ಈ ರಾಶಿಯ ಕೃಷಿಕರಿಗಿದೆ ಇಂದು ಉತ್ತಮ ಅವಕಾಶ

ಮೇಷ : ಗೃಹೋಪಯೋಗಿ ವಸ್ತುಗಳಿಗಾಗಿ ವಿಪರೀತ ಖರ್ಚು ಮಾಡಬೇಕಾಗಿ ಬರಬಹುದು. ವ್ಯಾಪಾರ – ವ್ಯವಹಾರ ಕುರಿತಂತೆ ಪರಿಣಿತರು ನಿಮಗೆ ಸೂಕ್ತ ಮಾರ್ಗದರ್ಶನ ಮಾಡಲಿದ್ದಾರೆ, ಹಣ ಮಾಡುವ ಭರದಲ್ಲಿ ದುರಾಲೋಚನೆ ಮಾಡಬೇಡಿ.

ವೃಷಭ : ಯಾವುದೇ ಸಂದರ್ಭದಲ್ಲೂ ಮಾತಿನ ಮೇಲೆ ಹಿಡಿತ ಕಳೆದುಕೊಳ್ಳಬೇಡಿ. ಕುಟುಂಬ ಸದಸ್ಯರಿಂದ ಮಾರ್ಗದರ್ಶನ ಸಿಗಲಿದೆ. ತಂದೆಯು ನಿಮ್ಮ ಮನಸ್ಸಿಗೆ ನೋವಾಗುವಂತೆ ಮಾತನಾಡಲಿದ್ದಾರೆ. ಆದರೂ ಸ್ಥಿಮಿತ ಕಳೆದುಕೊಳ್ಳಬೇಡಿ.

ಮಿಥುನ : ಸಂಗಾತಿಯೊಡನೆ ಇಂದು ಮುಕ್ತವಾಗಿ ಮಾತನಾಡಲಿದ್ದೀರಿ. ಅನಗತ್ಯ ಕೆಲಸಗಳಿಗೆ ಧನಹಾನಿಯಾಗಲಿದೆ. ಮನೆ ನವೀಕರಣ ಕಾರ್ಯದ ಬಗ್ಗೆ ಚರ್ಚೆ ಮಾಡಲಿದ್ದೀರಿ. ಕಲಾವಿದರಿಗೆ ಇಂದು ಉತ್ತಮ ಅವಕಾಶಗಳು ಹುಡುಕಿಕೊಂಡು ಬರಲಿದೆ.

ಕಟಕ : ನಿಮ್ಮ ಬಳಿ ಪ್ರತಿಭೆ ಇದೆ. ಆದರೆ ನಿಮ್ಮ ಆಲಸ್ಯ ಮನೋಭಾವದಿಂದ ಅದನ್ನು ಹಾಳು ಮಾಡಿಕೊಳ್ಳುತ್ತಿದ್ದೀರಿ. ಕಚೇರಿ ಕೆಲಸಗಳಲ್ಲಿಯೂ ನಿಮ್ಮ ಸೋಮಾರಿತನವೇ ನಿಮ್ಮ ಯಶಸ್ಸಿಗೆ ಮುಳುವಾಗಿದೆ. ವಿದ್ಯಾರ್ಥಿಗಳು ಗೊಂದಲಕ್ಕೆ ಸಿಲುಕಿದ್ದಾರೆ.

ಸಿಂಹ : ಮಾನಸಿಕವಾಗಿ ನೋವುಂಟಾಗುವಂತಹ ಘಟನೆಯೊಂದು ಜರುಗಲಿದೆ. ಉತ್ತಮ ಆರೋಗ್ಯಕ್ಕಾಗಿ ನೀವು ದೇಹದಂಡನೆ ಮಾಡಲೇಬೇಕು. ಕಚೇರಿಗೆ ತೆರಳುವ ಮುನ್ನ ಎಲ್ಲಾ ದಾಖಲೆಗಳನ್ನು ಪರಿಶೀಲನೆ ಮಾಡಿಕೊಳ್ಳಿ. ಇಲ್ಲವಾದಲ್ಲಿ ಮೇಲಾಧಿಕಾರಿಗಳಿಂದ ಬೈಗುಳ ಕೇಳಬೇಕಾದೀತು.

ಕನ್ಯಾ : ಮನೆ ಕಟ್ಟುವ ಕಾರ್ಯ ಇಂದು ಪೂರ್ಣಗೊಳ್ಳುವುದರಿಂದ ನಿಮಗೆ ನಿರಾಳ ಎನಿಸಲಿದೆ. ಮನೆಯಲ್ಲಿ ವೈವಾಹಿಕ ಸಂಬಂಧದ ಬಗ್ಗೆ ಚರ್ಚೆ ನಡೆಯಲಿದೆ. ಬೆನ್ನು ನೋವಿನ ಸಮಸ್ಯೆ ನಿಮ್ಮನ್ನು ಕಾಡಬಹುದು. ವಾಹನಕ್ಕೆ ರಿಪೇರಿ ಮಾಡಿಸಬೇಕಾಗಿ ಬರಬಹುದು.

ತುಲಾ : ನಂಬಿಕೆ ದ್ರೋಹಕ್ಕೆ ಒಳಗಾಗುವಿರಿ. ಇದರಿಂದ ನಿಮ್ಮ ಮನಸ್ಸಿಗೆ ನೋವಾಗಲಿದೆ. ಮಕ್ಕಳ ಒತ್ತಾಯಕ್ಕೆ ಮಣಿದು ವಾಹನ ಖರೀದಿ ಮಾಡುವಿರಿ. ಜವಳಿ ವ್ಯಾಪಾರಿಗಳಿಗೆ ಲಾಭವಿದೆ. ಶೀತ ಸಂಬಂಧಿ ಕಾಯಿಲೆ ನಿಮ್ಮನ್ನು ಭಾದಿಸಲಿದೆ.

ವೃಶ್ಚಿಕ : ನೀವು ಅಂದುಕೊಂಡ ಕಾರ್ಯ ಪೂರ್ಣ ಪ್ರಮಾಣದಲ್ಲಿ ಅಲ್ಲದೇ ಹೋದರೂ ಸಹ ಅಲ್ಪ ಪ್ರಮಾಣದಲ್ಲಿ ಈಡೇರಲಿದೆ. ಅನೇಕ ಗೊಂದಲಗಳು ನಿಮ್ಮ ಮನಸ್ಸಿನಲ್ಲಿ ಗೂಡು ಮಾಡಿದೆ.ಇದು ಹೆಮ್ಮರವಾಗುವ ಮುನ್ನ ಬಗೆಹರಿಸಿಕೊಳ್ಳಲು ಯತ್ನಿಸಿ.

ಧನು : ಇಂದು ನಿಮಗೆ ಹೊಸ ಸ್ನೇಹಿತರ ಪರಿಚಯವಾಗಲಿದೆ. ಮನೆಯಲ್ಲಿ ನಿಮ್ಮ ವೈವಾಹಿಕ ಸಂಬಂಧದ ಬಗ್ಗೆ ಹಿರಿಯರು ಚರ್ಚೆ ನಡೆಸಲಿದ್ದಾರೆ. ಕೃಷಿಕರಿಗೆ ಇಂದು ಎಲ್ಲಾ ಕಾರ್ಯಗಳಲ್ಲಿ ಲಾಭವಿದೆ.

ಮಕರ : ಕೋರ್ಟ್ – ಕಚೇರಿ ವ್ಯವಹಾರಗಳಲ್ಲಿ ಜಯ ನಿಮ್ಮದಾಗಲಿದೆ. ಉದ್ಯಮಗಳಿಗೆ ಇಂದು ಅಲ್ಪಲಾಭವಿದೆ. ಕಷ್ಟದಲ್ಲಿರುವವರಿಗೆ ಸಹಾಯ ಮಾಡುವ ನಿಮ್ಮ ಉದಾರ ಗುಣವು ನಿಮಗೆ ಪ್ರಶಂಸೆ ತಂದುಕೊಡಲಿದೆ. ಮಕ್ಕಳ ಆರೋಗ್ಯದ ಬಗ್ಗೆ ಕಾಳಜಿ ಇರಲಿ.

ಕುಂಭ : ಉದ್ಯಮದ ವಿಚಾರದಲ್ಲಿ ನಿಮಗೂ ಹಾಗೂ ನಿಮ್ಮ ತಂದೆ ನಡುವೆ ವಾದ ಉಂಟಾಗಬಹುದು. ತಾಳ್ಮೆಯಿಂದ ಈ ಪರಿಸ್ಥಿತಿಯನ್ನು ನಿಭಾಯಿಸಿ. ತಾಯಿ ನಿಮಗೆ ಬೆಂಬಲ ನೀಡುತ್ತಾರೆ. ಆತ್ಮೀಯರೊಂದಿಗೆ ಪ್ರೀತಿಯಿಂದ ವರ್ತಿಸಿ.

ಮೀನ : ಎಷ್ಟು ಸಂಪಾದನೆ ಮಾಡಿದರೂ ಆರ್ಥಿಕ ಸ್ಥಿತಿ ಸುಧಾರಿಸುತ್ತಿಲ್ಲ ಎಂದು ಕೊರಗುವ ಮುನ್ನ ಎಲ್ಲೆಲ್ಲಿ ಹಣ ಪೋಲಾಗುತ್ತಿದೆ ಎಂಬುದರ ಬಗ್ಗೆ ಗಮನ ಹರಿಸಿ. ಆಸ್ತಿ ವಿಚಾರದಲ್ಲಿ ಕುಟುಂಬಸ್ಥರ ನಡುವೆ ಕಲಹ ಉಂಟಾಗಬಹುದು. ಅಪರಿಚಿತರಿಂದ ದೂರವಿರಿ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read