ಈ ರಾಶಿಯವರಿಗೆ ಇದೆ ಇಂದು ಆರ್ಥಿಕ ಸುಧಾರಣೆ

ಮೇಷ : ವಿನಾಕಾರಣ ನಿಂದನೆಗೆ ಒಳಗಾಗುವ ಸಾಧ್ಯತೆ ಇದೆ. ಇಂದು ನಿಮ್ಮ ಆರ್ಥಿಕ ಸ್ಥಿತಿಯು ಸುಧಾರಿಸಲಿದೆ. ಆದಷ್ಟು ಉಳಿತಾಯ ಯೋಜನೆಗಳಲ್ಲಿ ಹಣ ಹೂಡಿಕೆ ಮಾಡಿ. ಇದರಿಂದ ಭವಿಷ್ಯದಲ್ಲಿ ನಿಮಗೆ ಒಳಿತಾಗಲಿದೆ. ದಾಂಪತ್ಯ ಜೀವನದಲ್ಲಿ ನೆಮ್ಮದಿ ಇರಲಿದೆ.

ವೃಷಭ : ಮನೆಯಲ್ಲಿ ಶಾಂತಿಯುತ ವಾತಾವರಣ ಇರಲಿದೆ. ಇದರಿಂದ ನೀವು ನಿರಾಳವಾಗಿ ಇರಲಿದ್ದೀರಿ. ಕಚೇರಿ ಕೆಲಸದಲ್ಲಿ ತೀರಾ ಗೊಂದಲಕ್ಕೆ ಒಳಗಾಗಬೇಡಿ. ಇದರಿಂದ ನಿಮ್ಮ ಆತ್ಮವಿಶ್ವಾಸ ಕುಗ್ಗಲಿದೆ. ಹಳೆಯ ಸಾಲಗಳನ್ನು ತೀರಿಸಲಿದ್ದೀರಿ.

ಮಿಥುನ : ಹಿರಿಯರ ಆರೋಗ್ಯದಲ್ಲಿ ಏರುಪೇರು ಉಂಟಾಗಲಿದೆ. ಇದು ನಿಮ್ಮನ್ನು ಚಿಂತೆಗೆ ದೂಡಲಿದೆ. ಕಚೇರಿ ಕೆಲಸದಲ್ಲಿ ನೆಮ್ಮದಿ ಇದೆ. ಗುರುವಿನ ಅನುಗ್ರಹದಿಂದ ವಿದ್ಯಾರ್ಥಿಗಳಿಗೆ ಅಂದುಕೊಂಡ ಕಾರ್ಯಗಳು ಈಡೇರಲಿದೆ.

ಕಟಕ : ಹಳೆಯ ಸಾಲಗಳೆಲ್ಲ ತೀರುವುದರಿಂದ ನೆಮ್ಮದಿಯಿಂದ ಇರಲಿದ್ದೀರಿ. ಇದು ಮಾತ್ರವಲ್ಲದೇ ಆರ್ಥಿಕವಾಗಿಯೂ ಸುಧಾರಣೆ ಕಂಡು ಬರಲಿದೆ. ವಿದ್ಯಾರ್ಥಿಗಳಿಗೆ ವಿದೇಶಿ ಪ್ರಯಾಣದ ಭಾಗ್ಯವಿದೆ. ಕೋಪದ ಕೈಗೆ ಬುದ್ಧಿ ಕೊಡಬೇಡಿ. ಇದರಿಂದ ನೀವೇ ತೊಂದರೆಗೆ ಒಳಗಾಗಲಿದ್ದೀರಿ.

ಸಿಂಹ : ಕಾರ್ಯಕ್ಷೇತ್ರದಲ್ಲಿ ಮನ್ನಣೆ ಸಿಗಲಿದೆ. ಪ್ರಭಾವಿ ವ್ಯಕ್ತಿಗಳ ಸಹಾಯದಿಂದ ಹಳೆಯ ಆಸ್ತಿ ವಾಜ್ಯಗಳ ಸಮಸ್ಯೆಯಿಂದ ಪಾರಾಗಲಿದ್ದೀರಿ. ಬೆಂಕಿಯಿಂದ ಅಂತರ ಕಾಯ್ದುಕೊಳ್ಳಿ. ಹಣಕಾಸಿನ ವಿಚಾರದಲ್ಲಿ ಕುಟುಂಬಸ್ಥರ ಜೊತೆಯೇ ಮನಸ್ತಾಪ ಉಂಟಾಗಲಿದೆ.

ಕನ್ಯಾ : ಸಾರ್ವಜನಿಕ ಕ್ಷೇತ್ರದಲ್ಲಿ ಮನ್ನಣೆ ಸಿಗಲಿದೆ. ಕ್ಷುಲ್ಲಕ ಕಾರಣಕ್ಕೆ ತಂದೆಯೊಡನೆ ವಾಗ್ವಾದ ಉಂಟಾಗುವ ಸಾಧ್ಯತೆ ಇದೆ. ವೈವಾಹಿಕ ಸಂಬಂಧಕ್ಕೆಂದು ಅರಸುತ್ತಿರುವವರಿಗೆ ಇಂದು ಕಂಕಣ ಭಾಗ್ಯ ಕೂಡಿ ಬರಲಿದೆ. ಜವಳಿ ಉದ್ಯಮಿಗಳಿಗೆ ಲಾಭವಿದೆ.

ತುಲಾ : ಅತಿ ವಿನಯಂ ದೂರ್ತ ಲಕ್ಷಣಂ ಎಂಬ ಗಾದೆ ಮಾತಿದೆ. ಈ ಮಾತನ್ನು ತಲೆಯಲ್ಲಿ ಇಟ್ಟುಕೊಂಡಿರಿ. ಮೇಲಾಧಿಕಾರಿಗಳ ವಿಶ್ವಾಸ ಗಳಿಸಿಕೊಳ್ಳುವ ಭರದಲ್ಲಿ ಕೆಲ ಭಾರವನ್ನೇ ಮೈಮೇಲೆ ಎಳೆದುಕೊಳ್ಳದಿರಿ. ಆರೋಗ್ಯದಲ್ಲಿ ಏರುಪೇರು ಉಂಟಾಗುವ ಸಾಧ್ಯತೆ ಇದೆ.

ವೃಶ್ಚಿಕ : ಹಣಕಾಸಿನ ವ್ಯವಹಾರದಲ್ಲಿ ಎಚ್ಚರಿಕೆ ಇರಲಿ. ಇಲ್ಲವಾದಲ್ಲಿ ಸ್ನೇಹಿತರೇ ನಿಮಗೆ ಮೋಸ ಮಾಡುವ ಸಾಧ್ಯತೆ ಇದೆ. ವ್ಯವಹಾರ ಸಂಬಂಧ ಕೆಲ ಸಮಸ್ಯೆಗಳು ನಿಮ್ಮನ್ನು ಕಾಡಲಿದೆ. ಸಂಕಷ್ಟದ ನಡುವೆಯೂ ಶುಭ ಸುದ್ದಿಯನ್ನು ಕೇಳಲಿದ್ದೀರಿ.

ಧನು : ಆತುರದಲ್ಲಿ ಯಾವುದೇ ನಿರ್ಧಾರ ಕೈಗೊಳ್ಳಬೇಡಿ. ಇದರಿಂದ ಮುಂದಿನ ದಿನಗಳಲ್ಲಿ ಭಾರೀ ತಲೆದಂಡ ತೆರುವ ದಿನ ಬರಬಹುದು. ಸಂಗಾತಿಯೊಂದಿಗೆ ಮನಸ್ತಾಪ ಉಂಟಾಗುವ ಸಾಧ್ಯತೆ ಇದೆ.

ಮಕರ : ಹಿರಿಯರ ವ್ಯವಹಾರವನ್ನು ಮುಂದುವರಿಸುವ ಬಗ್ಗೆ ಕುಟುಂಬಸ್ಥರ ಜೊತೆ ಚರ್ಚೆ ಮಾಡಲಿದ್ದೀರಿ. ಕಲಾವಿದರಿಗೆ ಇಂದು ಉತ್ತಮ ಅವಕಾಶಗಳು ಹುಡುಕಿಕೊಂಡು ಬರಲಿದೆ. ಮಕ್ಕಳಿಗೆ ಓದಿನಲ್ಲಿ ಆಸಕ್ತಿ ಕಡಿಮೆಯಾಗಿದೆ. ಉದ್ಯೋಗ ಸ್ಥಳ ಬದಲಾವಣೆ ಮಾಡಲಿದ್ದೀರಿ.

ಕುಂಭ : ಕಾರ್ಯಕ್ಷೇತ್ರದಲ್ಲಿ ಅತಿಯಾದ ಹೊರೆಯನ್ನು ಹೊರಬೇಡಿ. ಉದ್ಯಮಿಗಳು ಇಂದು ನಷ್ಟ ಅನುಭವಿಸಲಿದ್ದಾರೆ. ಆಸ್ತಿ ವ್ಯವಹಾರದಲ್ಲಿ ಮೋಸಕ್ಕೆ ಒಳಗಾಗುವಿರಿ. ನವವಿವಾಹಿತರಿಗೆ ಸಂತಾನ ಭಾಗ್ಯವಿದೆ. ಸಾಲಗಾರರು ಸರಿಯಾದ ಸಮಯಕ್ಕೆ ಬಾಕಿ ಹಣ ನೀಡಲಿದ್ದಾರೆ.

ಮೀನ : ಅಂದುಕೊಂಡ ಕಾರ್ಯಗಳು ಮಂದಗತಿಯಲ್ಲಿ ಸಾಗಲಿದೆ. ಹಳೆಯ ಸಾಲಗಳು ತೀರಲಿದೆ. ಕೋರ್ಟ್ ಕಚೇರಿ ವ್ಯವಹಾರಗಳಲ್ಲಿ ಮುನ್ನಡೆ ಇದೆ. ಹಲವು ರೀತಿಯಲ್ಲಿ ಧನಾಗಮನವಿದೆ. ವ್ಯಾವಹಾರಿಕವಾಗಿ ಏಳ್ಗೆ ಇದೆ. ಶಾಂತ ರೀತಿಯಲ್ಲಿ ವರ್ತಿಸಿ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read