ಈ ರಾಶಿಯಲ್ಲಿ ಜನಿಸಿದವರಿಗೆ ಇಂದು ಕೂಡಿ ಬರಲಿದೆ ಕಂಕಣ ಭಾಗ್ಯ…..!

ಮೇಷ : ಇಂದು ನೀವು ವಿವಿಧ ಮೂಲಗಳಿಂದ ಹಣವನ್ನು ಗಳಿಸಲಿದ್ದೀರಿ. ನಿಮ್ಮಿಂದ ಸಾಲ ಪಡೆದವರು ಇಂದು ತಾವಾಗಿಯೇ ಬಂದು ಸಾಲವನ್ನು ತೀರಿಸಲಿದ್ದಾರೆ. ಕಿರಿಯ ಸೋದರನು ನಿಮ್ಮ ಮೇಲೆ ಮುನಿಸಿಕೊಳ್ಳುವ ಸಾಧ್ಯತೆ ಇದೆ. ಕೃಷಿಕರಿಗೆ ಈ ದಿನ ಹೆಚ್ಚು ಶುಭಕರವಲ್ಲ.

ವೃಷಭ : ವಿದೇಶಗಳಲ್ಲಿ ನಿಮ್ಮ ವ್ಯವಹಾರವು ಉತ್ತಮ ಯಶಸ್ಸನ್ನು ಕಾಣಲಿದೆ. ಪೋಷಕರು ನಿಮ್ಮ ಯಶಸ್ಸಿನ ಬಗ್ಗೆ ಹೆಮ್ಮೆ ವ್ಯಕ್ತಪಡಿಸಲಿದ್ದಾರೆ. ಆಸ್ತಿ ವಿಚಾರವಾಗಿ ಸಹೋದರರ ಜೊತೆ ಮೂಡಿದ್ದ ವೈಮನಸ್ಯವು ವಾಸಿಯಾಗಲಿದೆ. ಮನೆಯಲ್ಲಿ ಶುಭಕಾರ್ಯದ ಮುನ್ಸೂಚನೆ ಸಿಗಲಿದೆ.

ಮಿಥುನ : ವೃತ್ತಿ ಜೀವನದಲ್ಲಿ ನೀವಿಂದು ಯಶಸ್ಸನ್ನು ಗಳಿಸಲಿದ್ದೀರಿ. ನಿಮ್ಮ ಕಾರ್ಯವನ್ನು ಮೇಲಾಧಿಕಾರಿಗಳಿಗೆ ಮೆಚ್ಚುಗೆಯಾಗೋದ್ರಿಂದ ಹೆಚ್ಚಿನ ಜವಾಬ್ದಾರಿಗಳನ್ನು ನಿಮಗೆ ವಹಿಸುವ ಸಾಧ್ಯತೆ ಇದೆ. ವಿದ್ಯಾರ್ಥಿಗಳಿಗೆ ಓದಿನಲ್ಲಿ ಆಸಕ್ತಿ ಹೆಚ್ಚಲಿದೆ.

ಕಟಕ : ನಿಮ್ಮ ಮನಸ್ಸು ಆಧ್ಯಾತ್ಮದತ್ತ ಹೆಚ್ಚು ವಾಲಲಿದೆ. ವೃತ್ತಿ ಜೀವನಕ್ಕಿಂತ ವೈಯಕ್ತಿಕ ಜೀವನವು ಹೆಚ್ಚು ನೆಮ್ಮದಿ ಎನಿಸಲಿದೆ. ಸಂಗಾತಿಯು ನಿಮ್ಮೆಲ್ಲ ಪ್ರಯತ್ನಗಳಿಗೆ ಹೆಗಲಾಗಲಿದ್ದಾರೆ. ಮಕ್ಕಳು ಓದಿನಲ್ಲಿ ಪ್ರಗತಿ ಕಾಣುವರು.

ಸಿಂಹ : ಮಹಿಳೆಯರು ಚಂಚಲ ಬುದ್ಧಿಯನ್ನು ಹತೋಟಿಗೆ ತಂದುಕೊಳ್ಳಲೇಬೇಕು. ಇಲ್ಲವಾದಲ್ಲಿ ದೊಡ್ಡ ಸಮಸ್ಯೆಯ ಸುಳಿಗೆ ಸಿಲುಕುವ ಸಾಧ್ಯತೆ ಇದೆ. ಯಾರೋ ಮಾಡುತ್ತಾರೆ ಎಂದು ನೀವು ಮಾಡಲು ಹೋಗಿ ಕೈಲಿದ್ದ ಹಣವನ್ನು ಖಾಲಿ ಮಾಡಕೊಳ್ಳಬೇಡಿ.

ಕನ್ಯಾ : ಆಘಾತಕಾರಿ ಸುದ್ದಿಯೊಂದು ನಿಮ್ಮ ಕುಟುಂಬಕ್ಕೆ ಬರಸಿಡಿಲಿನಂತೆ ಬಂದೆರಗಲಿದೆ. ಇದರಿಂದ ನೀವು ಅತಿಯಾದ ನೋವನ್ನು ಅನುಭವಿಸಲಿದ್ದೀರಿ. ವೈದ್ಯಕೀಯ ರಂಗದಲ್ಲಿ ಇರುವವರಿಗೆ ಒತ್ತಡ ಹೆಚ್ಚಲಿದೆ. ಧಾರ್ಮಿಕ ಕಾರ್ಯಗಳತ್ತ ಮನಸ್ಸು ಮಾಡಲಿದ್ದೀರಿ.

ತುಲಾ : ಹೊಸ ಮನೆ ನಿರ್ಮಾಣದ ಬಗ್ಗೆ ಪೋಷಕರ ಮುಂದೆ ಪ್ರಸ್ತಾವನೆಯನ್ನು ಇಡಲಿದ್ದೀರಿ. ಧಾರ್ಮಿಕ ಕಾರ್ಯಗಳಿಗೆ ಪೋಷಕರು ಮಾರ್ಗದರ್ಶನ ನೀಡಲಿದ್ದಾರೆ. ಕಚೇರಿ ಕೆಲಸದ ನಿಮಿತ್ತ ಇಂದು ಅತಿಯಾಗಿ ಪ್ರಯಾಣ ಮಾಡಬೇಕಾಗಿ ಬರಬಹುದು.

ವೃಶ್ಚಿಕ : ಗುತ್ತಿಗೆ ಕೆಲಸ ಮಾಡುವವರು ಇಂದು ಹೆಚ್ಚಿನ ಬೇಡಿಕೆಯನ್ನು ಪಡೆಯಲಿದ್ದಾರೆ. ತಾಯಿಯ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ಇರಲಿ. ಮಕ್ಕಳಿಗೆ ಓದಿನ ಕಡೆಗೆ ಮನಸ್ಸು ಹೋಗದೇ ಇರಬಹುದು. ಪೋಷಕರು ಈ ಸಮಯಲ್ಲಿ ಎಚ್ಚರಿಕೆಯಿಂದ ಇರಬೇಕು.

ಧನು : ಉದ್ಯಮಿಗಳಿಗೆ ಇಂದು ಅನಿರೀಕ್ಷಿತ ಲಾಭ ಕಾದಿದೆ. ಸಂಗಾತಿಯು ಸ್ವಂತ ಉದ್ಯಮ ಆರಂಭಿಸುವ ಬಗ್ಗೆ ನಿಮ್ಮೊಡನೆ ಚರ್ಚಿಸಲಿದ್ದಾರೆ. ವೈವಾಹಿಕ ಸಂಬಂಧಕ್ಕೆ ಅನೇಕ ವರ್ಷಗಳಿಂದ ಹುಡುಕಾಡುತ್ತಿರುವವರಿಗೆ ಇಂದು ಕಂಕಣ ಭಾಗ್ಯ ಕೂಡಿ ಬರಲಿದೆ.

ಮಕರ : ಕೆಲಸಕ್ಕೆಂದು ಕಚೇರಿ ಅಲೆದಾಟ ಮಾಡಿ ಸುಸ್ತಾದ ನಿಮಗೆ ಹೊಸ ಉದ್ಯೋಗಾವಕಾಶವೊಂದು ನಿಮ್ಮನ್ನೇ ಹುಡುಕಿಕೊಂಡು ಮನೆಬಾಗಿಲಿಗೆ ಬರಲಿದೆ. ಯಾವುದೇ ಕಾರಣಕ್ಕೂ ಇದನ್ನು ತಿರಸ್ಕರಿಸಬೇಡಿ. ಮನೆಯಲ್ಲಿ ಚಿನ್ನಾಭರಣ ಖರೀದಿ ಮಾಡಲಿದ್ದೀರಿ.

ಕುಂಭ : ನಿಮ್ಮ ಸಂಗಾತಿಯು ವೃತ್ತಿ ಜೀವನದಲ್ಲಿ ಬಹುದೊಡ್ಡ ಸಾಧನೆಯನ್ನು ಮಾಡಲಿದ್ದಾರೆ. ಇದು ನಿಮ್ಮ ಸಂತೋಷವನ್ನು ಮುಗಿಲೆತ್ತರಕ್ಕೆ ಏರಿಸಲಿದೆ. ವ್ಯಾಪಾರಸ್ಥರಿಗೆ ಸ್ನೇಹಿತರಿಂದಲೇ ಲಾಭವಿದೆ.

ಮೀನ : ತಂದೆಯೊಂದಿಗೆ ನಿಮ್ಮ ಸಂಬಂಧವು ಸುಧಾರಿಸಲಿದೆ. ಧಾರ್ಮಿಕ ಚಟುವಟಿಕೆಗಳಲ್ಲಿ ಹೆಚ್ಚಿನ ಆಸಕ್ತಿ ತೋರಲಿದ್ದೀರಿ. ಅತ್ತೆ ಮಾವನೊಂದಿಗೆ ಮಾತನಾಡುವ ಮುನ್ನ ಎಚ್ಚರಿಕೆ ಇರಲಿ. ಎಂದಿಗೂ ನಾಲಗೆ ಹರಿಬಿಡಬೇಡಿ. ಮಕ್ಕಳ ಆರೋಗ್ಯದಲ್ಲಿ ಏರುಪೇರು ಉಂಟಾಗಲಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read