ಈ ರಾಶಿಯವರಿಗೆ ಹುಡುಕಿಕೊಂಡು ಬರಲಿದೆ ಹೊಸ ಅವಕಾಶ

ಮೇಷ : ನಿಮ್ಮ ಸಾಧನೆಯು ಪೋಷಕರ ಗೌರವ ಹೆಚ್ಚಿಸಲಿದೆ. ಕಚೇರಿ ಕೆಲಸದ ನಿಮಿತ್ತ ವಾರಗಳ ಕಾಲ ದೂರ ಪ್ರಯಾಣ ಮಾಡಿರುವ ನೀವು ಅತಿಯಾಗಿ ದಣಿಯಲಿದ್ದೀರಿ. ದಂಪತಿ ಇಂದು ಉತ್ತಮ ಸಮಯವನ್ನು ಕಳೆಯಲಿದ್ದಾರೆ.

ವೃಷಭ : ಕಚೇರಿಯಲ್ಲಿ ಒತ್ತಡದಿಂದ ಕೆಲಸ ಮಾಡಬೇಕಾದ ಪರಿಸ್ಥಿತಿ ಎದುರಾಗಲಿದೆ. ಮೇಲಾಧಿಕಾರಿಗಳನ್ನು ಭೇಟಿಯಾಗುವ ಮುನ್ನ ಎಲ್ಲಾ ದಾಖಲೆಗಳನ್ನು ಸರಿಯಾಗಿ ಇಟ್ಟುಕೊಳ್ಳಿ. ಇಲ್ಲ ಅಂದರೆ ಮೇಲಾಧಿಕಾರಿಗಳ ಕೆಂಗಣ್ಣಿಗೆ ಗುರಿಯಾಗಲಿದ್ದೀರಿ. ಕಂಕಣ ಭಾಗ್ಯವಿದೆ.

ಮಿಥುನ : ವೈವಾಹಿಕ ಜೀವನದಲ್ಲಿ ಉಂಟಾಗಿರುವ ಸಮಸ್ಯೆಗಳು ಒಂದೊಂದಾಗಿಯೇ ಶಮನವಾಗಲಿದೆ. ಕಾನೂನಿನ ಸಂಬಂಧಪಟ್ಟ ವ್ಯಾಜ್ಯಗಳಲ್ಲಿ ಯಶಸ್ಸು ಸಾಧಿಸಲಿದ್ದೀರಿ.

ಕಟಕ : ಹೊಸ ಹೂಡಿಕೆಗಳನ್ನು ಮಾಡಲು ಇದು ಒಳ್ಳೆಯ ದಿನವಾಗಿದೆ. ಸಾರ್ವಜನಿಕ ಜೀವನದಲ್ಲಿ ಉತ್ತಮ ಗೌರವ ಸಂಪಾದಿಸಲಿದ್ದೀರಿ. ವೈದ್ಯಕೀಯ ವೃತ್ತಿಯಲ್ಲಿ ಇರುವವರಿಗೆ ಒತ್ತಡ ಹೆಚ್ಚಾಗಲಿದೆ.

ಸಿಂಹ : ಸರ್ಕಾರಿ ಕೆಲಸಗಳಲ್ಲಿ ವಿಳಂಬ ಉಂಟಾಗಲಿದೆ. ಇದರಿಂದ ನಿಮಗೆ ಅನೇಕ ರೀತಿಯಲ್ಲಿ ತೊಂದರೆ ಉಂಟಾಗಲಿದೆ. ಲಾಭವನ್ನು ಪಡೆಯಲು ಹಲವು ಮಾರ್ಗಗಳನ್ನು ಕಂಡುಕೊಳ್ಳಲಿದ್ದೀರಿ. ಭೂ ವಾಜ್ಯಗಳು ಸುಧಾರಿಸಲಿವೆ.

ಕನ್ಯಾ : ಭೂಮಿ ಖರೀದಿ ಮಾಡಬೇಕು ಎಂದುಕೊಂಡವರಿಗೆ ಈ ದಿನ ಶುಭ ದಿನವಾಗಿದೆ. ಕಚೇರಿ ಕೆಲಸದಲ್ಲಿ ಬಡ್ತಿ ಭಾಗ್ಯವಿದೆ. ಹೊಸ ಕಚೇರಿ ವಾತಾವರಣಕ್ಕೆ ಹೊಂದಿಕೊಳ್ಳಲಿದ್ದೀರಿ. ವಿದ್ಯಾರ್ಥಿಗಳು ಅಂದುಕೊಂಡ ಕಾರ್ಯಗಳಲ್ಲಿ ಯಶಸ್ಸನ್ನು ಸಾಧಿಸಲಿದ್ದಾರೆ.

ತುಲಾ : ಸಾರ್ವಜನಿಕ ಸ್ಥಳಗಳಲ್ಲಿ ಮಾತನಾಡುವ ಮುನ್ನ ನಾಲಿಗೆ ಮೇಲೆ ಹಿಡಿತವಿರಲಿ. ಇಲ್ಲವಾದಲ್ಲಿ ನೀವೇ ಪೇಚಿಗೆ ಸಿಲುಕಲಿದ್ದೀರಿ. ಪುರೋಹಿತರಿಗೆ ಇದು ಒಳ್ಳೆಯ ದಿನವಾಗಿದೆ. ಹಿರಿಯರು ತೀರ್ಥಯಾತ್ರೆಗೆ ತೆರಳಲಿದ್ದಾರೆ.

ವೃಶ್ಚಿಕ : ನಿಮ್ಮ ಉದ್ಯಮದಲ್ಲಿ ತಂದೆಯು ಮಹತ್ವದ ಪಾತ್ರ ವಹಿಸಲಿದ್ದಾರೆ. ಅನೇಕ ಅನಿರೀಕ್ಷಿತ ಘಟನೆಗಳು ನಿಮ್ಮ ಮನೆಯಲ್ಲಿ ಜರುಗಲಿದೆ. ವಕೀಲರಿಗೆ ಈ ದಿನ ಹೆಚ್ಚು ಶುಭಕಾರಿಯಾಗಿದೆ. ಹೆಚ್ಚೆಚ್ಚು ಅವಕಾಶಗಳು ನಿಮ್ಮನ್ನು ಹುಡುಕಿ ಬರಲಿದೆ.

ಧನು : ಈ ದಿನ ನಿಮಗೆ ಮಿಶ್ರ ಫಲಿತಾಂಶ ನೀಡಲಿದೆ. ಜವಳಿ ಉದ್ಯಮಿಗಳು, ಹಣ್ಣು ತರಕಾರಿ ವ್ಯಾಪಾರಿಗಳಿಗೆ ಈ ದಿನ ಲಾಭ ತಂದುಕೊಡಲಿದೆ. ಫ್ಲೈವುಡ್​ ಹಾಗೂ ಎಲೆಕ್ಟ್ರಾನಿಕ್​ ವಸ್ತು ಮಾರಾಟಗಾರರಿಗೆ ಈ ದಿನ ಯೋಗ್ಯವಾಗಿಲ್ಲ.

ಮಕರ : ವೈದ್ಯಕೀಯ ವೃತ್ತಿಯಲ್ಲಿ ಇರುವವರಿಗೆ ವಿದೇಶ ಪ್ರಯಾಣ ಯೋಗ ಹುಡುಕಿಕೊಂಡು ಬರಲಿದೆ. ವಿಮಾ ವ್ಯವಹಾರಗಳಲ್ಲಿ ಲಾಭ ಕಂಡುಕೊಳ್ಳಲಿದ್ದೀರಿ. ಕಲಾವಿದರಿಗೆ ಈ ದಿನ ಹೊಸ ಅವಕಾಶಗಳು ಸಿಗಲಿದೆ. ವಿದ್ಯಾರ್ಥಿಗಳಿಗೆ ಲಾಭವಿದೆ.

ಕುಂಭ : ಇಂದು ನೀವು ಕೋರ್ಟ್ ಕಚೇರಿ ವ್ಯವಹಾರಗಳಲ್ಲಿ ಮುನ್ನಡೆ ಸಾಧಿಸಲಿದ್ದೀರಿ. ವಿದ್ಯಾರ್ಥಿಗಳು ಉತ್ತಮ ಫಲಿತಾಂಶ ಪಡೆಯಲಿದ್ದೀರಿ. ಕೆಲಸದ ಸ್ಥಳವು ನೆಮ್ಮದಿಯಿಂದ ಕೂಡಿರಲಿದೆ. ಖರ್ಚುಗಳ ಮೇಲೆ ನಿಯಂತ್ರಣವಿರಲಿ. ಮಕ್ಕಳ ಆರೋಗ್ಯದ ಕಡೆಗೆ ಜಾಗ್ರತೆ ವಹಿಸಿ.

ಮೀನ : ಪುತ್ರನ ಆರೋಗ್ಯದಲ್ಲಿ ಏರುಪೇರು ಉಂಟಾಗಲಿದೆ. ಇದರಿಂದ ಮನೆಯಲ್ಲಿ ಆತಂಕ ಎದುರಾಗಲಿದೆ. ಕುಟುಂಬಸ್ಥರ ಜೊತೆಯಲ್ಲಿ ಧಾರ್ಮಿಕ ಕ್ಷೇತ್ರಗಳಿಗೆ ತೆರಳಲಿದ್ದೀರಿ. ಹೊಸ ಹೂಡಿಕೆಯು ಲಾಭವನ್ನು ತಂದುಕೊಡಲಿದೆ. ಹಿರಿಯ ಸಹೋದರರು ನಿಮ್ಮ ಆರ್ಥಿಕ ಸಂಕಷ್ಟಕ್ಕೆ ನೆರವಾಗಲಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read