ಎಲ್ಲ ವ್ಯವಹಾರ ಪ್ರಕ್ರಿಯೆಗಳಿಗೆ ಪಾನ್​ ಕಾರ್ಡ್ ಒಂದೇ ಗುರುತಿನ ಚೀಟಿ; ಇಲ್ಲಿದೆ ಡಿಟೇಲ್ಸ್

ನವದೆಹಲಿ: ಎಲ್ಲಾ ವ್ಯವಹಾರಗಳನ್ನು ಸುಗಮಗೊಳಿಸುವ ನಿಟ್ಟಿನಲ್ಲಿ ಮುಂಬರುವ ಬಜೆಟ್​ನಲ್ಲಿ ಶಾಶ್ವತ ಖಾತೆ ಸಂಖ್ಯೆಯನ್ನು (PAN) ಏಕೈಕ ವ್ಯಾಪಾರ ಗುರುತಿನ ಮಾಡಲು ಕಾನೂನು ಚೌಕಟ್ಟನ್ನು ಪರಿಚಯಿಸುವ ಸಾಧ್ಯತೆ ಇದೆ. ಈ ಮೂಲಕ ಎಲ್ಲಾ ವ್ಯವಹಾರಗಳಿಗೆ ಪ್ಯಾನ್​ಕಾರ್ಡ್​ ಲಿಂಕ್​ ಮಾಡುವ ಅವಕಾಶವಿದೆ.

ಪ್ರಸ್ತುತ ರಾಜ್ಯ ಮತ್ತು ಕೇಂದ್ರ ಮಟ್ಟದಲ್ಲಿ ಕನಿಷ್ಠ 20 ವಿಭಿನ್ನ ಗುರುತಿಸುವಿಕೆಗಳು ಅಸ್ತಿತ್ವದಲ್ಲಿವೆ. ಅವುಗಳೆಂದರೆ ಸರಕು ಮತ್ತು ಸೇವಾ ತೆರಿಗೆ ಗುರುತಿನ ಸಂಖ್ಯೆ (GSTIN), ತೆರಿಗೆದಾರರ ಗುರುತಿನ ಸಂಖ್ಯೆ, ತೆರಿಗೆ ಕಡಿತ ಖಾತೆ ಸಂಖ್ಯೆ, ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ, ಕಾರ್ಪೊರೇಟ್ ಗುರುತಿನ ಸಂಖ್ಯೆ ಇತ್ಯಾದಿ. ಆದರೆ ಇನ್ನುಮುಂದೆ ಇವೆಲ್ಲವುಗಳಿಗೆ ಏಕೈಕ ಪ್ಯಾನ್​ಕಾರ್ಡ್​ ಬಳಕೆ ಮಾಡುವ ಬಗ್ಗೆ ಚಿಂತನೆ ನಡೆಸಲಾಗಿದೆ ಎನ್ನಲಾಗಿದೆ.

ಹೀಗೆ ಮಾಡಿದರೆ ಇದು ವ್ಯವಹಾರವನ್ನು ಸುಧಾರಿಸಬಲ್ಲದು ಎನ್ನಲಾಗಿದೆ. ಈ ಬದಲಾವಣೆಗಳನ್ನು ಕಾರ್ಯಗತಗೊಳಿಸಲು ಇಲಾಖೆಗಳಿಗೆ ಒಂದು ವರ್ಷದವರೆಗೆ ಅವಕಾಶ ನೀಡಲಾಗುತ್ತದೆ. ಅಂದರೆ ಎಲ್ಲಾ ರೀತಿಯ ಕ್ಲಿಯರೆನ್ಸ್‌ಗಳು, ನೋಂದಣಿ, ಪರವಾನಗಿಗಳು ಇತ್ಯಾದಿಗಳಿಗೆ ಪ್ಯಾನ್ ಅನ್ನು ಪ್ರಾಥಮಿಕ ಗುರುತಿಸುವಿಕೆಯಾಗಿ ಅಳವಡಿಸಿಕೊಳ್ಳಲು ಅವರಿಗೆ ಒಂದು ವರ್ಷದ ಕಾಲಾವಕಾಶ ನೀಡಲಾಗುವುದು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read