ಉದ್ಯಮದಲ್ಲಿ ಲಾಭ ಪಡೆಯಬೇಕಾದ್ರೆ ನಿಮ್ಮ ಕಚೇರಿಯಲ್ಲಿ ಮಾಡಿ ಈ ಬದಲಾವಣೆ

ಉದ್ಯಮದಲ್ಲಿ ಲಾಭವನ್ನು ಪಡೆಯಬೇಕು ಎಂಬ ಆಸೆ ಯಾರಿಗೆ ತಾನೇ ಇರೋದಿಲ್ಲ ಹೇಳಿ. ಇದಕ್ಕೆ ಕೇವಲ ವ್ಯವಹಾರ ಜ್ಞಾನವೊಂದಿದ್ದರೆ ಸಾಲದು. ಅದರ ಜೊತೆಯಲ್ಲಿ ಅದೃಷ್ಟ ಕೂಡ ನಿಮ್ಮ ಕೈ ಹಿಡಿಯಬೇಕು.

ಇವೆಲ್ಲವೂ ಸರಿಯಾಗಿ ಇರಬೇಕು ಅಂದರೆ ನೀವು ವ್ಯವಹಾರ ನಡೆಸುವ ಜಾಗವು ಮೊದಲು ವಾಸ್ತು ಪ್ರಕಾರವಾಗಿದೆಯೇ ಎಂದು ನೋಡಿಕೊಳ್ಳಿ.

ವಾಸ್ತು ಶಾಸ್ತ್ರದ ಪ್ರಕಾರ ನೀವು ನೆಲಕ್ಕೆ ಹಾಕುವ ಟೈಲ್ಸ್​ನ ಬಣ್ಣ ಕೂಡ ನಿಮ್ಮ ವ್ಯಾಪಾರದ ಪ್ರಗತಿಯನ್ನು ನಿರ್ಧರಿಸುತ್ತೆ ಎಂದು ಹೇಳುತ್ತೆ. ಆಗ್ನೇಯ ದಿಕ್ಕು ಅಗ್ನಿಯೊಂದಿಗೆ ಸಂಬಂಧ ಹೊಂದಿರೋದ್ರಿಂದ ಇಲ್ಲಿ ಕೆಂಪು ಬಣ್ಣದ ಟೈಲ್ಸ್​​ನ್ನು ಹಾಕಬೇಕು.

ಅಗ್ನಿ ಮೂಲೆಯಲ್ಲಿ ಎಂದಿಗೂ ಕೆಂಪು ಬಣ್ಣದ ಟೈಲ್ಸ್​​ ಅಳವಡಿಸಬೇಕು. ಇದು ಸಾಧ್ಯವಾಗದೇ ಹೋದಲ್ಲಿ ಕೆಂಪು ಬಣ್ಣದ ಮ್ಯಾಟ್ ಅಥವಾ ಕೆಂಪು ಬಣ್ಣದ ಯಾವುದೇ ಅಲಂಕಾರಿಕ ವಸ್ತುವನ್ನಾದರೂ ನೀವು ಇಡಬಹುದು. ಇದರಿಂದ ನಿಮ್ಮ ಉದ್ಯಮವು ಮತ್ತೊಂದು ದಿಕ್ಕಿನತ್ತ ಸಾಗಲಿದೆ ಎಂದು ಹೇಳುತ್ತೆ ವಾಸ್ತು ಶಾಸ್ತ್ರ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read