ಈ ರಾಶಿಯವರಿಗಿದೆ ಇಂದು ಮಕ್ಕಳಿಂದ ಶುಭ ಸುದ್ದಿ

ಮೇಷ : ನಿಮ್ಮ ದುಃಖಕ್ಕೆ ಸಂಗಾತಿ ಹೆಗಲಾಗಲಿದ್ದಾರೆ. ಸಂಗಾತಿಯ ಸಮಾಧಾನದ ಮಾತುಗಳು ನಿಮ್ಮ ಉತ್ಸಾಹವನ್ನ ಹೆಚ್ಚಿಸಲಿದೆ. ಕಚೇರಿ ಕೆಲಸದಲ್ಲಿ ಕೊಂಚ ನಿರಾಶೆ ಆಗಲಿದೆ. ನಿಧಾನವಾಗಿ ಮನಸ್ಸು ಶಾಂತವಾಗಲಿದೆ.

ವೃಷಭ : ಮನೆಯಲ್ಲಿ ಸಂತಸದ ವಾತಾವರಣ ಇರಲಿದೆ. ಹಣಕಾಸಿನ ತೊಂದರೆಗಳು ಕಾಡಬಹುದು. ಅನಿರೀಕ್ಷಿತ ಕಾರ್ಯಗಳು ನಿಮ್ಮ ಖರ್ಚನ್ನ ಇನ್ನಷ್ಟು ಹೆಚ್ಚಿಸಬಹುದು. ಆತ್ಮವಿಶ್ವಾಸ ಕಳೆದುಕೊಳ್ಳಬೇಡಿ.

ಮಿಥುನ : ಕಚೇರಿ ಕೆಲಸಕ್ಕಾಗಿ ದೂರ ಪ್ರಯಾಣ ಮಾಡಲಿದ್ದೀರಿ. ನಿಮ್ಮ ಜೀವನದ ಅತ್ಯಮೂಲ್ಯ ವಸ್ತುವೊಂದು ಕಳೆದುಹೋಗುವ ಸಾಧ್ಯತೆ ಇದೆ. ಎಚ್ಚರದಿಂದಿರಿ. ವಿವಾಹವಾಗಲು ಬಯಸುವವರಿಗೆ ಕಂಕಣ ಭಾಗ್ಯ ಕೂಡಿ ಬರಲಿದೆ.

ಕಟಕ : ನೋವನ್ನ ನುಂಗಿಕೊಂಡು ಮನಸ್ಸನ್ನು ಭಾರ ಮಾಡಿಕೊಳ್ಳದಿರಿ. ಆಪ್ತರಲ್ಲಿ ಹೇಳಿಕೊಂಡು ಮನಸ್ಸನ್ನ ಹಗುರ ಮಾಡಿಕೊಳ್ಳಿ. ಆರ್ಥಿಕ ಸ್ಥಿತಿಯಲ್ಲಿ ಯಾವುದೇ ಅಡಚಣೆ ಕಂಡು ಬರೋದಿಲ್ಲ. ಕೌಟುಂಬಿಕ ಜೀವನ ಸುಖಮಯವಾಗಿರಲಿದೆ.

ಸಿಂಹ : ಸಕಾರಾತ್ಮಕ ಆಲೋಚನೆಯನ್ನ ರೂಢಿಸಿಕೊಳ್ಳಿ. ಜೊತೆಯಲ್ಲಿ ಇದ್ದವರೇ ಬೆನ್ನಿಗೆ ಚೂರಿ ಹಾಕಬಹುದು ಹುಷಾರಾಗಿರಿ. ಮನೆಯಲ್ಲಿ ಖುಷಿಯ ವಾರ್ತೆ ಕೇಳಿ ಬರಲಿದೆ. ಹಿರಿಯರ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ. ಗಣಪತಿಯನ್ನ ಧ್ಯಾನಿಸಿ.

ಕನ್ಯಾ : ವ್ಯಾಪಾರ ಕ್ಷೇತ್ರದಲ್ಲಿ ವಿರೋಧಿಗಳ ಕಾಟವಿದೆ. ಸಣ್ಣ ಸಣ್ಣ ವಿಚಾರಕ್ಕೂ ಅನಗತ್ಯ ಕೋಪ ಒಳ್ಳೆಯದಲ್ಲ. ಕಚೇರಿಯಲ್ಲಿ ಮೇಲಾಧಿಕಾರಿಗಳ ಕೆಂಗಣ್ಣಿಗೆ ಗುರಿಯಾಗಲಿದ್ದೀರಿ. ಮನೆಯಲ್ಲಿ ಶಾಂತಿ ಇರಲಿದೆ. ನಿಮ್ಮೆಲ್ಲರ ಕಾರ್ಯಕ್ಕೆ ಸಂಗಾತಿ ಬೆಂಬಲವಿದೆ.

ತುಲಾ : ಆಪ್ತರು ಹೇಳಿದ್ದಾರೆ ಎಂದ ಮಾತ್ರಕ್ಕೆ ಸುಳ್ಳು ಸತ್ಯವಾಗಲು ಸಾಧ್ಯವಿಲ್ಲ. ವಾಸ್ತವದಲ್ಲಿ ನಿಂತು ಯೋಚಿಸಿ. ವ್ಯಾಪಾರಿಗಳಿಗೆ ಮಿಶ್ರ ಫಲ ದೊರೆಯಲಿದೆ. ಕಚೇರಿ ಕೆಲಸದಲ್ಲಿ ನೆಮ್ಮದಿ ಇದೆ. ವಿದ್ಯಾರ್ಥಿಗಳಿಗೆ ಉತ್ತಮ ದಿನ ಇದಾಗಿದೆ.

ವೃಶ್ಚಿಕ : ಹಳೆಯ ಸಾಲಗಳು ತೀರೋದ್ರಿಂದ ಮನಸ್ಸಿಗೆ ನೆಮ್ಮದಿ ಇರಲಿದೆ. ಪೋಷಕರು ನಿಮ್ಮೊಡನೆ ಉತ್ತಮ ಸಂಬಂಧ ಹೊಂದಿರುತ್ತಾರೆ. ಕಚೇರಿ ಕೆಲಸಗಳನ್ನ ಮಾಡುವಾಗ ಆತ್ಮವಿಶ್ವಾಸ ಕಳೆದುಕೊಳ್ಳಬೇಡಿ. ಸುಬ್ರಹ್ಮಣ್ಯನನ್ನ ಆರಾಧಿಸಿ.

ಧನು : ಹಾಸಿಗೆ ಇದ್ದಷ್ಟೇ ಕಾಲು ಚಾಚು ಎಂಬ ಗಾದೆ ಮಾತು ತಲೆಯಲ್ಲಿರಲಿ. ಇನ್ಯಾರಿಗೋ ತೋರಿಸಬೇಕು ಅಂತಾ ವ್ಯರ್ಥ ಖರ್ಚು ಬೇಡ. ಪೋಷಕರ ಆರೋಗ್ಯದ ಬಗ್ಗೆ ಗಮನವಿರಲಿ. ಜವಳಿ ಉದ್ಯಮಿಗಳಿಗೆ ಉತ್ತಮ ಲಾಭವಿದೆ. ವಿದ್ಯಾರ್ಥಿಗಳಿಗೆ ಇದು ಸಾಮಾನ್ಯ ದಿನವಾಗಿದೆ.

ಮಕರ : ನಿಮ್ಮ ಮಾತುಗಳ ಮೇಲೆ ಹಿಡಿತ ಕಳೆದುಕೊಳ್ಳಬೇಡಿ. ಪೋಷಕರ ಆಲೋಚನೆಗಳಿಗೂ ಬೆಲೆ ನೀಡಿ. ಕಚೇರಿಯಲ್ಲಿ ಶಾಂತಚಿತ್ತರಾಗಿರಿ. ವಿರೋಧಿಗಳಿಗೆ ಅಂತರ ಕಾಪಾಡಿಕೊಳ್ಳಿ. ಹಿತಶತ್ರುಗಳ ಕಾಟವಿದೆ.

ಕುಂಭ : ಉನ್ನತಾಧಿಕಾರಿಗಳಿಂದ ಪ್ರಶಂಸೆಯ ಮಾತುಗಳನ್ನ ಕೇಳಲಿದ್ದೀರಿ. ಹಿಡಿದ ಕೆಲಸ ಕೈಗೂಡಲಿದೆ. ಹೂಡಿಕೆ ಮಾಡುವವರಿಗೆ ಇದು ಒಳ್ಳೆಯ ದಿನ. ಪಿತ್ರಾರ್ಜಿತ ಆಸ್ತಿಯಲ್ಲಿ ಕಿರಿಕಿರಿ ಮುಂದುವರಿಯಲಿದೆ. ಮಕ್ಕಳಿಂದ ಶುಭ ಸುದ್ದಿ ಕೇಳಲಿದ್ದೀರಿ.

ಮೀನ : ಆರೋಗ್ಯದ ಬಗ್ಗೆ ಕಾಳಜಿ ವಹಿಸಿ. ಸರ್ಕಾರಿ ನೌಕರರಿಗೆ ಇದು ಸಾಮಾನ್ಯ ದಿನವಾಗಿದೆ. ಮನೆಯ ವಾತಾವರಣ ಚೆನ್ನಾಗಿ ಇರಲಿದೆ. ಭವಿಷ್ಯದ ಬಗ್ಗೆ ಅತಿಯಾದ ಚಿಂತೆ ಬೇಡ. ಕೌಟುಂಬಿಕ ಜೀವನದಲ್ಲಿ ಬಿರುಕು ಕಾಣಿಸಿಕೊಳ್ಳಬಹುದು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read