ಈ ರಾಶಿಯವರಿಗಿದೆ ಇಂದು ವ್ಯಾಪಾರ – ವ್ಯವಹಾರಗಳಲ್ಲಿ ಲಾಭ

ಮೇಷ : ನಿಮ್ಮ ಮಿತವಾದ ಮಾತು ಅನೇಕರ ಮೆಚ್ಚುಗೆಗೆ ಪಾತ್ರವಾಗಲಿದೆ. ಕಚೇರಿ ಕೆಲಸಗಳ ವಿಚಾರದಲ್ಲಿ ನೀವು ಇನ್ನಷ್ಟು ಶ್ರಮ ವಹಿಸಬೇಕು.

ಇಲ್ಲವಾದಲ್ಲಿ ಬಡ್ತಿ ಇನ್ನಷ್ಟು ದಿನಕ್ಕೆ ಮುಂದೂಡಿಕೆಯಾಗುವ ಸಾಧ್ಯತೆ ಇದೆ. ಆತ್ಮೀಯ ಸ್ನೇಹಿತರನ್ನು ಇಂದು ಭೇಟಿ ಮಾಡಲಿದ್ದೀರಿ.

ವೃಷಭ : ಕೋರ್ಟ್- ಕಚೇರಿ ವ್ಯವಹಾರಗಳಲ್ಲಿ ಗೆಲುವು ನಿಮ್ಮದಾಗಲಿದೆ. ಎಂತಹ ಪರಿಸ್ಥಿತಿಯಲ್ಲೂ ತಾಳ್ಮೆ ಕಳೆದುಕೊಳ್ಳಬೇಡಿ. ವ್ಯವಹಾರದ ವಿಚಾರದಲ್ಲಿ ಮೋಸ ಮಾಡುವವರ ವಿರುದ್ಧ ನೀವಿಂದು ಮೈಯೆಲ್ಲ ಕಣ್ಣಾಗಿರಬೇಕು.

ಮಿಥುನ : ನಿಮ್ಮ ಎದುರು ಒಳ್ಳೆಯ ಮಾತುಗಳನ್ನಾಡಿ ಹಿಂದೆ ನಿಮ್ಮದೇ ಚಾಡಿ ಹೇಳುವವರ ವಿರುದ್ಧ ಅಂತರ ಕಾಯ್ದುಕೊಳ್ಳಿ. ಎಲ್ಲ ಬಾರಿಯೂ ನಾವಂದುಕೊಂಡಂತೆ ನಡೆಯಬೇಕು ಎಂದೇನಿಲ್ಲ. ಹೀಗಾಗಿ ಎಲ್ಲಾ ಪರಿಸ್ಥಿತಿಯನ್ನು ಎದುರಿಸಲು ಸಿದ್ಧರಾಗಿರಿ.

ಕಟಕ : ಕಚೇರಿ ವಿಚಾರದಲ್ಲಿ ಅಡಚಣೆ ಇದ್ದರೂ ಸಹ ಎಲ್ಲವನ್ನೂ ನಿಭಾಯಿಸಲಿದ್ದೀರಿ. ವಿದ್ಯಾರ್ಥಿಗಳಿಗೆ ಉತ್ತಮ ಅವಕಾಶಗಳು ಹುಡುಕಿಕೊಂಡು ಬರಲಿದೆ. ವ್ಯಾಪಾರ – ವ್ಯವಹಾರಗಳಲ್ಲಿ ಲಾಭವಿದೆ. ಹಳೆಯ ಸಾಲಗಳು ತೀರಲಿವೆ.

ಸಿಂಹ : ವೃತ್ತಿ ಜೀವನದಲ್ಲಿ ಅಭಿವೃದ್ಧಿ ಇದೆ. ರಾಜಕೀಯ ವ್ಯಕ್ತಿಗಳಿಗೆ ಇಂದು ಉನ್ನತ ಸ್ಥಾನ ಲಭಿಸಲಿದೆ. ವಿವಿಧ ಮೂಲಗಳಿಂದ ಧನ ಸಂಪತ್ತು ಹರಿದು ಬರಲಿದೆ. ವ್ಯವಹಾರ ಮಾಡುವವರು ಇಂದು ಹೆಚ್ಚಿನ ಲಾಭ ಪಡೆಯಲಿದ್ದಾರೆ. ಮನೆಯಲ್ಲಿ ಶುಭಕಾರ್ಯ ನಡೆಯಲಿದೆ.

ಕನ್ಯಾ : ಮನೆ ನಿರ್ಮಾಣ ಕಾರ್ಯವು ಮಂದಗತಿಯಲ್ಲಿ ಸಾಗುತ್ತಿದೆ, ಹೀಗಾಗಿ ನೀವು ಚಿಂತೆಗೆ ಒಳಗಾಗುವಿರಿ. ಅಂದುಕೊಂಡ ಕಾರ್ಯಗಳು ನೆರವೇರಲಿದೆ. ಗರ್ಭಿಣಿಯರು ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಿ. ಸ್ತ್ರೀಯರಿಗೆ ಇಂದು ಧನಲಾಭವಿದೆ.

ತುಲಾ : ಹಳೆಯ ಸಾಲಗಳೆಲ್ಲ ತೀರುವುದರಿಂದ ಇಂದು ನೀವು ನಿರಾಳವಾಗಿ ಇರುವಿರಿ. ಹೊಸದೊಂದು ಉದ್ಯೋಗಾವಕಾಶವು ನಿಮ್ಮನ್ನೇ ಅರಸಿ ಬರಲಿದೆ. ಸ್ನೇಹಿತರಿಂದ ಅನಿರೀಕ್ಷಿತ ಉಡುಗೊರೆಯು ನಿಮಗೆ ಸಿಗಲಿದೆ. ಸಹವಾಸ ದೋಷದಿಂದ ಸನ್ಯಾಸಿ ಕೆಟ್ಟ ಎಂಬ ಮಾತಿದೆ. ಹೀಗಾಗಿ ಸ್ನೇಹಿತರ ಆಯ್ಕೆಯಲ್ಲಿ ಎಚ್ಚರವಿರಲಿ.

ವೃಶ್ಚಿಕ : ಮಕ್ಕಳ ವಿದ್ಯಾಭ್ಯಾಸದ ಖರ್ಚಿಗಾಗಿ ಇಂದು ನಿಮ್ಮ ಹಣ ತುಸು ಹೆಚ್ಚೇ ಖರ್ಚಾಗಲಿದೆ. ಆಸ್ತಿ ವಿಚಾರದಲ್ಲಿ ಕುಟುಂಬದಲ್ಲಿ ಹೊಗೆಯಾಡುತ್ತಿದ್ದ ವಿವಾದವು ಇಂದು ತಾರಕಕ್ಕೆ ಏರಲಿದೆ. ಯಾವುದೇ ಕಾರಣಕ್ಕೂ ತಾಳ್ಮೆ ಕಳೆದುಕೊಳ್ಳಬೇಡಿ.

ಧನು : ಎಲ್ಲಾ ಕೆಲಸಗಳು ಅಂದುಕೊಂಡಂತೆ ಪೂರ್ಣಗೊಳ್ಳಲಿದೆ. ನಿಮ್ಮ ತಲೆಯ ಮೇಲಿದ್ದ ದೊಡ್ಡ ಜವಾಬ್ದಾರಿಯೊಂದು ಇಂದು ಕರಗಲಿದೆ. ವೈವಾಹಿಕ ಸಂಬಂಧಕ್ಕೆ ಅರಸುತ್ತಿರುವವರಿಗೆ ಇಂದು ಕಂಕಣ ಭಾಗ್ಯ ಕೂಡಿಬರಲಿದೆ.

ಮಕರ : ಆರ್ಥಿಕ ಸಂಕಷ್ಟಗಳು ದೂರಾಗಲಿದೆ. ಎಂತಹ ಕಠಿಣ ಸ್ಥಿತಿಯಲ್ಲೂ ಜಗ್ಗದೇ ವ್ಯವಹಾರ ಮುಂದುವರಿಸಿದ್ದ ನಿಮಗೆ ಇಂದಿನಿಂದ ಲಾಭ ಕಾದಿದೆ. ಬೆನ್ನು ನೋವಿನ ಸಮಸ್ಯೆ ನಿಮ್ಮನ್ನು ಭಾದಿಸಲಿದೆ. ಸಂಗಾತಿ ವಿಚಾರದಲ್ಲಿ ಕ್ಷಮಾ ಗುಣವನ್ನು ರೂಢಿಸಿಕೊಳ್ಳಿ.

ಕುಂಭ : ದಾಂಪತ್ಯ ಜೀವನದಲ್ಲಿ ವಿರಸವು ದೂರಾಗಿ ಪ್ರೀತಿ ನೆಲೆಸಲಿದೆ. ಪೋಷಕರ ಆರೋಗ್ಯ ಹದಗೆಡುವ ಸಾಧ್ಯತೆ ಇದೆ. ದೊಡ್ಡ ಮೊತ್ತದ ಹೂಡಿಕೆಗಳಿಗೆ ಇದು ಸಕಾಲವಲ್ಲ. ಸ್ನೇಹಿತರ ನಿಜವಾದ ಬಣ್ಣ ಬಯಲಾಗಲಿದೆ.

ಮೀನ : ವ್ಯಾಪಾರ – ವ್ಯವಹಾರ ನಡೆಸುತ್ತಿರುವ ನೀವು ತಾಳ್ಮೆ ರೂಢಿಸಿಕೊಳ್ಳದ ಹೊರತು ಉದ್ಯಮದಲ್ಲಿ ಪ್ರಗತಿ ಸಾಧ್ಯವಿಲ್ಲ. ಕೃಷಿ ಸಂಬಂಧಿ ಚಟುವಟಿಕೆಗಳಲ್ಲಿ ಇರುವವರಿಗೆ ಇಂದು ಹವಾಮಾನ ಕೈ ಕೊಡಲಿದೆ. ವೃತ್ತಿ ಜೀವನದಲ್ಲಿ ಸಮತೋಲನ ಕಾಯ್ದುಕೊಳ್ಳುವಿರಿ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read