ಈ ವಿಷಯ ತಿಳಿಸುತ್ತೆ ಪುರುಷರಿಗೆ ಯಾವುದು ಅದೃಷ್ಟ….? ಯಾವುದು ದುರಾದೃಷ್ಟ…..?

ಅದೃಷ್ಟ ಮತ್ತು ದುರಾದೃಷ್ಟ ಇವೆರಡೂ ನಮ್ಮ ಕೈಯಲ್ಲಿಲ್ಲ. ಯಾವುದೇ ಸಂದರ್ಭವನ್ನು ಒಳ್ಳೆಯದು ಅಥವಾ ಕೆಟ್ಟದ್ದೆಂದು ಕರೆಯುವ ಮೊದಲು ತಾಳ್ಮೆ ಇರಬೇಕು. ಆರಂಭದಲ್ಲಿ ನಮಗೆ ಕೆಟ್ಟದ್ದು ಎನಿಸಿದ್ದು ಮುಂದೆ ಅದೃಷ್ಟ ತರಬಹುದು. ಮನುಷ್ಯನ ದುರಾದೃಷ್ಟದ ಬಗ್ಗೆ ಒಂದಷ್ಟು ತಿಳಿದುಕೊಳ್ಳೋಣ.  ಒಬ್ಬ ಮನುಷ್ಯ ಅದೃಷ್ಟವಂತನೋ ಅಥವಾ ದುರಾದೃಷ್ಟವಂತನೋ ಅನ್ನೋದನ್ನು ಕೂಡ ತಿಳಿದುಕೊಳ್ಳಬಹುದು. ಅದ್ಹೇಗೆ ಅನ್ನೋದನ್ನು ನೋಡೋಣ.

ವೃದ್ಧಾಪ್ಯದಲ್ಲಿ ಸಂಗಾತಿಯನ್ನು ಕಳೆದುಕೊಳ್ಳುವುದು ದುರಾದೃಷ್ಟದ ಒಂದು ಲಕ್ಷಣ. ಭಾವನೆಗಳನ್ನು ಹಂಚಿಕೊಳ್ಳಲು ಯಾರೂ ಆತ್ಮೀಯರು ಇಲ್ಲ ಎಂದಾದಾಗ ನಿಜಕ್ಕೂ ಅದು ಅವನ ಪಾಲಿಗೆ ದುರದೃಷ್ಟ.

ದುರಾದೃಷ್ಟದ ಇನ್ನೊಂದು ಪ್ರಮುಖ ಸೂಚನೆ ಅಂದ್ರೆ ಹಣ ಕಳೆದುಕೊಳ್ಳುವುದು. ಕಷ್ಟಪಟ್ಟು ಕೂಡಿಟ್ಟ ಹಣ ನಿಮ್ಮ ಶತ್ರು ಅಥವಾ ಕೆಟ್ಟ ವ್ಯಕ್ತಿಯ ಪಾಲಾದ್ರೆ ಹಣ ಕಳೆದುಕೊಂಡವ ದುರದೃಷ್ಟವಂತನೆಂದೇ ಲೆಕ್ಕ.

ದುರದೃಷ್ಟವಂತನ ಮೂರನೇ ಲಕ್ಷಣ ಅಂದ್ರೆ ಅವಲಂಬನೆ. ವ್ಯಕ್ತಿಯೊಬ್ಬ ಬೇರೆಯವರ ಮನೆಯಲ್ಲಿ ಜೀತ ಮಾಡುತ್ತ ಅಥವಾ ಸಾಲ ಪಡೆದು ಅದನ್ನು ತೀರಿಸಲಾಗದೆ ಕಷ್ಟಪಡುತ್ತಿದ್ದರೆ ಅವನು ಕೂಡ ದುರಾದೃಷ್ಟವಂತ.

ಈ ಮೂರು ಸಂದರ್ಭಗಳು ಎದುರಾಗದೇ ಇದ್ದಲ್ಲಿ ಅದೃಷ್ಟ ನಿಮ್ಮ ಜೊತೆಗಿದೆ ಎಂದುಕೊಳ್ಳಿ. ಶ್ರಮಪಟ್ಟು ಮುನ್ನಡೆಯಿರಿ. ಕಷ್ಟಪಟ್ಟರೆ ಅದಕ್ಕೆ ತಕ್ಕ ಪ್ರತಿಫಲವಂತೂ ಶತಃಸಿದ್ಧ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read