ಈ ಸಮಸ್ಯೆಗಳಿರುವವರಿಗೆ ಬಾಳೆಹಣ್ಣು ಸೇವನೆ ಅಪಾಯಕಾರಿ…!

ಬಹುತೇಕ ಎಲ್ಲರೂ ಇಷ್ಟಪಡುವಂತಹ ಹಣ್ಣು ಬಾಳೆಹಣ್ಣು. ಇದು ಅತ್ಯಂತ ಆರೋಗ್ಯಕರ ಮತ್ತು ಪೌಷ್ಟಿಕ ಆಹಾರವಾಗಿದೆ. ಇದೇ ಕಾರಣಕ್ಕೆ  ಪ್ರಪಂಚದಾದ್ಯಂತ ಎಲ್ಲರೂ ಇದನ್ನು ಹೆಚ್ಚು ಇಷ್ಟಪಟ್ಟು ತಿನ್ನುತ್ತಾರೆ. ಬಾಳೆಹಣ್ಣಿನಲ್ಲಿರುವ ಆರೋಗ್ಯಕಾರಿ ಅಂಶಗಳ ಬಗ್ಗೆ ನಮಗೆಲ್ಲರಿಗೂ ತಿಳಿದಿದೆ. ಆದರೆ ಕೆಲವು ಸಂದರ್ಭಗಳಲ್ಲಿ ಬಾಳೆಹಣ್ಣು ಸೇವನೆ ಅಪಾಯಕಾರಿ.

ಸಕ್ಕರೆ ಕಾಯಿಲೆ

ಬಾಳೆಹಣ್ಣಿನಲ್ಲಿ ಸ್ವಾಭಾವಿಕವಾಗಿ ಹೆಚ್ಚಿನ ಸಕ್ಕರೆ ಇರುತ್ತದೆ. ಆದ್ದರಿಂದ ಮಧುಮೇಹ ಹೊಂದಿರುವ ರೋಗಿಗಳು ಇದನ್ನು ಸೇವಿಸಬಾರದು. ಬಾಳೆಹಣ್ಣನ್ನು ತಿನ್ನಲೇ ಬೇಕೆಂದು ಅನಿಸಿದರೆ ಹೆಚ್ಚು ಸಿಹಿ ಇರುವ ಹಣ್ಣುಗಳಿಂದ ದೂರವಿರಬೇಕು.

ಮೂತ್ರಪಿಂಡದ ಸಮಸ್ಯೆ

ಬಾಳೆಹಣ್ಣಿನಲ್ಲಿ ಪೊಟ್ಯಾಸಿಯಮ್ ಅಧಿಕವಾಗಿದೆ, ಇದು ಮೂತ್ರಪಿಂಡದ ಸಮಸ್ಯೆಗಳಿರುವ ವ್ಯಕ್ತಿಗಳಿಗೆ ಹಾನಿಕಾರಕ. ಅವರ ದೇಹದಿಂದ ಹೆಚ್ಚುವರಿ ಪೊಟ್ಯಾಸಿಯಮ್ ಅನ್ನು ಹೊರಹಾಕಲು ಕಷ್ಟವಾಗುತ್ತದೆ. ಅಂತಹವರು ಬಾಳೆಹಣ್ಣನ್ನು ಸೇವಿಸಬಾರದು.

ಮಲಬದ್ಧತೆ

ಆಗಾಗ್ಗೆ ವಾಯು ಮತ್ತು ಮಲಬದ್ಧತೆಯ ಸಮಸ್ಯೆಗಳನ್ನು ಎದುರಿಸುತ್ತಿರುವವರು ಬಾಳೆಹಣ್ಣಿನ ಸೇವನೆಯನ್ನು ತಪ್ಪಿಸಬೇಕು. ಬಾಳೆಹಣ್ಣು ಮಲಬದ್ಧತೆಯ ಸಮಸ್ಯೆಯನ್ನು ಹೋಗಲಾಡಿಸುವ ಬದಲು ಹೆಚ್ಚಿಸುವ ಕೆಲಸ ಮಾಡಬಹುದು.

ಅಲರ್ಜಿ

ಕೆಲವರಿಗೆ ಬಾಳೆಹಣ್ಣು ತಿಂದರೆ ಅಲರ್ಜಿಯಾಗುತ್ತದೆ. ಅಂಥವರು ಬಾಳೆಹಣ್ಣನ್ನು ಸಂಪೂರ್ಣವಾಗಿ ತ್ಯಜಿಸಬೇಕು. ಬಾಳೆಹಣ್ಣಿನ ಅಲರ್ಜಿಗಳು ತುಂಬಾ ಸಾಮಾನ್ಯವಲ್ಲ, ಆದರೆ ಅಲರ್ಜಿ ಇರುವವರು ತಿಂದರೆ ಊತ, ಉಸಿರಾಟದ ತೊಂದರೆ ಮತ್ತು ಅನಾಫಿಲ್ಯಾಕ್ಸಿಸ್‌ನಂತಹ ತೀವ್ರವಾದ ರೋಗಲಕ್ಷಣಗಳನ್ನು ಉಂಟುಮಾಡಬಹುದು.

ಉಬ್ಬಸ ಅಥವಾ ಅಸ್ತಮಾ

ಅಸ್ತಮಾ ರೋಗಿಗಳು ಬಾಳೆಹಣ್ಣನ್ನು ತಿನ್ನಬಾರದು. ಬಾಳೆಹಣ್ಣು ಸೇವನೆಯಿಂದ ಅವರ ಸಮಸ್ಯೆ ಮತ್ತಷ್ಟು ಹೆಚ್ಚಾಗಬಹುದು. ಅಸ್ತಮಾ ಇರುವವರು ಅಪ್ಪಿತಪ್ಪಿಯೂ ಬಾಳೆಹಣ್ಣು ಸೇವಿಸಬಾರದು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read