ಈ ಎಲ್ಲಾ ಸಮಸ್ಯೆಗಳಿಗೆ ಒಂದೇ ಪರಿಹಾರ ತುಳಸಿ….!

ಹಿಂದೂ ಧರ್ಮದಲ್ಲಿ ತುಳಸಿ ಗಿಡಗಳಿಗೆ ತುಂಬಾನೇ ಮಹತ್ವವಿದೆ. ಅಂಗಳದಲ್ಲಿ ಈ ಗಿಡವನ್ನ ನೆಡೋದ್ರಿಂದ ಮನೆಯಲ್ಲಿ ಸುಖ ಶಾಂತಿ ಹಾಗೂ ಸಮೃದ್ಧಿ ನೆಲೆಸಲಿದೆ ಎಂಬ ನಂಬಿಕೆಯಿದೆ. ತುಳಸಿ ವಾಸ್ತು ಶಾಸ್ತ್ರದ ದೃಷ್ಟಿಯಿಂದ ಮಾತ್ರವಲ್ಲದೇ ಆರೋಗ್ಯದ ದೃಷ್ಟಿಯಿಂದಲೂ ಪ್ರಯೋಜನಕಾರಿಯಾಗಿದೆ.

ವಾಸ್ತು ಶಾಸ್ತ್ರದ ಪ್ರಕಾರ ಹಿತ್ತಾಳೆಯ ಪಾತ್ರೆಯಲ್ಲಿ 4 ರಿಂದ 5 ತುಳಸಿ ಎಲೆಗಳನ್ನ ಹಾಕಿ ಸುಮಾರು 24 ಗಂಟೆಗಳ ಕಾಲ ಹಾಗೆಯೇ ಇಡಿ. ಸ್ನಾನ ಮಾಡಿದ ಬಳಿಕ ನಿಮ್ಮ ಮನೆಯ ಪ್ರವೇಶ ದ್ವಾರದಲ್ಲಿ ಈ ನೀರನ್ನ ಸಿಂಪಡಣೆ ಮಾಡಿ. ಅಲ್ಲದೇ ಮನೆಯ ಒಳಗೆಲ್ಲ ಈ ನೀರನ್ನ ಸಿಂಪಡಿಸಿ. ಈ ರೀತಿ ಮಾಡೋದ್ರಿಂದ ಮನೆಯಲ್ಲಿ ನಕಾರಾತ್ಮಕ ಶಕ್ತಿ ದೂರಾಗಲಿದೆ.

ಮದುವೆಗೆ ವಿಳಂಬವಾಗಿದೆ ಎಂದು ಕೊರಗುತ್ತಿರುವ ಯುವತಿಯರು ಪ್ರತಿದಿನ ಬೆಳಗ್ಗೆ ಸ್ನಾನ ಮಾಡಿ ತುಳಸಿಗೆ ನೀರೆರೆದು ಪ್ರಾರ್ಥನೆ ಸಲ್ಲಿಸಿದ್ದಲ್ಲಿ ಕಂಕಣ ಭಾಗ್ಯ ಕೂಡಿ ಬರಲಿದೆ.

ಉದ್ಯಮದಲ್ಲಿ ಇರುವವರಿಗೆ ಲಾಭ ಹೊಂದಬೇಕು ಅನ್ನೋ ಆಸೆ ಇದ್ದೇ ಇರುತ್ತೆ. ಆದರೆ ಉದ್ಯಮದಲ್ಲಿ ಲಾಭ ಎಷ್ಟಿದೆಯೋ ನಷ್ಟ ಕೂಡ ಅದೇ ರೀತಿ ಇರುತ್ತೆ. ನೀವು ಕೂಡ ಉದ್ಯಮದಲ್ಲಿ ನಷ್ಟವನ್ನ ಅನುಭವಿಸುತ್ತಿದ್ದಲ್ಲಿ ಪ್ರತಿದಿನ ಬೆಳಗ್ಗೆ ಎದ್ದು ಶುಭ್ರ ಬಟ್ಟೆ ಧರಿಸಿ ತುಳಸಿಗೆ ಹಸಿ ಹಾಲನ್ನ ಎರೆಯಿರಿ. ಇದಾದ ಬಳಿಕ ಸಿಹಿ ತಿನಿಸನ್ನ ನೈವೇದ್ಯ ಮಾಡಿ ಉಳಿದವುಗಳನ್ನ ಪ್ರಸಾದದ ರೂಪದಲ್ಲಿ ಮುತ್ತೈದೆಯರಿಗೆ ನೀಡಿ. ಈ ರೀತಿ ಮಾಡಿದ್ರೆ ಉದ್ಯಮದಲ್ಲಿ ಶೀಘ್ರದಲ್ಲೇ ಲಾಭ ಕಾಣಲಿದ್ದೀರಿ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read