ಉದ್ಯೋಗದಲ್ಲಿ ಯಾವುದೇ ಸಮಸ್ಯೆ ಇದ್ದರೂ ಪರಿಹಾರಕ್ಕಾಗಿ ಭಾನುವಾರ ಈ ಗಿಡಕ್ಕೆ ಹಾಕಿ 11 ಪ್ರದಕ್ಷಿಣೆ

ನವಗ್ರಹಗಳಲ್ಲಿ ಒಂದೊಂದು ಗ್ರಹಕ್ಕೂ ಒಂದೊಂದು ಧಾನ್ಯ, ಬಣ್ಣ ಹಾಗೆ ವೃಕ್ಷ ಇರೋದು ಎಲ್ಲರಿಗೂ ಗೊತ್ತಿರೋ ವಿಷಯವೇ. ಇನ್ನೂ ನವಗ್ರಹದ ಅಧಿಪತಿ ಸೂರ್ಯ. ಸೂರ್ಯನ ವಾರ ಭಾನುವಾರ. ಸೂರ್ಯನ ವೃಕ್ಷ ಯಾವುದು ಗೊತ್ತೇ? ಎಕ್ಕದ ಗಿಡ ಸೂರ್ಯನ ಪ್ರಿಯವಾದ ಮರ ಅಂತ ಹೇಳಬಹುದು. ಗಣಪತಿಗೂ ಎಕ್ಕೆ ಗಿಡದ ಹೂವನ್ನು ಹಾರವಾಗಿ ಕಟ್ಟಿ ಅರ್ಪಿಸಲಾಗುತ್ತದೆ.

ಇನ್ನೂ ವಿಶೇಷವಾಗಿ ಭಾನುವಾರದಂದು ಎಕ್ಕೆ ಗಿಡಕ್ಕೆ 11 ಪ್ರದಕ್ಷಿಣೆ ಹಾಕಿದರೆ ಸಾಕಷ್ಟು ಸಮಸ್ಯೆಗಳು ದೂರವಾಗತ್ತೆ. ಯಾವುದೇ ಉನ್ನತ ಅಧಿಕಾರದಲ್ಲಿ ಇರೋರು ತಮ್ಮ ವೃತ್ತಿಯಲ್ಲಿ ಯಾವುದೇ ರೀತಿಯ ಸಮಸ್ಯೆ, ಕಿರಿಕಿರಿಯನ್ನು ಅನುಭವಿಸುತ್ತಿದ್ದರೆ ಅಂಥವರು ತಪ್ಪದೆ ಎಕ್ಕೆ ಗಿಡಕ್ಕೆ ಪ್ರದಕ್ಷಿಣೆ ಹಾಕಬೇಕು. ಕಾರಣ ಎಲ್ಲಾ ಗ್ರಹಗಳ ಅಧಿಪತಿ ಸೂರ್ಯ. ಸೂರ್ಯ ನಾಯಕನ ಸ್ಥಾನದಲ್ಲಿ, ಅಧಿಕಾರಿಯ ಸ್ಥಾನದಲ್ಲಿ ಇರುವುದರಿಂದ ಯಾವುದೇ ಅಧಿಕಾರಿಗಳಿಗೆ, ಉದ್ಯೋಗದಲ್ಲಿ ಉನ್ನತ ಸ್ಥಾನದ ಆಕಾಂಕ್ಷಿಗಳಿಗೆ ಎಕ್ಕದ ಗಿಡದ ಪ್ರದಕ್ಷಿಣೆ ಫಲಪ್ರದವಾಗಬಹದು.

ಸೂರ್ಯನ ಆರಾಧನೆಯಿಂದ ಧೈರ್ಯ, ನಾಯಕತ್ವದ ಗುಣ ಬರವುದಲ್ಲದೆ ಪ್ರಖರವಾದ ಬುದ್ಧಿಶಕ್ತಿಯನ್ನು ಅನುಗ್ರಹಿಸುತ್ತಾನೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read