲಿ ಬಿಜೆಪಿ ಶಾಸಕರಿಗೆ ಟೆನ್ಶನ್ ತಂದೊಡ್ಡಿದೆ. ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಐದಾರು ಮಂದಿ ಹಾಲಿ ಶಾಸಕರಿಗೆ ಟಿಕೆಟ್ ನೀಡುವುದಿಲ್ಲ ಎಂದು ಯಡಿಯೂರಪ್ಪನವರು ಹೇಳಿದ್ದಾರೆ. ಹೀಗಾಗಿ ಈ ಪಟ್ಟಿಯಲ್ಲಿ ತಮ್ಮ ಹೆಸರಿದೆಯಾ ಎಂಬ ಆತಂಕ ಹಾಲಿ ಶಾಸಕರನ್ನು ಕಾಡುತ್ತಿದೆ.

ಇತ್ತೀಚೆಗೆ ನಡೆದ ಗುಜರಾತ್ ವಿಧಾನಸಭಾ ಚುನಾವಣೆ ವೇಳೆ ಹಲವು ಹಾಲಿ ಶಾಸಕರಿಗೆ ಟಿಕೆಟ್ ನೀಡದೆ ಹೊಸ ಮುಖಗಳಿಗೆ ಬಿಜೆಪಿ ಮಣೆ ಹಾಕಿದ್ದು ಇದರಲ್ಲಿ ಯಶಸ್ಸನ್ನು ಸಾಧಿಸಿತ್ತು. ಹೀಗಾಗಿ ಕರ್ನಾಟಕದಲ್ಲೂ ಈ ಪ್ರಯೋಗಕ್ಕೆ ಮುಂದಾದರೆ ನಮ್ಮ ಗತಿ ಏನು ಎಂಬ ಚಿಂತೆ ಈ ಶಾಸಕರುಗಳಿಗಿದೆ. ಇದೀಗ ಕಲಬುರಗಿಯಲ್ಲಿ ಯಡಿಯೂರಪ್ಪ ನೀಡಿರುವ ಹೇಳಿಕೆ ಅವರುಗಳ ಚಿಂತೆ ಮತ್ತಷ್ಟು ಹೆಚ್ಚುವಂತೆ ಮಾಡಿದೆ.

ಯಡಿಯೂರಪ್ಪನವರು ಬಿಜೆಪಿ ಸಂಸದೀಯ ಮಂಡಳಿಯ ಸದಸ್ಯರಾಗಿರುವ ಕಾರಣ ಅವರಿಗೆ ಈ ಕುರಿತ ಮಾಹಿತಿ ಇರಬಹುದು ಎನ್ನಲಾಗಿದ್ದು, ಹೀಗಾಗಿ ಒಂದೊಮ್ಮೆ ಕೊನೆ ಕ್ಷಣದಲ್ಲಿ ಟಿಕೆಟ್ ಕೈತಪ್ಪಿದರೆ ಏನು ಮಾಡಬೇಕು ಎಂಬ ಚಿಂತನೆಯನ್ನು ಈಗಾಗಲೇ ಕೆಲವರು ಮಾಡುತ್ತಿದ್ದಾರೆ ಎಂದು ಹೇಳಲಾಗಿದೆ. ಅಂತಿಮ ಗಳಿಗೆಯಲ್ಲಿ ಇತರೆ ಪಕ್ಷದಿಂದಲೂ ಟಿಕೆಟ್ ಸಿಗುವ ಅವಕಾಶ ಇರದ ಕಾರಣ ಉನ್ನತ ನಾಯಕರನ್ನು ಹಿಡಿದು ಟಿಕೆಟ್ ಗಟ್ಟಿ ಮಾಡಿಕೊಳ್ಳುವ ಆಲೋಚನೆಯೂ ಹಲವರಿಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read