ದಾಂಪತ್ಯ ಸಂತೋಷಮಯವಾಗಿರಬೇಕೆಂದ್ರೆ ಈ ‘ರಾಶಿ’ಯ ಹುಡುಗ್ರು ಸಿಕ್ಕರೆ ಬಿಡಬೇಡಿ

ಗಂಡ-ಹೆಂಡತಿಗೆ ಉನ್ನತ ಸ್ಥಾನ ನೀಡ್ತಾನೆ. ಹಾಗೆ ನೀಡಿದ್ರೆ ಮಾತ್ರ ಸಂಸಾರ ಸುಖಕರವಾಗಿರಲು ಸಾಧ್ಯ. ದಾಂಪತ್ಯ ಸಂತೋಷಮಯವಾಗಿರಬೇಕೆಂದ್ರೆ ಹೊಂದಾಣಿಕೆ ಬಹಳ ಮುಖ್ಯ. ಪತಿ-ಪತ್ನಿ ಸಂಬಂಧ ಸೂಜಿ-ದಾರದಂತೆ. ಎರಡೂ ಬಂಧಿಯಾಗಿದ್ರೆ ಮಾತ್ರ ಸಂಸಾರ ಸರಿಯಾಗಿರುತ್ತದೆ.

ಮದುವೆ ಸಂದರ್ಭದಲ್ಲಿ ಜಾತಕ ನೋಡಿ ಮದುವೆ ಮಾಡಲಾಗುತ್ತದೆ. ಕೆಲ ರಾಶಿಯ ಪುರುಷರು ಪತ್ನಿಯನ್ನು ಪ್ರೀತಿಯಿಂದ ನೋಡಿಕೊಳ್ತಾರೆ. ಈ ಕೆಳಗಿನ ರಾಶಿ ಹುಡುಗ್ರು ಸಿಕ್ಕರೆ ಮದುವೆಗೆ ನಿರಾಕರಿಸಬೇಡಿ.

ಮೇಷ : ಈ ರಾಶಿಯ ಪುರುಷ ತನ್ನ ಪತ್ನಿಯನ್ನು ಹೂವಿನಂತೆ ನೋಡಿಕೊಳ್ತಾನಂತೆ. ಈ ರಾಶಿಯ ಪತಿ, ಸದಾ ತನ್ನ ಪತ್ನಿಯನ್ನು ಪ್ರೀತಿಸ್ತಾನಂತೆ. ಈ ರಾಶಿ ಹುಡುಗ್ರು ಪತ್ನಿ ಮೇಲೆ ಹೆಚ್ಚು ಕಾಳಜಿ ವಹಿಸ್ತಾರೆ. ಪತ್ನಿಯ ಸಣ್ಣಪುಟ್ಟ ವಿಷ್ಯಕ್ಕೂ ಮಹತ್ವ ನೀಡ್ತಾರೆ.

ಸಿಂಹ ರಾಶಿ : ಈ ರಾಶಿಯ ಪತಿ ತನ್ನ ಪತ್ನಿಯನ್ನು ಒಂದು ಕ್ಷಣಕ್ಕೂ ಒಂಟಿಯಾಗಿ ಬಿಟ್ಟಿರುವುದಿಲ್ಲ. ಹೆಂಡತಿ ಇಲ್ಲದೆ ಇವ್ರು ಬದುಕುವುದಿಲ್ಲ. ಈ ರಾಶಿ ಹುಡುಗ್ರಿಗೆ ಪತ್ನಿ ಮೇಲೆ ಅಪಾರ ಪ್ರೀತಿಯಿರುತ್ತದೆ. ಅವ್ರಿಗೆ ಜೀವನದಲ್ಲಿ ಪ್ರತಿಯೊಂದು ಪತ್ನಿಯೇ ಆಗಿರುತ್ತಾಳೆ.

ಧನು ರಾಶಿ : ಈ ರಾಶಿಯ ಪುರುಷ, ಪತ್ನಿ ಜೊತೆ ವಿಶೇಷ ಸಂಬಂಧ ಹೊಂದಿರುತ್ತಾನೆ. ಅದನ್ನು ಸಂಭಾಳಿಸುತ್ತಾನೆ. ಪತ್ನಿ ಮುಖದಲ್ಲಿ ಸದಾ ನಗುವಿರಲಿ ಎಂದು ಬಯಸುತ್ತಾನೆ. ಪತ್ನಿ ಕಣ್ಣಲ್ಲಿ ನೀರು ಬರುವುದನ್ನು ಈತ ಎಂದಿಗೂ ಸಹಿಸುವುದಿಲ್ಲ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read