ದೀಪಿಕಾ ಪಡುಕೋಣೆ ಇಂಟರ್ನೆಟ್‌ನಲ್ಲಿ ಮತ್ತೆ ಸುದ್ದಿಯಲ್ಲಿದ್ದಾರೆ. ಇದಕ್ಕೆ ಕಾರಣ ʼಪಠಾಣ್ʼ ಚಿತ್ರದಿಂದಲ್ಲ, ಬದಲಾಗಿ ಗುಳಿಕೆನ್ನೆ ಬೆಡಗಿ ಇತ್ತೀಚೆಗೆ ಎಕಾನಮಿ ಕ್ಲಾಸ್ ವಿಮಾನದಲ್ಲಿ ಪ್ರಯಾಣ ಮಾಡಿದ ವಿಷಯ.
ವೈರಲ್ ಆಗಿರುವ ವಿಡಿಯೋದಲ್ಲಿ, ನಟಿ ದೀಪಿಕಾ ಪಡುಕೋಣೆ ಎಕಾನಮಿ ಕ್ಲಾಸ್ ವಿಮಾನದಲ್ಲಿ ಪ್ರಯಾಣ ಮಾಡುತ್ತಿರುವುದು ಕಂಡುಬಂದಿದೆ. ಆರೆಂಜ್ ಶಿಫ್ಟ್‌ನಲ್ಲಿ ಕೂಲಾಗಿ ಕಂಡ ದೀಪಿಕಾ ಪಡುಕೋಣೆಯನ್ನ ನೋಡಿದ ಪ್ರಯಾಣಿಕರು ಬೆರಗಾಗಿದ್ದಾರೆ.
ನಟಿಯನ್ನು ನೋಡಿ ಅಭಿಮಾನಿಯೊಬ್ಬರು “ಹಾಯ್ ದೀಪಿಕಾ” ಎಂದು ಹೇಳುವುದನ್ನು ವಿಡಿಯೋದಲ್ಲಿ ಕೇಳಬಹುದು. ಆದರೆ ಅದನ್ನು ನಟಿ ದೀಪಿಕಾ ಪಡುಕೋಣೆ ನಿರ್ಲಕ್ಷಿಸಿದಂತೆ ಕಾಣುತ್ತಾರೆ.
ಟ್ವಿಟರ್ ನಲ್ಲಿ ವೀಡಿಯೋ ಶೇರ್ ಮಾಡಿಕೊಂಡಿರುವ ಅಭಿಮಾನಿಯೊಬ್ಬರು “ಅಭಿಮಾನಿ, ದೀಪಿಕಾ ಪಡುಕೋಣೆ ಎಕಾನಮಿ ಕ್ಲಾಸ್‌ನಲ್ಲಿ ಪ್ರಯಾಣಿಸುತ್ತಿರುವುದನ್ನು ಸೆರೆಹಿಡಿದಿದ್ದಾರೆ, ಹೆಚ್ಚಿನ ತಾರೆಯರು ಇದೇ ರೀತಿ ಇರಬೇಕೆಂದು ಎಂದು ನೀವು ಭಾವಿಸುತ್ತೀರಾ?” ಎಂದು ಕೇಳಿದ್ದಾರೆ.
ಬಾಲಿವುಡ್ ನಟರು ಎಕಾನಮಿ ಕ್ಲಾಸ್‌ನಲ್ಲಿ ಪ್ರಯಾಣಿಸುತ್ತಿರುವುದು ಇದೇ ಮೊದಲಲ್ಲ. ಈ ಹಿಂದೆ, ಕತ್ರಿನಾ ಕೈಫ್ ಮತ್ತು ವಿಕ್ಕಿ ಕೌಶಲ್ ಅವರು ಎಕಾನಮಿ ಕ್ಲಾಸ್‌ನಲ್ಲಿ ಪ್ರಯಾಣಿಸುತ್ತಿದ್ದ ವಿಡಿಯೋ ವೈರಲ್ ಆದ ನಂತರ ಇಂಟರ್ನೆಟ್‌ನಲ್ಲಿ ಭಾರೀ ಸದ್ದು ಮಾಡಿತ್ತು.
https://twitter.com/sixsigmafilms/status/1626071234164432896?ref_src=twsrc%5Etfw%7Ctwcamp%5Etweetembed%7Ctwterm%5E1626071234164432896%7Ctwgr%5Ebd3b5a1cfff297a15185ead487d3dd1ac3fd08c5%7Ctwcon%5Es1_&ref_url=https%3A%2F%2Fwww.ndtv.com%2Fentertainment%2Fviral-deepika-padukone-thrills-the-internet-by-flying-economy-3788300