ಈ ಹಣ್ಣು ಬಳಸಿದ್ರೆ ಫಳ ಫಳ ಹೊಳೆಯಲಾರಂಭಿಸುತ್ತದೆ ಮುಖ, ಒಮ್ಮೆ ಟ್ರೈ ಮಾಡಿ

ಸುಂದರವಾಗಿ ಕಾಣಬೇಕು ಅನ್ನೋ ಆಸೆ ಸಹಜ. ಅದರಲ್ಲೂ ಹೊಳೆಯುವ ಮುಖಕಾಂತಿ ಬೇಕೆಂಬ ಬಯಕೆ ಎಲ್ಲರಲ್ಲೂ ಇರುತ್ತದೆ. ಆದ್ರೆ ಪರಿಸರ ಮಾಲಿನ್ಯ, ಧೂಳು, ಅನಾರೋಗ್ಯಕರ ಆಹಾರಗಳಿಂದಾಗಿ ಮುಖದ ಚರ್ಮ ಹೊಳಪು ಕಳೆದುಕೊಳ್ಳುತ್ತದೆ.

ಚರ್ಮದ ಮೇಲೆ ಕಲೆಗಳು, ಮೊಡವೆ ಕಾಣಿಸಿಕೊಳ್ಳುತ್ತದೆ. ಇದನ್ನೆಲ್ಲ ಹೋಗಲಾಡಿಸಲು ಕಲ್ಲಂಗಡಿ ಹಣ್ಣನ್ನು ಬಳಸಿ. ಕಲ್ಲಂಗಡಿ ಫೇಶಿಯಲ್‌ನಿಂದ ನಿಮ್ಮ ಚರ್ಮ ಮತ್ತೆ ಹೊಳೆಯುವಂತೆ ಮಾಡಬಹುದು. ಕಲ್ಲಂಗಡಿಯಲ್ಲಿ ಉತ್ಕರ್ಷಣ ನಿರೋಧಕಗಳು, ಜೀವಸತ್ವಗಳು ಮತ್ತು ಖನಿಜಗಳು ಹೇರಳವಾಗಿ ಕಂಡುಬರುತ್ತವೆ. ಇದು ನಿಮ್ಮ ಚರ್ಮಕ್ಕೆ ತುಂಬಾ ಪ್ರಯೋಜನಕಾರಿ.

ಕಲ್ಲಂಗಡಿಯನ್ನು ತಿನ್ನುವುದರಿಂದ ಮಾತ್ರವಲ್ಲ, ಮುಖಕ್ಕೆ ಲೇಪಿಸಿಕೊಳ್ಳುವುದರಿಂದಲೂ ಅನೇಕ ಲಾಭಗಳಿವೆ. ಮೊದಲು ಕಲ್ಲಂಗಡಿ ಹಣ್ಣಿನಿಂದ ಸ್ಕ್ರಬ್‌ ಮಾಡುವ ಮೂಲಕ ಮುಖವನ್ನು ಸ್ವಚ್ಛಗೊಳಿಸಬೇಕು. ಇದಕ್ಕಾಗಿ ನೀವು ಕಲ್ಲಂಗಡಿ ರಸದ ಜೊತೆಗೆ ತೆಂಗಿನ ಎಣ್ಣೆಯನ್ನು ಬೆರೆಸಬಹುದು. 2 ಚಮಚ ಕಲ್ಲಂಗಡಿ ರಸಕ್ಕೆ 1 ಚಮಚ ಅಕ್ಕಿ ಹಿಟ್ಟನ್ನು ಮಿಶ್ರಣ ಮಾಡಿ. ಈ ಮಿಶ್ರಣದಿಂದ ಮುಖವನ್ನು ಸ್ಕ್ರಬ್ ಮಾಡಿ. ಇದು ನಿಮ್ಮ ಮುಖದ ಡೆಡ್ ಸ್ಕಿನ್ ಅನ್ನು ಸಹ ನಿವಾರಿಸುತ್ತದೆ.

ಒಂದು ಚಮಚ ಕಲ್ಲಂಗಡಿ ರಸಕ್ಕೆ ಜೇನುತುಪ್ಪ ಮತ್ತು ಸ್ವಲ್ಪ ನಿಂಬೆ ರಸವನ್ನು ಮಿಶ್ರಣ ಮಾಡಬೇಕು. ಈ ಮಿಶ್ರಣವನ್ನು ಮುಖಕ್ಕೆ ಹಚ್ಚಿಕೊಳ್ಳಿ. ಈಗ ಕಲ್ಲಂಗಡಿ ಫೇಸ್ ಮಾಸ್ಕ್ ಗೆ ಸ್ವಲ್ಪ ಕಡಲೆ ಹಿಟ್ಟು, ಹಾಲು ಬೆರೆಸಿ ಮಿಕ್ಸ್‌ ಮಾಡಿ. ಈ ಫೇಸ್‌ ಪ್ಯಾಕ್‌ ಅನ್ನು ಮುಖಕ್ಕೆ ಹಚ್ಚಿಕೊಳ್ಳಿ. 15 ನಿಮಿಷಗಳ ಕಾಲ ಫೇಸ್‌ ಪ್ಯಾಕ್‌ ಹಾಗೇ ಇಟ್ಟುಕೊಂಡು ನಂತರ ನೀರಿನಿಂದ ತೊಳೆಯಿರಿ. ವಾರಕ್ಕೊಮ್ಮೆ ಹೀಗೆ ಮಾಡುವುದರಿಂದ ನಿಮ್ಮ ತ್ವಚೆಯು ಹೊಳೆಯಲು ಪ್ರಾರಂಭಿಸುತ್ತದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read