ಈ ರಾಶಿಯವರ ಬಹು ದಿನಗಳ ಕನಸೊಂದು ಇಂದು ನನಸಾಗಲಿದೆ

ಮೇಷ : ಉದ್ಯಮದಲ್ಲಿ ಏಳ್ಗೆ ಕಾಣುತ್ತಿಲ್ಲ ಎಂದು ಕೊರಗಬೇಡಿ. ಹೊಸ ವರ್ಷದಿಂದ ನಿಮ್ಮ ಅದೃಷ್ಟ ಖುಲಾಯಿಸಲಿದೆ. ಮನೆಯಲ್ಲಿ ಧಾರ್ಮಿಕ ಕಾರ್ಯಗಳು ಜರುಗಲಿದೆ. ಅಪರಿಚಿತ ವ್ಯಕ್ತಿಯ ಭೇಟಿಯು ಲಾಭ ತಂದುಕೊಡಲಿದೆ.

ವೃಷಭ : ಕಚೇರಿಯಲ್ಲಿ ನಿಮ್ಮ ಸ್ಪರ್ಧಿಯು ನಿಮ್ಮನ್ನು ಹಿಮ್ಮೆಟ್ಟಬಹುದು. ಹೀಗಾಗಿ ಮೈಯೆಲ್ಲ ಕಣ್ಣಾಗಿಸಿಕೊಂಡು ಕೆಲಸವನ್ನು ಮಾಡಿ. ಕೋರ್ಟ್​ ಕಚೇರಿ ವ್ಯವಹಾರಗಳಲ್ಲಿ ಮುನ್ನಡೆ ಕಾದಿದೆ. ಔತಣ ಕೂಟದಲ್ಲಿ ಭಾಗಿಯಾಗಲಿದ್ದೀರಿ. ಮಕ್ಕಳು ಸಾಧನೆ ಮಾಡಲಿದ್ದಾರೆ.

ಮಿಥುನ : ನೀವು ಇಡೀ ದಿನವನ್ನು ಅತ್ಯಂತ ಸಂತೋಷದಿಂದ ಕಳೆಯಲಿದ್ದೀರಿ. ವ್ಯವಹಾರವನ್ನು ವಿಸ್ತರಿಸಲು ತಂದೆಯು ಆರ್ಥಿಕ ಸಹಾಯ ನೀಡಲಿದ್ದಾರೆ. ಅಂದುಕೊಂಡ ಕಾರ್ಯಗಳಲ್ಲಿ ಯಶಸ್ಸನ್ನು ಕಾಣಲಿದ್ದೀರಿ. ವಿದ್ಯಾರ್ಥಿಗಳಿಗೆ ಶುಭವಿದೆ.

ಕಟಕ : ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಅತ್ಯುತ್ತಮ ಸಾಧನೆ ಮಾಡಲಿದ್ದಾರೆ. ಮಕ್ಕಳ ಓದಿಗಾಗಿ ಅತಿಯಾದ ಖರ್ಚು ಮಾಡಬೇಕಾಗಿ ಬರಬಹುದು. ಪೋಷಕರ ಆರೋಗ್ಯದಲ್ಲಿ ಏರುಪೇರು ಉಂಟಾಗುವ ಸಾಧ್ಯತೆ ಇದೆ. ಸ್ನೇಹಿತರ ಜೊತೆ ಉತ್ತಮ ಸಮಯ ಕಳೆಯಲಿದ್ದೀರಿ.

ಸಿಂಹ : ಮನೆಯಲ್ಲಿ ಆರ್ಥಿಕ ಪರಿಸ್ಥಿತಿಯು ಸುಧಾರಿಸಲಿದೆ. ಸಂಗಾತಿಯು ಹೊಸ ಕೆಲಸವನ್ನು ಹುಡುಕಿಕೊಳ್ಳಲಿದ್ದಾರೆ. ನಿಮಗಿಂತ ಕೆಳ ಹುದ್ದೆಯವರ ಮೇಲೆ ದರ್ಪ ತೋರಬೇಡಿ. ವಾಹನ ಖರೀದಿ ಸಾಧ್ಯತೆ ಇದೆ.

ಕನ್ಯಾ : ಕಚೇರಿಯಲ್ಲಿ ಕೆಲಸ ಮಾಡುತ್ತಿರುವವರಿಗೆ ಬಡ್ತಿಯ ಜೊತೆಯಲ್ಲಿ ವಿದೇಶಿ ಪ್ರಯಾಣದ ಭಾಗ್ಯ ಕೂಡ ಲಭಿಸುವ ಸಾಧ್ಯತೆ ಇದೆ. ಸಂಗಾತಿಯ ಅತಿಯಾದ ಖರ್ಚು ನಿಮ್ಮ ಜೇಬನ್ನು ಸುಡುತ್ತಿದೆ. ಆದಷ್ಟು ಹಣ ಉಳಿತಾಯ ಮಾಡುವ ಮಾರ್ಗ ಹುಡುಕಿಕೊಳ್ಳಿ.

ತುಲಾ : ಸ್ನೇಹಿತರ ಜೊತೆ ಹಣಕಾಸಿನ ವಿಚಾರಕ್ಕೆ ಉಂಟಾದ ವೈಮನಸ್ಯವು ಶಮನವಾಗಲಿದೆ. ಅತ್ತೆ – ಸೊಸೆ ನಡುವೆ ಕಲಹ ಉಂಟಾಗುವ ಸಾಧ್ಯತೆ ಇದೆ. ಇದರಿಂದ ಇಡೀ ಮನೆಯ ನೆಮ್ಮದಿ ಹಾಳಾಗಲಿದೆ. ಹಣ್ಣಿನ ವ್ಯಾಪಾರಿಗಳಿಗೆ ವಿಶೇಷ ಲಾಭವಿದೆ.

ವೃಶ್ಚಿಕ : ಶುಭ ಕಾರ್ಯಗಳಿಗಾಗಿ ಖರ್ಚು ಮಾಡಬೇಕಾಗಿ ಬರಬಹುದು. ಕಚೇರಿ ಕೆಲಸದ ನಿಮಿತ್ತ ದೂರದ ಊರಿಗೆ ಪ್ರಯಾಣ ಬೆಳೆಸಲಿದ್ದೀರಿ. ದರ್ಜಿ, ಪಿಗ್ಮಿ ಹಾಗೂ ಶಿಕ್ಷಕ ವೃತ್ತಿಯಲ್ಲಿರುವವರಿಗೆ ಈ ದಿನ ಶುಭಕರವಾಗಿದೆ. ವ್ಯಾಪಾರ ವ್ಯವಹಾರಗಳಲ್ಲಿ ಲಾಭ ಕಾದಿದೆ.

ಧನು : ವಿದ್ಯಾರ್ಥಿಗಳಿಗೆ ವಿದೇಶದಲ್ಲಿ ಉನ್ನತ ವ್ಯಾಸಂಗಕ್ಕೆ ಅವಕಾಶ ಲಭಿಸಲಿದೆ. ಪುತ್ರಿಗೆ ವೈವಾಹಿಕ ಸಂಬಂಧ ಕೂಡಿಬಾರದ ಹಿನ್ನೆಲೆಯಲ್ಲಿ ಅತಿಯಾಗಿ ಕೊರಗಲಿದ್ದೀರಿ. ಗಣೇಶನನ್ನು ಆರಾಧಿಸಿ. ಎಲ್ಲವೂ ಒಳಿತಾಗಲಿದೆ.

ಮಕರ : ಮಕ್ಕಳು ಅನಾರೋಗ್ಯಕ್ಕೀಡಾಗಲಿದ್ದಾರೆ. ಆದರೆ ಚಿಂತೆ ಬೇಡ. ಮನೆ ಮದ್ದಿನ ಮೂಲಕವೇ ನೀವಿದಕ್ಕೆ ಪರಿಹಾರ ನೀಡಬಹುದು. ಕಲಾವಿದರಿಗೆ ಉತ್ತಮ ಅವಕಾಶಗಳು ಹುಡುಕಿಕೊಂಡು ಬರಲಿದೆ. ಕಂಕಣ ಭಾಗ್ಯ ಕಾದಿದೆ.

ಕುಂಭ : ಕ್ಷುಲ್ಲಕ ಕಾರಣಕ್ಕೆ ನೆರೆಮನೆಯವರ ಜೊತೆ ಗಲಾಟೆ ಆಗಬಹುದು. ಯಾವುದೇ ಸಂದರ್ಭದಲ್ಲಿಯೂ ಮಾತಿನ ಮೇಲಿನ ಹಿಡಿತ ಕಳೆದುಕೊಳ್ಳಬೇಡಿ. ನಿಮ್ಮ ಬಹು ದಿನಗಳ ಕನಸೊಂದು ನನಸಾಗಲಿದೆ.

ಮೀನ: ತಾಯಿಯು ನಿಮ್ಮ ಹೊಸ ಯೋಜನೆಗಳಿಗೆ ಬೆಂಬಲ ನೀಡಲಿದ್ದಾರೆ. ಇದು ನಿಮಗೆ ಹತ್ತಾನೆಯ ಬಲವನ್ನು ತಂದುಕೊಡಲಿದೆ. ಓದಿನಲ್ಲಿ ಮಕ್ಕಳ ಪ್ರಗತಿಯು ನಿಮಗೆ ಹೆಮ್ಮೆ ಎನಿಸಲಿದೆ. ಆರ್ಥಿಕವಾಗಿ ಇಂದು ಕೊಂಚ ಕಷ್ಟ ಎದುರಾದೀತು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read