ಈ ರಾಶಿಯವರಿಗಿದೆ ಇಂದು ಅನುಕೂಲಕರ ವಾತಾವರಣ

ಮೇಷ ರಾಶಿ

ಸಂಬಂಧಗಳು ಅತ್ಯಂತ ಸೂಕ್ಷ್ಮವಾಗಿರುತ್ತವೆ. ತಾಯಿಯ ಆರೋಗ್ಯದ ಬಗ್ಗೆ ಆತಂಕ ಕಾಡಬಹುದು. ವಾಹನ ಚಲಾಯಿಸುವಾಗ ಎಚ್ಚರಿಕೆ ವಹಿಸಿ.

ವೃಷಭ ರಾಶಿ

ಚಿಂತೆ ಕಡಿಮೆಯಾಗಿ ಸ್ಪೂರ್ತಿ ಮತ್ತು ಉತ್ಸಾಹದ ಅನುಭವವಾಗಲಿದೆ. ಕುಟುಂಬಸ್ಥರ ಬಗ್ಗೆ ವಿಶೇಷ ಕಾಳಜಿ ವಹಿಸಿ. ನಿಮಗಿಷ್ಟವಾದ ಭೋಜನ ದೊರೆಯುತ್ತದೆ.

ಮಿಥುನ ರಾಶಿ

ಕೆಲಸದಲ್ಲಿ ಯಶಸ್ಸು ಸಿಗುತ್ತದೆ, ಆದ್ರೆ ಕೊಂಚ ವಿಳಂಬವಾಗಬಹುದು. ಕಚೇರಿಯಲ್ಲಿ ಸಹೋದ್ಯೋಗಿಗಳ ಸಹಕಾರ ಸಿಗುತ್ತದೆ. ಆರ್ಥಿಕ ಯೋಜನೆಗಳಿಗೆ ವಿಘ್ನ ಎದುರಾಗಬಹುದು.

ಕರ್ಕ ರಾಶಿ

ಶಾರೀರಿಕ ಮತ್ತು ಮಾನಸಿಕ ಸುಖ ದೊರೆಯಲಿದೆ. ದಾಂಪತ್ಯ ಜೀವನದಲ್ಲಿ ಸಂಗಾತಿ ಬಗ್ಗೆ ವಿಶೇಷ ಆಕರ್ಷಣೆ ಮೂಡಲಿದೆ. ಸ್ನೇಹಿತರೊಂದಿಗೆ ಆನಂದವಾಗಿ ಕಾಲ ಕಳೆಯಲಿದ್ದೀರಿ.

ಸಿಂಹ ರಾಶಿ

ತೀವ್ರ ವಾದ-ವಿವಾದ ಅಥವಾ ಜಗಳದಲ್ಲಿ ಸಿಲುಕಿಕೊಳ್ಳಲಿದ್ದೀರಿ. ಕೋರ್ಟ್-ಕಚೇರಿ ವ್ಯವಹಾರಗಳಲ್ಲಿ ಎಚ್ಚರ ವಹಿಸಿ. ಭಾವನೆಗಳ ಪ್ರವಾಹಕ್ಕೆ ಸಿಕ್ಕು ಅವಿವೇಕಿತನದ ಕೆಲಸ ಮಾಡಬೇಡಿ.

ಕನ್ಯಾ ರಾಶಿ

ಇಂದು ನಿಮಗೆ ಶುಭ ದಿನ. ವಿವಿಧ ಬಗೆಯ ಲಾಭವಿದೆ. ವ್ಯಾಪಾರಿಗಳು ಮತ್ತು ಉದ್ಯೋಗಿಗಳಿಗೆ ಆರ್ಥಿಕ ಲಾಭ ದೊರೆಯುತ್ತದೆ. ಪದೋನ್ನತಿ ದೊರೆಯುವ ಸಾಧ್ಯತೆ ಇದೆ.

ತುಲಾ ರಾಶಿ

ಇಂದು ನಿಮ್ಮ ಕೆಲಸಗಳೆಲ್ಲ ಸರಳವಾಗಿ ಪೂರ್ಣಗೊಳ್ಳುತ್ತವೆ. ಗೌರವ-ಪ್ರತಿಷ್ಠೆ ಹೆಚ್ಚಾಗಲಿದೆ. ಕಚೇರಿಯಲ್ಲಿ ಹಿರಿಯ ಅಧಿಕಾರಿಗಳಿಂದ ಸಹಕಾರ ಸಿಗುತ್ತದೆ.

ವೃಶ್ಚಿಕ ರಾಶಿ

ಆಲಸ್ಯ, ಆಯಾಸ ಮತ್ತು ಚಿಂತೆಯಿಂದಾಗಿ ಕೆಲಸ ಮಂದಗತಿಯಲ್ಲಿ ಸಾಗಬಹುದು. ಕಚೇರಿಯಲ್ಲಿ ಅಧಿಕಾರಿಗಳ ನಕಾರಾತ್ಮಕ  ವರ್ತನೆಯಿಂದ ಹತಾಶರಾಗಲಿದ್ದೀರಿ. ಪೈಪೋಟಿ ಹೆಚ್ಚಾಗಲಿದೆ.

ಧನು ರಾಶಿ

ಕೋಪವನ್ನು ನಿಯಂತ್ರಿಸಿಕೊಳ್ಳಿ. ಸರ್ಕಾರ ವಿರೋಧಿ ಧೋರಣೆಗಳು ಬೇಡ. ಹೊಸ ಸಂಬಂಧಗಳು ನಿಮ್ಮನ್ನು ಚಿಂತೆಗೀಡು ಮಾಡಬಹುದು. ಖರ್ಚನ್ನು ನಿಯಂತ್ರಿಸಿಕೊಳ್ಳುವುದು ಉತ್ತಮ.

ಮಕರ ರಾಶಿ

ಕೆಲಸದ ಒತ್ತಡ ಕಡಿಮೆಯಾಗಲಿದೆ. ಮಿತ್ರರು, ಸಂಬಂಧಿಕರೊಂದಿಗೆ ಸಮಯ ಕಳೆಯಲಿದ್ದೀರಿ. ವೈವಾಹಿಕ ಜೀವನದ ಸುಖ ಪ್ರಾಪ್ತಿಯಾಗಲಿದೆ. ಕಚೇರಿಯಲ್ಲಿ ಅನುಕೂಲಕರ ವಾತಾವರಣವಿರಲಿದೆ.

ಕುಂಭ ರಾಶಿ

ಇಂದು ಕೆಲಸ ಕಾರ್ಯಗಳಲ್ಲಿ ಯಶಸ್ಸು ದೊರೆಯಲಿದೆ. ಕುಟುಂಬ ಸದಸ್ಯರೊಂದಿಗೆ ಪ್ರೀತಿಯಿಂದ ವರ್ತಿಸಿ. ಮನೆಯಲ್ಲಿ ಆನಂದ ಮತ್ತು ಉತ್ಸಾಹದ ವಾತಾವರಣವಿರುತ್ತದೆ.

ಮೀನ ರಾಶಿ

ಪ್ರಿಯ ವ್ಯಕ್ತಿಗಳೊಂದಿಗಿನ ನಿಕಟತೆ ಇನ್ನಷ್ಟು ಹೆಚ್ಚಲಿದೆ. ಆರೋಗ್ಯ ಕೊಂಚ ಏರುಪೇರಾಗಬಹುದು. ವಿದ್ಯಾರ್ಥಿಗಳು ಓದಿನಲ್ಲಿ ಉತ್ತಮ ಪ್ರದರ್ಶನ ನೀಡಲಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read