ಈ ರಾಶಿಯ ಉದ್ಯೋಗಾಕಾಂಕ್ಷಿಗಳಿಗೆ ಇದೆ ಇಂದು ಶುಭ ಸುದ್ದಿ

ಮೇಷ : ಮನಸ್ಸನ್ನ ಎಂದಿಗೂ ಗೊಂದಲದ ಗೂಡಾಗಿಸಿಕೊಳ್ಳಬೇಡಿ. ಇದರಿಂದ ನಿಮಗೆ ಕೆಲಸ ಕಾರ್ಯಗಳಲ್ಲಿ ಹೆಚ್ಚಿನ ಗಮನ ನೀಡಲು ಸಾಧ್ಯವಾಗೋದಿಲ್ಲ. ಸಂಗಾತಿಯಿಂದ ಶುಭ ಸುದ್ದಿಯನ್ನ ಕೇಳಲಿದ್ದೀರಿ. ವ್ಯಾಪಾರಿಗಳಿಗೆ ಇಂದು ಸಾಮಾನ್ಯ ದಿನವಾಗಿದೆ.

ವೃಷಭ : ನೀವು ಬಹಳ ದಿನಗಳಿಂದ ಕೊಂಡುಕೊಳ್ಳಬೇಕು ಎಂದು ಕನಸು ಕಂಡಿದ್ದ ದುಬಾರಿ ವಸ್ತುವನ್ನ ಇಂದು ಖರೀದಿ ಮಾಡುತ್ತೀರಾ. ಅನೇಕ ಪ್ರಮುಖ ಕೆಲಸಗಳಿಗೆ ಹಿರಿಯರಿಂದ ಉತ್ತಮ ಸಲಹೆ ಸ್ವೀಕರಿಸಲಿದ್ದೀರಿ. ಹಣಕಾಸಿನ ವಿಚಾರದಲ್ಲಿ ಲಾಭ ನಿಮ್ಮದಾಗಲಿದೆ.

ಮಿಥುನ : ವಿದ್ಯಾರ್ಥಿಗಳ ಪರಿಶ್ರಮಕ್ಕೆ ತಕ್ಕ ಪ್ರತಿಫಲ ನೀಡುವ ಸಮಯ ಸನ್ನಿಹಿತವಾಗಲಿದೆ. ಸಿಕ್ಕ ಅವಕಾಶಗಳನ್ನ ಒದ್ದು ಬಳಿಕ ಪಶ್ಚಾತಾಪ ಪಡಬೇಡಿ. ಸ್ನೇಹಿತರ ಹೊಸ ಪ್ರಯತ್ನಕ್ಕೆ ನಿಮ್ಮಿಂದ ಬೆಂಬಲ ಸಿಗಲಿದೆ. ಹಣಕಾಸಿನ ವಿಚಾರದಲ್ಲಿ ಹಿಡಿತ ಸಾಧಿಸಿ.

ಕಟಕ : ನಿಮ್ಮ ಪಾಲಿಗೆ ಇದು ಅದೃಷ್ಟದ ದಿನವಾಗಿದೆ. ನೀವು ಅಂದುಕೊಂಡಿದ್ದು ನೆರವೇರಲಿದೆ. ಮಾತುಗಳ ಮೇಲೆ ನಿಯಂತ್ರಣ ಸಾಧಿಸಿದಷ್ಟೂ ನಿಮಗೆ ಒಳ್ಳೆಯದಾಗಲಿದೆ. ಪಿತ್ರಾರ್ಜಿತ ಆಸ್ತಿಯಲ್ಲಿ ನಿಮ್ಮ ದೀರ್ಘಕಾಲದ ಹೋರಾಟಕ್ಕೆ ಜಯ ಸಿಗಲಿದೆ.

ಸಿಂಹ : ಸುಮ್ಮನೆ ಮಾತನಾಡುತ್ತಾ ಕಾಲಹರಣ ಮಾಡೋದನ್ನ ಬಿಟ್ಟು ಕೆಲಸದ ಕಡೆಗೆ ಗಮನ ನೀಡಿದಲ್ಲಿ ನಿಮಗೆ ಲಾಭ ಕಾದಿದೆ. ಉದ್ಯಮಿಗಳಿಗೆ ಇಂದು ಧನಾಗಮನದ ಸಾಧ್ಯತೆ ಇದೆ. ಕುಟುಂಬದ ಜಗಳ ವಿಚಾರದಲ್ಲಿ ಮೂಗು ತೂರಿಸಲು ಹೋಗಬೇಡಿ.

ಕನ್ಯಾ : ಹೊಸ ಮಾರ್ಗಗಳು ನಿಮ್ಮ ಮುಂದೆ ತೆರೆದುಕೊಳ್ಳಲಿದೆ. ಸಿಕ್ಕ ಅವಕಾಶವನ್ನ ಚೆನ್ನಾಗಿ ಬಳಸಿಕೊಳ್ಳಿ. ಉದ್ಯೋಗಾಕಾಂಕ್ಷಿಗಳಿಗೆ ಇಂದು ಶುಭ ಸುದ್ದಿ ಕೇಳಿಬರಲಿದೆ. ದಾಂಪತ್ಯದಲ್ಲಿ ಬಹುಕಾಲದಿಂದ ಇದ್ದ ಮನಸ್ತಾಪವು ದೂರಾಗಲಿದೆ. ಕಾಲಹರಣ ಮಾಡಬೇಡಿ. ಶ್ರೀಲಕ್ಷ್ಮೀನರಸಿಂಹನನ್ನು ಧ್ಯಾನಿಸಿ.

ತುಲಾ : ಆರೋಗ್ಯದ ಬಗ್ಗೆ ಜಾಗ್ರತೆ ಇರಲಿ. ರಸ್ತೆ ಬದಿಯ ಆಹಾರ ಸೇವನೆ ಮಾಡಬೇಡಿ. ಯಾವುದೇ ಕಠಿಣ ಕೆಲಸವಾದರೂ ಸರಿ ನಿಮ್ಮ ಪ್ರಯತ್ನವನ್ನ ಕೈಬಿಡಬೇಡಿ. ಕಚೇರಿ ಕೆಲಸಗಳು ಸರಾಗವಾಗಿ ನಡೆಯಲಿವೆ. ಸಂಗಾತಿಯಿಂದ ಶುಭ ಸುದ್ದಿಯನ್ನ ಕೇಳಲಿದ್ದೀರಿ.

ವೃಶ್ಚಿಕ : ಕುಟುಂಬದಲ್ಲಿ ಅತಿಯಾದ ಜವಾಬ್ದಾರಿ ಹೊತ್ತಿರುವ ನಿಮಗೆ ಕ್ರಮೇಣವಾಗಿ ವಿಶ್ರಾಂತಿ ಸಿಗಲಿದೆ. ವ್ಯಾಪಾರ-ವ್ಯವಹಾರದಲ್ಲಿ ಲಾಭ ಸಿಕ್ಕಿಲ್ಲ ಎಂಬ ಕಾರಣಕ್ಕೆ ಅಡ್ಡದಾರಿ ಹಿಡಿಯುವ ಪ್ರಯತ್ನ ಬೇಡಬೇ ಬೇಡ. ದಾರಿ ತಪ್ಪಿಸುವವರ ವಿರುದ್ಧ ಜಾಗ್ರತೆಯಿಂದಿರಿ.

ಧನು : ಮಕ್ಕಳ ಬಗ್ಗೆ ಅತಿಯಾಗಿ ಚಿಂತಿಸೋದನ್ನ ಬಿಟ್ಟುಬಿಡಿ. ಕಚೇರಿ ಕೆಲಸದಲ್ಲಿ ನಡೆಯುತ್ತಿರುವ ಕಿರಿಕಿರಿಯಿಂದ ಪಾರಾಗಲು ಹನುಮಂತನನ್ನ ಆರಾಧಿಸಿ. ಜವಳಿ ಉದ್ಯಮಿಗಳಿಗೆ ಇಂದು ಒಳ್ಳೆಯ ದಿನ. ಮಾದಕ ವ್ಯಸನ ಮಾಡೋದನ್ನ ತ್ಯಜಿಸದೇ ಹೋದಲ್ಲಿ ಗಂಭೀರ ಅನಾರೋಗ್ಯ ಸಮಸ್ಯೆಗೆ ತುತ್ತಾಗಲಿದ್ದೀರಿ.

ಮಕರ : ವಿದ್ಯಾರ್ಥಿಗಳು ಓದಿನತ್ತ ಹೆಚ್ಚು ಗಮನ ಹರಿಸಲಿದ್ದಾರೆ. ವೃತ್ತಿರಂಗದಲ್ಲಿ ಕಿರಿಕಿರಿ ಅನುಭವಿಸುತ್ತೀರಾ. ಕುಟುಂಬಸ್ಥರ ಹಿತಾಸಕ್ತಿ ಕಾಪಾಡಲು ಹೋಗಿ ನಿಮ್ಮತನವನ್ನ ಕಳೆದುಕೊಳ್ಳಬೇಡಿ. ಹಣ ಸಂಪಾದಿಸುವಲ್ಲಿ ಅಡ್ಡ ದಾರಿ ಬೇಡ.

ಕುಂಭ : ಹಣಕಾಸಿನ ಸಮಸ್ಯೆಯನ್ನು ಎದುರಿಸಲಿದ್ದೀರಿ. ಆಸ್ತಿ ವಿಚಾರದಲ್ಲಿ ಬಿಕ್ಕಟ್ಟನ್ನ ಎದುರಿಸುತ್ತೀರಾ. ದಾಂಪತ್ಯ ಜೀವನದಲ್ಲಿ ಸುಖವಿದೆ. ನೂತನ ದಂಪತಿಗೆ ಸಂತಾನ ಭಾಗ್ಯವಿದೆ. ವಿದ್ಯಾರ್ಥಿಗಳು ಇನ್ನಷ್ಟು ಕಠಿಣ ಪರಿಶ್ರಮ ಪಡಬೇಕಿದೆ. ಸಾರ್ವಜನಿಕ ಜೀವನದಲ್ಲಿ ಮನ್ನಣೆ ಸಿಗಲಿದೆ.

ಮೀನ : ಆರ್ಥಿಕ ದೃಷ್ಟಿಕೋನದಿಂದ ನಿಮಗಿದು ಶುಭ ದಿನವಾಗಿದೆ. ರಾಜಕೀಯ ಜೀವನದಲ್ಲಿ ಉತ್ತಮ ಅವಕಾಶ ಕೂಡಿ ಬರಲಿದೆ. ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಯಶಸ್ಸನ್ನು ಸಾಧಿಸುತ್ತೀರಾ. ಧಾರ್ಮಿಕ ಕ್ಷೇತ್ರಕ್ಕೆ ಪ್ರಯಾಣ ಬೆಳೆಸುತ್ತೀರಾ. ದೂರ ಪ್ರಯಾಣದ ಅವಕಾಶ ಕೂಡಿ ಬಂದರೂ ಸಹ ಹಣಕಾಸಿನ ಸಮಸ್ಯೆ ಎದುರಾಗಲಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read