ಈ ರಾಶಿಯವರಿಗಿದೆ ಇಂದು ಶುಭ ಸಮಯ

ಮೇಷ ರಾಶಿ

ಇಂದು ನಿಮಗೆ ಮಿಶ್ರಫಲವಿದೆ. ಕುಟುಂಬದವರೊಂದಿಗೆ ಮಹತ್ವದ ವಿಷಯ ಚರ್ಚಿಸಲಿದ್ದೀರಿ. ಮನೆಯ ಅಲಂಕಾರವನ್ನು ಬದಲಾಯಿಸುವ ಇಚ್ಛೆಯಾಗಲಿದೆ.

ವೃಷಭ ರಾಶಿ

ಹೊಸ ಕಾರ್ಯವನ್ನು ಕೈಗೊಳ್ಳಲು ಪ್ರೇರಣೆ ಸಿಗಲಿದೆ. ಶುಭಾರಂಭ ಕೂಡ ಸಾಧ್ಯವಾಗಲಿದೆ. ಮನಸ್ಸು ಭಕ್ತಿಯಿಂದ ತುಂಬಿರಲಿದೆ. ಧಾರ್ಮಿಕ ಸ್ಥಳಕ್ಕೆ ಭೇಟಿ ನೀಡಲಿದ್ದೀರಿ.

ಮಿಥುನ ರಾಶಿ

ನಿಷೇಧಾತ್ಮಕ ಹಾಗೂ ನಕಾರಾತ್ಮಕ ವಿಚಾರಗಳಿಂದ ದೂರವಿರಿ. ಕೋಪವನ್ನು ನಿಯಂತ್ರಿಸಿಕೊಳ್ಳಿ. ಇಲ್ಲದೇ ಹೋದಲ್ಲಿ ಅನಿಷ್ಠಕರ ಪ್ರಸಂಗಗಳು ಸಂಭವಿಸಬಹುದು.

ಕರ್ಕ ರಾಶಿ

ಉತ್ತಮ ಜೀವನ ಶೈಲಿ ಹಾಗೂ ಮನರಂಜನೆಯಿಂದಾಗಿ ಇಂದು ಆನಂದವಾಗಿ ದಿನ ಕಳೆಯಲಿದ್ದೀರಿ. ವ್ಯವಹಾರದಲ್ಲಿ ಲಾಭವಾಗಲಿದೆ. ಕಚೇರಿಯಲ್ಲಿ ಸಂಪೂರ್ಣ ಸಹಕಾರ ಸಿಗುತ್ತದೆ.

ಸಿಂಹ ರಾಶಿ

ಇಂದು ಮಿಶ್ರಫಲವಿದೆ. ಮಾತಿನ ಮೇಲೆ ನಿಯಂತ್ರಣವಿರಲಿ. ಕುಟುಂಬ ಸದಸ್ಯರೊಂದಿಗೆ ಜಗಳವಾಗಬಹದು. ಮಾತು ಕಡಿಮೆ ಮಾಡಿದ್ರೆ ಕಲಹ ತಪ್ಪಿಸಬಹುದು.

ಕನ್ಯಾ ರಾಶಿ

ಇಂದು ಎಲ್ಲಾ ಬಗೆಯ ಚರ್ಚೆ ಹಾಗೂ ಜಗಳದಿಂದ ಆದಷ್ಟು ದೂರವಿರಿ. ಆಕಸ್ಮಿಕವಾಗಿ ಹಣ ಖರ್ಚಾಗುವ ಸಾಧ್ಯತೆ ಇದೆ. ಆರ್ಥಿಕ ಸಂಕಷ್ಟ ಕೂಡ ಎದುರಾಗಬಹುದು.

ತುಲಾ ರಾಶಿ

ನಿಮಗೆ ಇದು ಶುಭ ಸಮಯ. ಮನಸ್ಸಿನಲ್ಲಿ ಸಂವೇದನಾಶೀಲತೆ ಹೆಚ್ಚಾಗಿರುತ್ತದೆ. ಶಾರೀರಿಕ ಸ್ಪೂರ್ತಿಯ ಅಭಾವವಿರುತ್ತದೆ. ಕೋಪ ಕೂಡ ಹೆಚ್ಚಾಗುವ ಸಾಧ್ಯತೆ ಇದೆ.

ವೃಶ್ಚಿಕ ರಾಶಿ

ಇಂದು ಇಡೀ ದಿನ ನೀವು ಪ್ರಸನ್ನರಾಗಿರುತ್ತೀರಾ. ಹೊಸ ಕಾರ್ಯವನ್ನು ಆರಂಭಿಸಲಿದ್ದೀರಿ. ಸಂಗಾತಿಯಿಂದ ಸುಖ ಮತ್ತು ಆನಂದ ಪ್ರಾಪ್ತವಾಗಲಿದೆ.

ಧನು ರಾಶಿ

ಇಂದು ನಿಮಗೆ ಮಿಶ್ರಫಲವಿದೆ. ಮನಸ್ಸಿನ ಅಸಮಂಜಸತೆಯಿಂದಾಗಿ ಯಾವುದೇ ನಿರ್ಧಾರ ತೆಗೆದುಕೊಳ್ಳಲು ಸಾಧ್ಯವಾಗುವುದಿಲ್ಲ. ಮನಸ್ಸು ಅತ್ಯಂತ ವ್ಯಗ್ರವಾಗಿರುತ್ತದೆ.

ಮಕರ ರಾಶಿ

ಇಂದು ನಿಮ್ಮ ಪ್ರತಿ ಕಾರ್ಯವೂ ಯಶಸ್ವಿಯಾಗಿ ಪೂರ್ಣಗೊಳ್ಳಲಿದೆ. ಕಚೇರಿಯಲ್ಲಿ ನಿಮ್ಮ ಪ್ರತಿಷ್ಠೆ ವೃದ್ಧಿಸುತ್ತದೆ. ಪದೋನ್ನತಿಯ ಯೋಗವಿದೆ.

ಕುಂಭ ರಾಶಿ

ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಿ. ಕೋರ್ಟ್-ಕಚೇರಿ ಜಂಜಾಟದಲ್ಲಿ ಸಿಲುಕಿಕೊಳ್ಳಬೇಡಿ. ಜೂಜು, ಷೇರು ವ್ಯವಹಾರಗಳಿಂದ ದೂರವಿರಿ.

ಮೀನ ರಾಶಿ

ಕೌಟುಂಬಿಕ ಮತ್ತು ಸಾಮಾಜಿಕ ಕಾಳಜಿ ಹೆಚ್ಚಾಗಿರುತ್ತದೆ. ಮಿತ್ರರನ್ನು ಭೇಟಿಯಾಗಲಿದ್ದೀರಿ. ಸ್ನೇಹಿತರಿಗಾಗಿಯೇ ಹಣ ಖರ್ಚು ಮಾಡಬೇಕಾಗಿ ಬರಬಹುದು.

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read