ಈ ಸಮಸ್ಯೆಗಳ ನಿವಾರಣೆಗೆ ಅಶ್ವಗಂಧ ಬಳಸಿ

ಅಶ್ವಗಂಧವನ್ನು ಆಯುರ್ವೇದ ಔಷಧಗಳಲ್ಲಿ ಹೆಚ್ಚಾಗಿ ಬಳಸುತ್ತಾರೆ. ಇದು ದೈಹಿಕ ಮತ್ತು ಮಾನಸಿಕ ಶಕ್ತಿಯನ್ನು ಉತ್ತೇಜಿಸುತ್ತದೆ. ಇದು ಕೊಬ್ಬಿನಾಮ್ಲ, ಆಮೈನೋ ಆಮ್ಲ , ಗ್ಲೂಕೋಸ್, ನೈಟ್ರೇಟ್ ಗಳು, ಮತ್ತು ಪೊಟ್ಯಾಶಿಯಂ ಸೇರಿದಂತೆ ಹಲವು ಅಂಶಗಳನ್ನು ಒಳಗೊಂಡಿದೆ. ಇದನ್ನು ಹಲವು ಆರೋಗ್ಯ ಸಮಸ್ಯೆಗೆ ಚಿಕಿತ್ಸೆ ನೀಡಲು ಬಳಸುತ್ತಾರೆ. ಇದರಿಂದ ಹಲವು ಪ್ರಯೋಜನಗಳಿವೆ.

*ಋತುಬಂಧಕ್ಕೊಳಗಾದ ಮಹಿಳೆಯರು ಇದನ್ನು ಸೇವಿಸುವುದರಿಂದ ಹಾರ್ಮೋನ್ ಅಸಮತೋಲನಗೊಳ್ಳುವುದನ್ನು ತಡೆಯಬಹುದು. ಇದು ರಕ್ತ ಪರಿಚಲನೆಯನ್ನು ಹೆಚ್ಚಿಸುತ್ತದೆ.

*ಲೈಂಗಿಕ ತೊಂದರೆಗಳನ್ನು ಕಡಿಮೆ ಮಾಡುತ್ತದೆ. ಪರಾಕಾಷ್ಠೆ ಹೊಂದಲು ತೊಂದರೆ, ಯೋನಿ ಶುಷ್ಕತೆ ಮತ್ತು ಕಡಿಮೆ ಪ್ರಚೋದನೆಯಂತಹ ಸಾಮಾನ್ಯ ಲೈಂಗಿಕ ಆರೋಗ್ಯ ಸಮಸ್ಯೆಗಳನ್ನು ನಿವಾರಿಸುತ್ತದೆ.

*ಥೈರಾಯ್ಡ್ ಸಮಸ್ಯೆಯಿಂದ ಉಂಟಾಗುವ ತೂಕ ಹೆಚ್ಚಾಗುವುದು, ದಣಿವು, ಚರ್ಮದ ಶುಷ್ಕತೆ, ಕೂದಲು ಉದುರುವುದು, ಮಲಬದ್ಧತೆ ಸಮಸ್ಯೆಯನ್ನು ನಿವಾರಿಸುತ್ತದೆ,

*ಒತ್ತಡವನ್ನು ಅನುಭವಿಸುವವರು ಇದನ್ನು ಸೇವಿಸುವುದರಿಂದ ನಿದ್ರಾಹೀನತೆ, ಆತಂಕ, ಆಯಾಸ ನಿವಾರಣೆಯಾಗುತ್ತದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read