ಸೌಂದರ್ಯ ಹೆಚ್ಚಿಸುತ್ತೆ ಎಳ್ಳೆಣ್ಣೆ

ಎಳ್ಳೆಣ್ಣೆ ಆರೋಗ್ಯಕ್ಕೆ ಉತ್ತಮವಾದದ್ದು. ಅದರ ಜೊತೆಗೆ ಇದನ್ನು ಚರ್ಮ ಮತ್ತು ಕೂದಲಿನ ಆರೋಗ್ಯಕ್ಕೂ ಕೂಡ ಬಳಸಬಹುದು. ಇದರಲ್ಲಿರುವ ಪೋಷಕಾಂಶಗಳು ಚರ್ಮ ಮತ್ತು ಕೂದಲನ್ನು ಆರೋಗ್ಯವಾಗಿಡುತ್ತದೆ.

*ಎಳ್ಳೆಣ್ಣೆಯನ್ನು ಸನ್ ಸ್ಕ್ರೀನ್ ನಂತೆ ಬಳಸಬಹುದು. ಯಾಕೆಂದರೆ ಇದರಲ್ಲಿರುವ ವಿಟಮಿನ್ ಇ ಸೂರ್ಯನ ಕಿರಣಗಳಿಂದಾಗುವ ಹಾನಿಯನ್ನು ತಡೆಯುತ್ತದೆ.

*ಇದರಲ್ಲಿರುವ ಕೊಬ್ಬಿನಾಮ್ಲ ಮತ್ತು ವಿಟಮಿನ್ ಇ ಸೇರಿ ಉತ್ತಮ ಮಾಯಿಶ್ಚರೈಸರ್ ಆಗಿ ಕೆಲಸ ಮಾಡುತ್ತದೆ. ಹಾಗಾಗಿ ನೈಟ್ ಕ್ರೀಂ ಆಗಿ ಇದನ್ನು ಬಳಸಬಹುದು.

*ಎಳ್ಳೆಣ್ಣೆಯನ್ನು ಕೂದಲಿಗೆ ಹಚ್ಚಿದರೆ ಇದು ಕಂಡಿಷನರ್ ಆಗಿ ಕಾರ್ಯ ನಿರ್ವಹಿಸುತ್ತದೆ. ಮತ್ತು ಕೂದಲು ಕವಲೊಡೆಯುವುದನ್ನು ತಡೆಯುತ್ತದೆ.

*ಸೂರ್ಯ ಕಿರಣಗಳಿಂದ ನೆತ್ತಿ ಒಣಗಿದ್ದರೆ ಎಳ್ಳೆಣ್ಣೆ ಹಚ್ಚುವುದರಿಂದ ನೆತ್ತಿ ತೇವಾಂಶದಿಂದ ಕೂಡಿರುತ್ತದೆ. ಮತ್ತು ಇದರಲ್ಲಿರುವ ಬ್ಯಾಕ್ಟೀರಿಯಾ ಮತ್ತು ಶಿಲೀಂಧ್ರನಾಶಕ ಗುಣಗಳು ನೆತ್ತಿ ಡ್ರೈ ಆಗದಂತೆ ತಡೆಯುತ್ತದೆ.

*ಇದರಲ್ಲಿ ಅಲರ್ಜಿ ವಿರೋಧಿ ಗುಣಗಳಿದ್ದು, ಇದು ಚರ್ಮವನ್ನು ಇನ್ ಫೆಕ್ಷನ್ ನಿಂದ ಕಾಪಾಡುತ್ತದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read