ಈ ರಾಶಿಯ ವ್ಯಾಪಾರಿಗಳಿಗೆ ಇಂದು ಅತ್ಯಂತ ಶುಭ ದಿನ

ಮೇಷ : ಹಣ ವ್ಯಯವಾಗಲಿದೆ. ಮನೆಯವರ ಮೇಲೆ ನೀವು ತೋರುವ ಕಾಳಜಿ ಎಲ್ಲರಿಗೂ ಇಷ್ಟವಾಗಲಿದೆ. ಪ್ರಯಾಣದ ಕಾರ್ಯಗಳನ್ನ ಮುಂದೂಡಿ. ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ಬೇಡ.

ವೃಷಭ : ಹಲವು ದಿನಗಳಿಂದ ನೆನೆಗುದಿಗೆ ಬಿದ್ದ ಕೆಲಸವೊಂದು ಇಂದು ಪೂರ್ಣಗೊಳ್ಳಲಿದೆ. ಸಾಂಸಾರಿಕ ಜೀವನ ಸುಖಮಯವಾಗಲಿದೆ. ಹಣಕಾಸಿನ ವಿಚಾರದಲ್ಲಿ ಯಾವುದೇ ತೊಂದರೆ ಇರೋದಿಲ್ಲ. ವ್ಯಾಪಾರಿಗಳಿಗೆ ಉತ್ತಮ ದಿನವಾಗಿದೆ.

ಮಿಥುನ : ಯಾರೋ ಹೇಳಿದರು ಎಂದ ಮಾತ್ರಕ್ಕೆ ಅದೇ ನಿಜವೆಂದು ನಂಬಬೇಡಿ. ಆಸ್ತಿ ವಿಚಾರದಲ್ಲಿ ಸಹೋದರರ ಜೊತೆ ವೈಮನಸ್ಯ ಮೂಡಲೂಬಹುದು. ನಾಲಗೆ ನಿಯಂತ್ರಣದಲ್ಲಿ ಇರಲಿ. ಸಂಗಾತಿ ನೀಡುವ ಸಲಹೆಗಳನ್ನ ಆಲಿಸಿ.

ಕಟಕ : ಇಂದು ನೀವು ಚಿನ್ನಾಭರಣ ಖರೀದಿ ಮಾಡುವ ಸಾಧ್ಯತೆ ಇದೆ. ಮನಸ್ಸಿನಲ್ಲಿರುವ ಗೊಂದಲಗಳನ್ನು ಆತ್ಮೀಯರ ಜೊತೆ ಹಂಚಿಕೊಳ್ಳಿ. ಮನಸ್ಸು ಹಗುರಾಗಲಿದೆ. ಹಣಕಾಸಿನ ವಿಚಾರದಲ್ಲಿ ಎಚ್ಚರಿಕೆ ಇರಲಿ. ಕುಟುಂಬಸ್ಥರು ನೀಡುವ ಸಲಹೆಗಳನ್ನ ಕೇಳಿ.

ಸಿಂಹ : ಇಂದು ನಿಮ್ಮ ಬಳಿ ಏನೇನು ಇದೆಯೋ ಅವೆಲ್ಲ ನಿಮ್ಮ ಪರಿಶ್ರಮಕ್ಕೆ ಸಿಕ್ಕ ಪ್ರತಿಫಲ ಅನ್ನೋದನ್ನ ಮರೆಯದಿರಿ. ತೈಲ ವ್ಯಾಪಾರಿಗಳು, ಜವಳಿ ಉದ್ಯಮದವರು ಉತ್ತಮ ಲಾಭವನ್ನ ಹೊಂದಲಿದ್ದೀರಿ. ಕುಟುಂಬಸ್ಥರ ಜೊತೆ ಗುಣಮಟ್ಟದ ಸಮಯವನ್ನ ಕಳೆಯುತ್ತೀರಿ.

ಕನ್ಯಾ : ಕುಟುಂಬದಲ್ಲಿ ಸುಖ – ಶಾಂತಿ ನೆಲೆಸಲಿದೆ. ವ್ಯವಹಾರ ಕೊಂಚ ಮಂದಗತಿಯಲ್ಲಿ ಸಾಗಬಹುದು. ಹಾಗಂತ ಒತ್ತಡಕ್ಕೆ ಒಳಗಾಗಬೇಡಿ. ಮುಂದಿನ ದಿನಗಳಲ್ಲಿ ಶುಭ ಕಾದಿದೆ. ಹಣದ ಹರಿವು ಸಾಮಾನ್ಯ ಸ್ಥಿತಿಯಲ್ಲಿ ಇರಲಿದೆ. ಪೋಷಕರ ಆರೋಗ್ಯ ವಿಚಾರದಲ್ಲಿ ಯಾವುದೇ ನಿರ್ಲಕ್ಷ್ಯ ಬೇಡ.

ತುಲಾ : ಮನೆಯ ವಾತಾವರಣ ಶಾಂತ ರೀತಿಯಲ್ಲಿ ಇರಲಿದೆ. ನೀವು ಮಾಡುವ ಕಾರ್ಯಗಳಿಗೆ ಕುಟುಂಬಸ್ಥರ ಆಶೀರ್ವಾದ ಸಿಗಲಿದೆ. ಆದರೆ ಹಣದ ವಿಚಾರದಲ್ಲಿ ಕೊಂಚ ನಷ್ಟ ಅನುಭವಿಸಲಿದ್ದೀರಿ. ನಕಾರಾತ್ಮಕ ಯೋಚನೆಗಳನ್ನ ತಲೆಯಿಂದ ತೆಗೆದು ಹಾಕಿ.

ವೃಶ್ಚಿಕ : ವಿದ್ಯಾರ್ಥಿ ಜೀವನದಲ್ಲಿ ಇರುವ ಎಲ್ಲಾ ಅಡಚಣೆಗಳು ದೂರಾಗಲಿದೆ.ಪೋಷಕರ ಆಶೀರ್ವಾದ ನಿಮ್ಮೊಡನೆ ಇರಲಿದೆ. ಪ್ರಮುಖ ನಿರ್ಧಾರ ತೆಗೆದುಕೊಳ್ಳುವ ಮುನ್ನ ಕುಟುಂಬಸ್ಥರ ಜೊತೆ ಚರ್ಚೆ ಮಾಡಿ. ಕುಲದೇವತೆಯನ್ನ ಆರಾಧಿಸಿ.

ಧನು : ಇಂದು ನಿಮ್ಮ ಆದಾಯ ದ್ವಿಗುಣಗೊಳ್ಳುವ ಸಾಧ್ಯತೆ ಇದೆ. ಎಲೆಕ್ಟ್ರಿಕ್​ ಉದ್ಯಮದವರಿಗಂತೂ ಹೆಚ್ಚಿನ ಲಾಭ ಕಾದಿದೆ. ಕುಟುಂಬ ಜೀವನದಲ್ಲಿ ಅಡಚಣೆ ಇಲ್ಲ. ಗರ್ಭಿಣಿಯರು ಆರೋಗ್ಯದ ಬಗ್ಗೆ ಕಾಳಜಿ ವಹಿಸಿ. ಪರಿಸ್ಥಿತಿಗಳು ನಿಮ್ಮ ಪರವಾಗಿಯೇ ಇರಲಿದೆ.

ಮಕರ : ಹಳೆಯ ಸಾಲವೊಂದು ತೀರೋದ್ರಿಂದ ಮನಸ್ಸಿಗೆ ನೆಮ್ಮದಿ ಎನಿಸಲಿದೆ. ಆಸ್ತಿ ಮಾರಾಟ ಮಾಡಬೇಕು ಎಂಬ ನಿಮ್ಮ ಆಸೆ ಕೈಗೂಡುವ ಸಾಧ್ಯತೆ ಇದೆ. ಹೊಸ ವಾಹನ ಖರೀದಿ ಮಾಡಲಿದ್ದೀರಿ. ವೈವಾಹಿಕ ಜೀವನ ಸಂತಸದಿಂದ ಸಾಗಲಿದೆ.

ಕುಂಭ : ಉದ್ಯಮದಲ್ಲಿ ಹೂಡಿಕೆ ಮಾಡಬೇಕು ಎಂದುಕೊಂಡವರು ಇನ್ನು ಸ್ವಲ್ಪ ದಿನ ಕಾಯೋದು ಒಳ್ಳೆಯದು. ಹಣಕಾಸಿನ ನಿರ್ಧಾರಗಳನ್ನ ಕೈಗೊಳ್ಳುವ ವೇಳೆ ತರಾತುರಿ ಮಾಡಬೇಡಿ. ಸಣ್ಣ ವ್ಯಾಪಾರಿಗಳಿಗೆ ಲಾಭವಿದೆ.

ಮೀನ : ವೈವಾಹಿಕ ಜೀವನವು ಸುಖಮಯವಾಗಿ ಇರಲಿದೆ. ದಿನಸಿ ವ್ಯಾಪಾರಿಗಳಿಗೆ ಇದು ಅತ್ಯಂತ ಶುಭ ದಿನ. ಮಸಾಲೆಯುಕ್ತ ಆಹಾರ ಸೇವನೆ ಮಾಡದೇ ಇರೋದೆ ಒಳ್ಳೆಯದು. ಕಾರ್ಯ ಕ್ಷೇತ್ರದಲ್ಲಿ ಪರಿಸ್ಥಿತಿ ನಿಮ್ಮ ಪರವಾಗಿ ಇರಲಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read