ಈ ರಾಶಿಯವರಿಗಿದೆ ಇಂದು ‘ಮಂಗಳ’ಕರ ದಿನ

ಮೇಷ: ಕೋಪ ಯಾವ ಸಮಸ್ಯೆಯನ್ನೂ ಬಗೆಹರಿಸಲಾರದು. ಹೀಗಾಗಿ ತಾಳ್ಮೆಯನ್ನ ಬೆಳೆಸಿಕೊಳ್ಳಿ. ಕಚೇರಿಯಲ್ಲಿ ಎಂತಹ ಕಠಿಣ ಸಂದರ್ಭವನ್ನೂ ಎದುರಿಸುವ ಶಕ್ತಿ ನಿಮಗಿದೆ. ಹೊಸ ಉದ್ಯಮಕ್ಕೆ ಬಂಡವಾಳ ಹೂಡಬೇಕು ಎಂದುಕೊಂಡಿರುವ ನೀವು ಇಂದು ಮುಂದಿನ ಹೆಜ್ಜೆ ಇಡಬಹುದಾಗಿದೆ.

ವೃಷಭ : ಮನೆಗೆ ಬಂದ ಅತಿಥಿಗಳು ಅನವಶ್ಯಕ ಪ್ರಶ್ನೆ ಕೇಳಿ ನಿಮ್ಮ ತಾಳ್ಮೆ ಪರೀಕ್ಷೆ ಮಾಡಲಿದ್ದಾರೆ. ಆರ್ಥಿಕ ಪರಿಸ್ಥಿತಿ ಚೆನ್ನಾಗಿ ಇರಲಿದೆ. ಕಚೇರಿಯಲ್ಲಿ ನೆಮ್ಮದಿ ಕಾಯ್ದುಕೊಳ್ಳಲಿದ್ದೀರಿ. ಆಭರಣ ಖರೀದಿ ಮಾಡುವ ಸಾಧ್ಯತೆ ಇದೆ.

ಮಿಥುನ : ತಾಯಿಯು ಅನಾರೋಗ್ಯಕ್ಕೀಡಾಗೋದ್ರಿಂದ ನೀವು ಚಿಂತೆಗೆ ಒಳಗಾಗುತ್ತೀರಿ. ಆಸ್ತಿ ವಿಚಾರದಲ್ಲಿ ಸಹೋದರರ ನಡುವೆ ಸಂಘರ್ಷ ಉಂಟಾಗಲಿದೆ. ಪೋಷಕರ ಮಾರ್ಗದರ್ಶನದಂತೆ ಮುನ್ನಡೆಯಿರಿ. ಎಲ್ಲವೂ ಒಳಿತಾಗಲಿದೆ.

ಕಟಕ : ಕೋರ್ಟ್​ ಕೇಸುಗಳಲ್ಲಿ ನಿಮಗೆ ಮುನ್ನಡೆ ಉಂಟಾಗಲಿದೆ. ಧಾರ್ಮಿಕ ಕಾರ್ಯಗಳತ್ತ ಒಲವು ತೋರಲಿದ್ದೀರಿ, ರಾಜಕೀಯ ರಂಗದಲ್ಲಿ ಇರುವವರಿಗೆ ಉತ್ತಮ ಅವಕಾಶಗಳು ಹುಡುಕಿಕೊಂಡು ಬರಲಿದೆ.

ಸಿಂಹ: ಸರ್ಕಾರಿ ಉದ್ಯೋಗಿಗಳಿಗೆ ಕೊಂಚ ಕಿರಿಕಿರಿ ಉಂಟಾಗಲಿದೆ. ಸಾರ್ವಜನಿಕ ಸ್ಥಳದಲ್ಲಿ ಮನ್ನಣೆ ಗಳಿಸಲಿದ್ದೀರಿ. ಎಲೆಕ್ಟ್ರಾನಿಕ್​ ಉದ್ಯಮಿಗಳಿಗೆ ಲಾಭವಿದೆ. ಮನೆಯಲ್ಲಿ ಶುಭ ಕಾರ್ಯ ನಡೆಯುವ ಮುನ್ಸೂಚನೆ ಸಿಗಲಿದೆ.

ಕನ್ಯಾ : ಕಚೇರಿ ಕೆಲಸದ ನಿಮಿತ್ತ ದೂರ ಪ್ರಯಾಣ ಮಾಡಬೇಕಾಗಿ ಬರಬಹುದು. ನಿಮ್ಮ ಸಹೋದ್ಯೋಗಿಗಳೇ ನಿಮ್ಮ ವಿರುದ್ಧ ಪಿತೂರಿ ಮಾಡಬಹುದು. ಜಾಗರೂಕರಾಗಿರಿ. ವಿದ್ಯಾರ್ಥಿಗಳ ಕಠಿಣ ಪರಿಶ್ರಮಕ್ಕೆ ತಕ್ಕ ಬೆಲೆ ಸಿಗಲಿದೆ.

ತುಲಾ : ಯಾವುದೇ ನಿರ್ಧಾರ ತೆಗೆದುಕೊಳ್ಳುವ ಮುನ್ನ ನೂರು ಬಾರಿ ಯೋಚನೆ ಮಾಡಿ. ಇಂದು ನೀವು ಬೆನ್ನು ನೋವಿನ ಸಮಸ್ಯೆಗೆ ಒಳಗಾಗುತ್ತೀರಿ. ವಿವಾಹ ಸಂಬಂಧಕ್ಕೆ ಹುಡುಕುತ್ತಿರುವವರಿಗೆ ಶುಭ ಸುದ್ದಿ ಕಾದಿದೆ. ವಿದ್ಯಾರ್ಥಿಗಳು ಪ್ರಯತ್ನ ಮುಂದುವರಿಸಿ.

ವೃಶ್ಚಿಕ : ನಿಮಗೆ ಸಹಾಯ ಮಾಡಲು ಮನಸಿಲ್ಲ ಎಂದ ಮಾತ್ರಕ್ಕೆ ಸಹಾಯ ಮಾಡಲು ಮುಂದಾಗುವವರ ಮನಸ್ಸನ್ನೂ ಹಾಳು ಮಾಡಬೇಡಿ. ಆತ್ಮಸಾಕ್ಷಿಗೆ ಅನುಗುಣವಾಗಿ ಕೆಲಸ ಮಾಡಿ. ದೇವರ ಅನುಗ್ರಹವಿದೆ.

ಧನು : ಇಂಜಿನಿಯರ್​​, ವೈದ್ಯಕೀಯ, ರಾಜಕೀಯ ರಂಗದವರಿಗೆ ಉತ್ತಮ ಅವಕಾಶವಿದೆ. ಶಿಕ್ಷಕ ವೃತ್ತಿಯವರಿಗೆ ಇಂದಿನ ದಿನ ಕಿರಿಕಿರಿ ಎನಿಸಲಿದೆ. ಆರೋಗ್ಯದ ಕಡೆಗೆ ಹೆಚ್ಚಿನ ಜಾಗೃತಿ ಅಗತ್ಯ. ಕುಲದೇವತೆಯನ್ನ ಪ್ರಾರ್ಥಿಸಿ.

ಮಕರ : ಶೀತ, ಜ್ವರದಂತಹ ಸಮಸ್ಯೆ ನಿಮ್ಮನ್ನು ಭಾದಿಸಬಹುದು. ಆತಂಕ ಬೇಡ. ಎಚ್ಚರಿಕೆ ಇರಲಿ. ಸಾಕಷ್ಟು ದಿನಗಳಿಂದ ನಿಮ್ಮನ್ನ ಕಾಡುತ್ತಿರುವ ಸಮಸ್ಯೆಗೆ ಇಂದು ಪರಿಹಾರ ಸಿಗಲಿದೆ. ಸಂಗಾತಿಯಿಂದ ಉತ್ತಮ ಸಲಹೆ ಪಡೆಯಲಿದ್ದೀರಿ.

ಕುಂಭ : ಹಣಕಾಸಿನ ಸ್ಥಿತಿ ಉತ್ತಮವಾಗಿ ಇರಲಿದೆ. ಕುಟುಂಬ ಸದಸ್ಯರ ಸಲಹೆಗೆ ಗಮನ ನೀಡಿ. ಬೆನ್ನು ನೋವಿನ ಸಮಸ್ಯೆಯಿಂದ ಬಳಲಲಿದ್ದೀರಿ. ಸಂಗಾತಿಯಿಂದ ಉತ್ತಮ ಉಡುಗೊರೆ ಪಡೆಯಲಿದ್ದೀರಿ. ದೇವರ ಧ್ಯಾನ ಮಾಡಿ.

ಮೀನ : ವಿದ್ಯಾರ್ಥಿಗಳಿಗೆ ಉತ್ತಮ ಅವಕಾಶವಿದೆ. ಉದ್ಯೋಗಕ್ಕಾಗಿ ಅರಸುತ್ತಿರುವವರಿಗೆ ಉದ್ಯೋಗಾವಕಾಶ ಕೂಡಿ ಬರುವುದು. ಗರ್ಭಿಣಿಯರು ಆರೋಗ್ಯದ ಕಡೆ ಕಾಳಜಿ ವಹಿಸಿ. ಮೇಲಾಧಿಕಾರಿಗಳಿಂದ ಕೊಂಚ ಕಿರಿಕಿರಿ ಇದೆ. ಈಸಬೇಕು ಇದ್ದು ಜೈಸಬೇಕು ಎಂಬ ಮಾತಿನಲ್ಲಿ ವಿಶ್ವಾಸವನ್ನಿಡಿ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read