ಈ ರಾಶಿಯವರಿಗೆ ಇಂದು ಇರಲಿದೆ ಕೆಲಸದಲ್ಲಿ ಅನುಕೂಲಕರ ವಾತಾವರಣ

ಮೇಷ ರಾಶಿ

ಇಂದು ವಿಶಿಷ್ಟ ಆಧ್ಯಾತ್ಮಿಕ ಅನುಭೂತಿಯಾಗಲಿದೆ. ಗೂಢ ಮತ್ತು ರಹಸ್ಯ ವಿದ್ಯೆ ಕಲಿಯುವ ಆಸಕ್ತಿ ಮೂಡಲಿದೆ. ಹೊಸ ಕಾರ್ಯ ಆರಂಭಕ್ಕೆ ಶುಭ ಸಮಯವಲ್ಲ. ಕೋಪ ಮತ್ತು ಮಾತಿನ ಮೇಲೆ ನಿಯಂತ್ರಣ ಇಟ್ಟುಕೊಳ್ಳಿ.

ವೃಷಭ ರಾಶಿ

ದಾಂಪತ್ಯ ಜೀವನದ ವಿಶೇಷ ಆನಂದ ದೊರೆಯುತ್ತದೆ. ಸುತ್ತಾಟದಲ್ಲಿ ದಿನ ಕಳೆಯಲಿದ್ದೀರಿ. ಆತ್ಮೀಯ ಮಿತ್ರರೊಂದಿಗೆ ಉತ್ತಮ ಭೋಜನ ಸವಿಯುವ ಅವಕಾಶ ದೊರೆಯಲಿದೆ.

ಮಿಥುನ ರಾಶಿ

ಯಶಸ್ಸು ಪ್ರಾಪ್ತಿಗೆ ಇಂದು ಶುಭ ದಿನ. ಮನೆಯಲ್ಲಿ ಸುಖ-ಶಾಂತಿ ನೆಲೆಸುತ್ತದೆ. ಆರೋಗ್ಯವೂ ಉತ್ತಮವಾಗಿರುತ್ತದೆ. ಆರ್ಥಿಕ ಲಾಭ ದೊರೆಯುವ ಸಾಧ್ಯತೆ ಇದೆ. ಅಪೂರ್ಣ ಕಾರ್ಯಗಳನ್ನು ಪೂರ್ಣಗೊಳಿಸಲಿದ್ದೀರಿ.

ಕರ್ಕ ರಾಶಿ

ಇಂದು ಅತ್ಯಂತ ಶಾಂತವಾಗಿರಿ. ಆತ್ಮೀಯರೊಂದಿಗೆ ವಾದ-ವಿವಾದ ಅಥವಾ ಭಿನ್ನಾಭಿಪ್ರಾಯ ಉಂಟಾಗಬಹುದು. ಆಕಸ್ಮಿಕ ಧನ ಲಾಭವಾಗುವ ಸಾಧ್ಯತೆ ಇದೆ. ಯಾವುದೇ ಪ್ರವಾಸ ಮತ್ತು ಹೊಸ ಕಾರ್ಯ ಕೈಗೆತ್ತಿಕೊಳ್ಳಬೇಡಿ.

ಸಿಂಹ ರಾಶಿ

ಕುಟುಂಬದಲ್ಲಿ ಕಲಹದ ವಾತಾವರಣವಿರುತ್ತದೆ. ಹಿರಿಯರ ಆರೋಗ್ಯ ಹದಗೆಡಬಹುದು. ನಕಾರಾತ್ಮಕ ವಿಚಾರಗಳಿಂದ ಮನಸ್ಸು ಉದಾಸೀನಗೊಳ್ಳುತ್ತದೆ. ಉದ್ಯೋಗಿಗಳಿಗೆ ಕಚೇರಿಯಲ್ಲೂ ಸಮಸ್ಯೆಗಳು ಎದುರಾಗುತ್ತವೆ.

ಕನ್ಯಾ ರಾಶಿ

ಶಾರೀರಿಕ ಮತ್ತು ಮಾನಸಿಕ ಆರೋಗ್ಯ ಉತ್ತಮವಾಗಿರುತ್ತದೆ. ಕುಟುಂಬಸ್ಥರೊಂದಿಗೆ ಸಂತೋಷದಿಂದ ಸಮಯ ಕಳೆಯಲಿದ್ದೀರಿ. ಪ್ರತಿಸ್ಪರ್ಧಿಗಳ ತಂತ್ರ ಅಸಫಲವಾಗುತ್ತದೆ. ಭಾಗ್ಯವೃದ್ಧಿ ಯೋಗವಿದೆ.

ತುಲಾ ರಾಶಿ

ಇಂದು ಯಾವುದೇ ಮಹತ್ವದ ನಿರ್ಣಯಗಳನ್ನು ತೆಗೆದುಕೊಳ್ಳಬೇಡಿ. ಯಾವುದೇ ಹೊಸ ಕಾರ್ಯವನ್ನು ಕೂಡ ಆರಂಭಿಸಬೇಡಿ. ಮಾತಿನ ಮೇಲೆ ನಿಯಂತ್ರಣ ಇರಲಿ. ಆರ್ಥಿಕ ಲಾಭವಾಗುವ ಸಾಧ್ಯತೆ ಇದೆ.

ವೃಶ್ಚಿಕ ರಾಶಿ

ಕುಟುಂಬದವರೊಂದಿಗೆ ಸುಖ- ಸಂತೋಷದಿಂದ ಕಾಲ ಕಳೆಯಲಿದ್ದೀರಿ. ಶಾರೀರಿಕ ಮತ್ತು ಮಾನಸಿಕವಾಗಿ ಪ್ರಸನ್ನರಾಗಿರುತ್ತೀರಿ. ಹಳೆಯ ಮಿತ್ರರ ಭೇಟಿ ಯಶಸ್ವಿಯಾಗಲಿದೆ.

ಧನು ರಾಶಿ

ಇಂದು ಅನಾರೋಗ್ಯ ಕಾಡುತ್ತದೆ, ಅದಕ್ಕೆ ಪರಿಹಾರ ಸಿಗುವುದು ಕೂಡ ಕಷ್ಟವಾಗಬಹುದು. ಕುಟುಂಬ ಸದಸ್ಯರೊಂದಿಗೆ ಕಲಹ ಉಂಟಾಗಲಿದೆ. ಮಾತು ಮತ್ತು ವ್ಯವಹಾರದಲ್ಲಿ ಸಂಯಮ ಇಟ್ಟುಕೊಳ್ಳುವುದು ಒಳಿತು.

ಮಕರ ರಾಶಿ

ಇಂದು ನಿಮಗೆ ಲಾಭದಾಯಕ ದಿನ. ಮನೆಯಲ್ಲಿ ಶುಭಕಾರ್ಯ ಆಯೋಜನೆ ಮಾಡುವ ಸಾಧ್ಯತೆ ಇದೆ. ಷೇರು ವ್ಯವಹಾರದಲ್ಲಿ ಲಾಭವಾಗಲಿದೆ. ಹಿತಶತ್ರುಗಳ ಬಗ್ಗೆ ಎಚ್ಚರಿಕೆಯಿಂದಿರಿ.

ಕುಂಭ ರಾಶಿ

ಹಿರಿಯ ಅಧಿಕಾರಿಗಳ ಕೃಪೆ ನಿಮ್ಮ ಮೇಲಿರುತ್ತದೆ. ನಿಮ್ಮ ಎಲ್ಲಾ ಕಾರ್ಯಗಳೂ ಸರಳವಾಗಿ ಪೂರ್ಣಗೊಳ್ಳಲಿವೆ. ಕಚೇರಿಯಲ್ಲಿ ಅನುಕೂಲಕರ ವಾತಾವರಣ ವಿರುತ್ತದೆ. ಮನಸ್ಸು ನಿರಾಳವಾಗಲಿದ್ದು, ಆರೋಗ್ಯ ಉತ್ತಮವಾಗಿರುತ್ತದೆ.

ಮೀನ ರಾಶಿ

ಇಡೀ ದಿನ ಆಯಾಸ ಮತ್ತು ಆತಂಕದ ಅನುಭವವಾಗಲಿದೆ. ಮಕ್ಕಳಿಗೆ ಸಂಬಂಧಿಸಿದ ಸಮಸ್ಯೆಯಿಂದ ಚಿಂತಿತರಾಗಲಿದ್ದೀರಿ. ಹಿರಿಯ ಅಧಿಕಾರಿಗಳೊಂದಿಗೆ ವಾದ-ವಿವಾದ ಏರ್ಪಡಬಹುದು. ಆತ್ಮೀಯರೊಂದಿಗೂ ಭಿನ್ನಾಭಿಪ್ರಾಯ ಉಂಟಾಗುವ ಸಾಧ್ಯತೆ ಇದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read