ಈ ರಾಶಿಯವರಿಗಿದೆ ಇಂದು ಕಷ್ಟದಿಂದ ಪಾರಾಗಲು ದಾರಿ

ಮೇಷ : ಉದ್ಯೋಗದಲ್ಲಿ ಬಡ್ತಿ ಭಾಗ್ಯ ಸಿಗುವ ಸಾಧ್ಯತೆ ಇದೆ. ನಿಮ್ಮ ಅತಿಯಾದ ಸಿಟ್ಟು ದಾಂಪತ್ಯ ಜೀವನದಲ್ಲಿ ಕಲಹ ತಂದೊಡ್ಡಬಹುದು. ಮಕ್ಕಳ ಓದಿನ ನಿಮಿತ್ತ ಬಹುದೊಡ್ಡ ಖರ್ಚೊಂದು ನಿಮ್ಮ ಮುಂದೆ ಬರಲಿದೆ.

ವೃಷಭ : ಅನಿರೀಕ್ಷಿತ ಧನಾಗಮನವಾಗಲಿದೆ. ನಿಮ್ಮ ಚಾಣಕ್ಯತನವು ಕಚೇರಿಯಲ್ಲಿ ಪ್ರಶಂಸೆಗೆ ಕಾರಣವಾಗಲಿದೆ. ದಾಂಪತ್ಯ ಜೀವನದಲ್ಲಿ ನೆಮ್ಮದಿ ಇರಲಿದೆ. ವಿದ್ಯಾರ್ಥಿಗಳು ಅಂದುಕೊಂಡಿದ್ದನ್ನು ಸಾಧಿಸಲಿದ್ದಾರೆ. ಮುದ್ರಣ ಮಳಿಗೆ ಹೊಂದಿದವರಿಗೆ ಇಂದು ಲಾಭವಿದೆ.

ಮಿಥುನ : ಕಲಾವಿದರಿಗೆ ಇಂದು ಹೊಸ ಅವಕಾಶಗಳು ಹುಡುಕಿಕೊಂಡು ಬರಲಿದೆ. ಹಿಂದೆಂದೋ ಕೂಡಿಟ್ಟ ಹಣವು ಇಂದು ನಿಮ್ಮನ್ನು ದೊಡ್ಡ ಕಷ್ಟದಿಂದ ಪಾರು ಮಾಡಲಿದೆ. ಗರ್ಭಿಣಿಯರು ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಿ. ಗುರು ಅನುಗ್ರಹ ಇರಲಿದೆ.

ಕಟಕ : ಅನಾರೋಗ್ಯವೆಲ್ಲ ಕಳೆದು ಚೇತರಿಕೆ ಕಾಣಲಿದ್ದೀರಿ. ಕೋರ್ಟ್​ ಕಚೇರಿ ವ್ಯವಹಾರಗಳಲ್ಲಿ ನಿಮಗೆ ಮುನ್ನಡೆ ಸಿಗಲಿದೆ. ಹಳೆಯ ಸಾಲಗಳು ತೀರಲಿವೆ. ರಾಜಕೀಯ ವ್ಯಕ್ತಿಗಳಿಗೆ ಉನ್ನತ ಸ್ಥಾನ ಲಭಿಸಲಿದೆ.

ಸಿಂಹ : ಆರ್ಥಿಕವಾಗಿ ನಿಮ್ಮ ಜೀವನದಲ್ಲಿ ಸುಧಾರಣೆ ಕಂಡು ಬರಲಿದೆ. ಹೊಸ ಕಚೇರಿಯ ವಾತಾವರಣಕ್ಕೆ ಹೊಂದಿಕೊಳ್ಳಲಿದ್ದೀರಿ. ವೈವಾಹಿಕ ಸಂಬಂಧಕ್ಕೆ ಹುಡುಕಾಟ ನಡೆಸುತ್ತಿರುವವರಿಗೆ ಇಂದು ಶುಭ ಸುದ್ದಿ ಕಾದಿದೆ. ವಿದ್ಯಾರ್ಥಿಗಳಿಗೆ ಓದಿನಲ್ಲಿ ನಿರಾಸಕ್ತಿ ಮೂಡುವ ಸಾಧ್ಯತೆ ಇದೆ.

ಕನ್ಯಾ : ಬೆನ್ನು ನೋವಿನ ಸಮಸ್ಯೆ ಇಂದು ನಿಮ್ಮನ್ನು ಭಾದಿಸಲಿದೆ. ಹೀಗಾಗಿ ನಿಮಗೆ ಇಂದು ಕೆಲಸದ ಮೇಲೆ ಏಕಾಗ್ರತೆ ಹೊಂದಲು ಸಾಧ್ಯವಾಗೋದಿಲ್ಲ. ಪಿತ್ರಾರ್ಜಿತ ಆಸ್ತಿ ವಿಚಾರದಲ್ಲಿ ಕುಟುಂಬದಲ್ಲಿ ಕಲಹ ಏರ್ಪಡುವ ಸಾಧ್ಯತೆ ಇದೆ.

ತುಲಾ : ನವವಿವಾಹಿತರಿಗೆ ಸಂತಾನ ಭಾಗ್ಯವಿದೆ. ಮಕ್ಕಳು ಓದಿನ ಕಡೆಗೆ ಗಮನ ನೀಡುವುದಿಲ್ಲ. ಇದರಿಂದ ನೀವು ತುಂಬಾನೇ ಆತಂಕಕ್ಕೆ ಒಳಗಾಗುವಿರಿ. ಮನೆಯಲ್ಲಿ ಧಾರ್ಮಿಕ ಕಾರ್ಯ ನಡೆಯಲಿದೆ. ಕುಟುಂಬದಲ್ಲಿ ಯಾರೊಂದಿಗೂ ಅನಗತ್ಯ ವಾದಕ್ಕೆ ಇಳಿಯಬೇಡಿ.

ವೃಶ್ಚಿಕ : ವ್ಯವಹಾರದಲ್ಲಿ ನಿಮ್ಮ ಮಾತಿನ ಶೈಲಿಯೇ ನಿಮ್ಮನ್ನು ಕಾಪಾಡಲಿದೆ. ಹೀಗಾಗಿ ನೀವು ದೊಡ್ಡ ಮಟ್ಟದಲ್ಲಿ ಲಾಭವನ್ನು ಕಾಣಲಿದ್ದೀರಿ. ದಾಂಪತ್ಯ ಜೀವನದಲ್ಲಿ ನೆಮ್ಮದಿ ಇದೆ. ಪರಸ್ತ್ರೀಯರೊಂದಿಗೆ ಅನಗತ್ಯ ವಾದ ಸಲ್ಲದು.

ಧನು : ವೃತ್ತಿ ಜೀವನದಲ್ಲಿ ಅತ್ಯುತ್ತಮ ಸಾಧನೆ ಮಾಡುವ ನೀವು ಕುಟುಂಬ ವರ್ಗದಲ್ಲಿ ಗೌರವ ಹೆಚ್ಚಿಸಿಕೊಳ್ಳಲಿದ್ದೀರಿ. ನಿಮ್ಮ ಪ್ರೇಮವು ವೈವಾಹಿಕ ಜೀವನಗಾಗಿ ಬದಲಾಗುವ ಕಾಲ ಸನ್ನಿಹಿತವಾಗಲಿದೆ. ದೂರ ಪ್ರಯಾಣ ಮಾಡಲು ಇದು ಸೂಕ್ತವಾದ ಸಮಯವಲ್ಲ.

ಮಕರ : ವಿದ್ಯಾರ್ಥಿಗಳು ಶೈಕ್ಷಣಿಕ ಕ್ಷೇತ್ರದಲ್ಲಿ ಅತ್ಯುತ್ತಮ ಸಾಧನೆ ತೋರಲಿದ್ದಾರೆ. ಇದರಿಂದ ಪೋಷಕರಾದ ನಿಮಗೆ ಹೆಮ್ಮೆ ಎನಿಸಲಿದೆ. ಕುಲದೇವರ ದರ್ಶನಕ್ಕೆ ಕುಟುಂಬ ಸಮೇತ ತೆರಳಲಿದ್ದೀರಿ. ನಿಮ್ಮ ಕೈಲಾದಷ್ಟು ದಾನ – ಧರ್ಮ ಮಾಡಿ.

ಕುಂಭ : ನೀವು ಅಂದುಕೊಂಡ ಕಾರ್ಯಗಳಲ್ಲಿ ವಿಘ್ನ ಎದುರಾಗಬಹುದು. ಇದರಿಂದ ನಿಮ್ಮ ಮನಸ್ಸಿಗೆ ತುಂಬಾನೆ ಘಾಸಿ ಉಂಟಾಗಲಿದೆ. ವಿದ್ಯಾರ್ಥಿಗಳು ಎರಡು ಆಯ್ಕೆಗಳ ನಡುವೆ ಗೊಂದಲಕ್ಕೆ ಒಳಗಾಗುವ ಸಾಧ್ಯತೆ ಇದೆ.

ಮೀನ : ಪ್ರಭಾವಿ ವ್ಯಕ್ತಿಗಳ ಭೇಟಿಯಿಂದ ನಿಮ್ಮ ವರ್ಚಸ್ಸು ಕೂಡ ಹೆಚ್ಚಲಿದೆ. ಅನಿರೀಕ್ಷಿತ ಮೂಲದಿಂದ ಧನಾಗಮನವಿದೆ. ಗುರಿಯಲ್ಲಿ ಸ್ಪಷ್ಟತೆ ಇರಲಿ. ಹಳೆಯ ಸಾಲಗಳು ತೀರಲಿದೆ. ವಿವಾಹ ಸಂಬಂಧಕ್ಕೆ ಹುಡುಕಾಟ ನಡೆಸುತ್ತಿರುವವರಿಗೆ ಕಂಕಣಬಲ ಕೂಡಿ ಬರಲಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read