ಆರ್ಥಿಕ ಸಮಸ್ಯೆ ನಿವಾರಣೆಯಾಗಲು ಈ ವಸ್ತುಗಳನ್ನು ಅಪ್ಪಿತಪ್ಪಿಯೂ ಪರ್ಸ್ ನಲ್ಲಿ ಇಡಬೇಡಿ

ಪರ್ಸ್ ನಲ್ಲಿ ಸದಾ ಹಣವಿರಬೇಕೆಂದು ಎಲ್ಲರೂ ಬಯಸ್ತಾರೆ. ಆದ್ರೆ ಕೆಲವರು ಎಷ್ಟು ಕಷ್ಟಪಟ್ಟರೂ ಪರ್ಸ್ ನಲ್ಲಿ ಹಣವಿರೋದಿಲ್ಲ. ಪರ್ಸ್ ನಲ್ಲಿರುವ ಕೆಲ ವಸ್ತುಗಳೇ ಇದಕ್ಕೆ ಕಾರಣವಾಗುತ್ತವೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಪರ್ಸ್ ನಲ್ಲಿರುವ ಕೆಲ ವಸ್ತುಗಳು ಆರ್ಥಿಕ ಸಂಕಷ್ಟದ ಜೊತೆ ಆರೋಗ್ಯದ ಮೇಲೂ ಪರಿಣಾಮ ಬೀರುತ್ತವೆ.

ಪರ್ಸ್ ನಲ್ಲಿ ಹಳೆಯ ಹಾಗೂ ಹರಿದ ಕಾಗದಗಳನ್ನು ಇಡಬೇಡಿ. ಇದ್ರಿಂದ ಹಣದ ಅಭಾವದ ಜೊತೆ ತಾಯಿ ಲಕ್ಷ್ಮಿ ಮುನಿಸಿಕೊಳ್ಳುತ್ತಾಳೆ.

ಹರಿದ ನೋಟುಗಳು ಯಾವುದೇ ಪ್ರಯೋಜನಕ್ಕೆ ಬರುವುದಿಲ್ಲ. ಹಾಗಾಗಿ ಪರ್ಸ್ ನಲ್ಲಿ ಹರಿದ ನೋಟುಗಳನ್ನು ಇಡಬಾರದು. ಇದು ನಕಾರಾತ್ಮಕ ಶಕ್ತಿಯನ್ನು ಹೆಚ್ಚಿಸುತ್ತದೆ.

ಪರ್ಸ್ ನಲ್ಲಿರುವ ಬ್ಲೇಡ್ ಹಾಗೂ ಚಾಕು ನಕಾರಾತ್ಮಕ ಶಕ್ತಿ ಆಕರ್ಷಿಸುತ್ತದೆ. ಇದು ಅಪಾಯ ಕೂಡ.

ಸತ್ತ ವ್ಯಕ್ತಿಯ ಫೋಟೋವನ್ನೂ ಪರ್ಸ್ ನಲ್ಲಿ ಇಡಬಾರದು.

ಸಾಲಪತ್ರವನ್ನು ಅಪ್ಪಿತಪ್ಪಿಯೂ ಪರ್ಸ್ ನಲ್ಲಿಡಬೇಡಿ. ಇದ್ರಿಂದ ಆರ್ಥಿಕ ಸಂಕಷ್ಟ ಹೆಚ್ಚಾಗುತ್ತದೆ.

ದೇವಾನುದೇವತೆಗಳ ಫೋಟೋವನ್ನು ಪರ್ಸ್ ನಲ್ಲಿಡುವ ಬದಲು ಯಂತ್ರವನ್ನು ಪರ್ಸ್ ನಲ್ಲಿಟ್ಟುಕೊಳ್ಳುವುದು ಶುಭ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read