ಈ ರಾಶಿಯವರಿಗೆ ಇಂದು ಉತ್ತಮವಾಗಿರಲಿದೆ ಹಣಕಾಸಿನ ಸ್ಥಿತಿ

ಮೇಷ : ವ್ಯಾಪಾರ – ವ್ಯವಹಾರದಲ್ಲಿ ಹಿನ್ನಡೆಯಾಗುವ ಸಾಧ್ಯತೆ ಇದೆ. ಕುಟುಂಬದಲ್ಲಿ ಕೊಂಚ ಕಿರಿಕಿರಿ, ಗದ್ದಲಗಳು ಉಂಟಾಗಬಹುದು. ಆಪ್ತರೊಂದಿಗೆ ಸಮಾಲೋಚನೆ ನಡೆಸಿ, ಹಿಡಿದ ಕಾರ್ಯ ನಿಧಾನವಾರದೂ ಸರಿ ಕೈಗೂಡಲಿದೆ.

ವೃಷಭ : ಸಂವಹನ ಕೊರತೆಯಿಂದಾಗಿ ಕಚೇರಿ ಕೆಲಸದಲ್ಲಿ ಹಿನ್ನಡೆ ಅನುಭವಿಸಲಿದ್ದೀರಿ. ಯಾವುದೇ ಕಾರಣಕ್ಕೂ ಸಾಲದ ವ್ಯವಹಾರಗಳಿಗೆ ಕೈ ಹಾಕಬೇಡಿ. ಆಪ್ತರು ಎಂದ ಮಾತ್ರಕ್ಕೆ ಅವರು ಹೇಳಿರೋದೆಲ್ಲ ಸರಿ ಎಂಬ ಭಾವನೆ ಬಿಡಿ.

ಮಿಥುನ : ಹಣಕಾಸಿನ ಸ್ಥಿತಿ ಉತ್ತಮವಾಗಿರಲಿದೆ. ಗರ್ಭಿಣಿಯರು ಹಾಗೂ ವೃದ್ಧರು ಆರೋಗ್ಯದ ಕಡೆಗೆ ಹೆಚ್ಚಿನ ಕಾಳಜಿ ವಹಿಸಿ. ಬೆನ್ನು ನೋವಿನ ಸಮಸ್ಯೆ ಭಾದಿಸುವ ಸಾಧ್ಯತೆ ಇದೆ.

ಕಟಕ : ವ್ಯವಹಾರಗಳಲ್ಲಿ ಕ್ರಮೇಣವಾಗಿ ಮುನ್ನಡೆ ಸಾಧಿಸಲಿದ್ದೀರಿ. ದಾಂಪತ್ಯ ಜೀವನದಲ್ಲಿ ನೆಮ್ಮದಿ ಇದೆ. ಸಂಗಾತಿಯಿಂದ ಉತ್ತಮ ಸಲಹೆಗಳನ್ನ ನಿರೀಕ್ಷಿಸಲಿದ್ದೀರಿ. ವಿದ್ಯಾರ್ಥಿಗಳಿಗೆ ಶುಭ ಸುದ್ದಿ ಇದೆ.

ಸಿಂಹ : ಜವಳಿ ಉದ್ಯಮಿಗಳಿಗೆ, ಹಣ್ಣಿನ ವ್ಯಾಪಾರಿಗಳಿಗೆ ಇಂದು ಶುಭ ದಿನ, ಸರ್ಕಾರಿ ನೌಕರರಿಗೆ ಇಂದು ನೆಮ್ಮದಿ ಇದೆ. ಮನೆಯಲ್ಲಿ ಶುಭ ಕಾರ್ಯದ ಮುನ್ಸೂಚನೆ ಸಿಗಲಿದೆ. ಕುಲದೇವತೆಯನ್ನ ಆರಾಧಿಸಿ.

ಕನ್ಯಾ : ಮದುವೆ ಸಂಬಂಧಕ್ಕಾಗಿ ಹುಡುಕಾಡುತ್ತಿರುವವರಿಗೆ ಇಂದು ಸಂಬಂಧವೊಂದು ಕೂಡಿ ಬರಲಿದೆ. ನವದಂಪತಿಗೆ ಸಂತಾನ ಭಾಗ್ಯವಿದೆ. ವಿದ್ಯಾರ್ಥಿಗಳಿಗೆ ಇದು ಸಾಮಾನ್ಯ ದಿನವಾಗಿದೆ.

ತುಲಾ : ಕಚೇರಿ ಕೆಲಸದ ನಿಮಿತ್ತ ದೂರ ಪ್ರಯಾಣ ಮಾಡಬೇಕಾಗಿ ಬರಬಹುದು. ಅನಾರೋಗ್ಯ ಕಾರಣದಿಂದಾಗಿ ಕೆಲಸ ಕಾರ್ಯದ ಮೇಲಿನ ಏಕಾಗ್ರತೆಗೆ ಭಂಗ ಉಂಟಾಗಲಿದೆ. ಹಳೆಯ ಸಾಲಗಳು ತೀರೋದ್ರಿಂದ ನೀವಿಂದು ಸಂತಸವಾಗಿ ಇರಲಿದ್ದೀರಿ. ಬೆನ್ನು ನೋವಿನ ಸಮಸ್ಯೆ ಭಾದಿಸುವ ಸಾಧ್ಯತೆ ಇದೆ.

ವೃಶ್ಚಿಕ : ಸಂತಾನ ಭಾಗ್ಯವಿದೆ. ಉದ್ಯೋಗಕ್ಕಾಗಿ ಅರಸುತ್ತಿರುವವರು ಇಂದು ಶುಭ ಸುದ್ದಿಯನ್ನ ಕೇಳಲಿದ್ದೀರಿ. ಮಕ್ಕಳ ಒತ್ತಾಯಕ್ಕೆ ಮಣಿದು ವಾಹನ ಖರೀದಿ ಮಾಡುವ ಸಾಧ್ಯತೆ ಇದೆ. ಸಂಗಾತಿಯಿಂದ ಉತ್ತಮ ಉಡುಗೊರೆ ಪಡೆಯಲಿದ್ದೀರಿ.

ಧನು : ನಾನು ಮಾಡಿದ್ದೇ ಸರಿ ಎಂಬ ಮನೋಭಾವನೆಯನ್ನ ಪಕ್ಕಕಿಡಿ. ಅಹಂಕಾರವನ್ನ ದೂರ ಮಾಡಿಕೊಂಡಷ್ಟೂ ನಿಮಗೆ ಒಳ್ಳೆಯದು. ವಿದ್ಯಾರ್ಥಿಗಳ ಕಠಿಣ ಪ್ರರಿಶ್ರಮಕ್ಕೆ ಫಲ ಸಿಗಲಿದೆ. ಆಂಜನೇಯನನ್ನ ಆರಾಧಿಸಿ.

ಮಕರ : ಇಷ್ಟವಿಲ್ಲದ ವ್ಯಕ್ತಿಗಳ ಜೊತೆ ಕಷ್ಟಪಟ್ಟು ಮಾತನಾಡಲೇಬೇಕಾದ ಅನಿವಾರ್ಯತೆ ಎದುರಾಗಲಿದೆ. ತಾಳ್ಮೆ ಕಳೆದುಕೊಳ್ಳಬೇಡಿ. ಅಪ್ರಾಮಾಣಿಕರಿಂದ ಅಂತರ ಕಾಯ್ದುಕೊಳ್ಳಿ. ದೇವತಾನುಗ್ರಹವಿದೆ.

ಕುಂಭ : ಇಂದು ನೀವು ಆರ್ಥಿಕ ಸಂಕಷ್ಟಕ್ಕೆ ಸಿಲುಕುತ್ತೀರಾ. ಕುಲದೇವರ ಸ್ಮರಣೆ ಮಾಡಿ. ಸಹೋದ್ಯೋಗಿಗಳು ನಿಮ್ಮ ಮೇಲೆ ಹಗೆ ಸಾಧಿಸುವ ಸಾಧ್ಯತೆ ಇದೆ. ಮುಂದಿನ ದಿನಗಳಲ್ಲಿ ಖಂಡಿತವಾಗಿಯೂ ಒಳಿತಾಗಲಿದೆ.

ಮೀನ : ಸಾಲ ಪಡೆಯುವ ಅಥವಾ ಸಾಲ ನೀಡುವ ಕೆಲಸಕ್ಕೆ ಕೈ ಹಾಕಲೇಬೇಡಿ. ಮಕ್ಕಳ ಬಗ್ಗೆ ಅತಿಯಾದ ಅಸಡ್ಡೆ ಕೂಡ ಒಳ್ಳೆಯದಲ್ಲ. ಮಕ್ಕಳಿಗೂ ಆದ್ಯತೆಯನ್ನ ನೀಡಿ. ಕಚೇರಿ ಕೆಲಸಗಳಲ್ಲಿ ನೆಮ್ಮದಿ. ಅನಿರೀಕ್ಷಿತ ಜವಾಬ್ದಾರಿಯೊಂದು ನಿಮ್ಮ ಹೆಗಲೇರಲಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read