ಏಕಾಏಕಿ ಮುಗಿಲೆತ್ತರಕ್ಕೆ ಎದ್ದ ಸುಳಿಗಾಳಿಗೆ ಬೆಚ್ಚಿಬಿದ್ದ ಜನ…!

ಶನಿವಾರದಂದು ಕಾರ್ಕಳದ ಗಾಂಧಿ ಮೈದಾನದಲ್ಲಿ ಏಕಾಏಕಿ ಸುಳಿಗಾಳಿ ಕಾಣಿಸಿಕೊಂಡಿದ್ದು, ಮುಗಿಲನ್ನು ಚುಂಬಿಸುವಂತಿದ್ದ ಇದರ ಅವತಾರ ಕಂಡು ಜನ ಬೆಚ್ಚಿಬಿದ್ದಿದ್ದಾರೆ. ಸುಮಾರು ಹತ್ತು ನಿಮಿಷಗಳ ಕಾಲ ಈ ಸುಳಿಗಾಳಿ ಮೈದಾನದ ಒಂದು ಬದಿಯಲ್ಲಿ ಸುಳಿದಾಡಿದೆ.

ಸ್ಥಳದಲ್ಲಿ ಕ್ರಿಕೆಟ್ ಆಡುತ್ತಿದ್ದ ಆಟಗಾರರು ಹಾಗೂ ಸಾರ್ವಜನಿಕರು ಇದನ್ನು ಕುತೂಹಲದಿಂದ ವೀಕ್ಷಿಸಿದ್ದು, ಕೆಲವರು ತಮ್ಮ ಮೊಬೈಲ್ ನಲ್ಲಿ ರೆಕಾರ್ಡ್ ಮಾಡಿಕೊಂಡಿದ್ದಾರೆ. ಈ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ಯಾವುದೇ ಒಂದು ಪ್ರದೇಶದಲ್ಲಿ ತಾಪಮಾನ ತೀವ್ರವಾಗಿ ಏರಿಕೆಯಾದ ಸಂದರ್ಭದಲ್ಲಿ ಸಾಂದ್ರತೆ ಕುಸಿತಗೊಳ್ಳುವ ಪರಿಣಾಮ ಎಲ್ಲ ದಿಕ್ಕುಗಳಿಂದಲೂ ಗಾಳಿಯು ಕಡಿಮೆ ಒತ್ತಡ ಸೃಷ್ಟಿಯಾಗುವ ಪ್ರದೇಶಕ್ಕೆ ನುಗ್ಗಿದ ವೇಳೆ ಈ ರೀತಿ ವಿದ್ಯಮಾನ ಸಂಭವಿಸುತ್ತದೆ ಎನ್ನಲಾಗಿದೆ.

https://youtu.be/Mxjoiie2a8M

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read