ಈ ಎಣ್ಣೆಯನ್ನು ಅಪ್ಪಿತಪ್ಪಿಯೂ ತಲೆಗೆ ಹಚ್ಚಬೇಡಿ; ಕೂದಲು ಸಂಪೂರ್ಣ ಉದುರಿ ಹೋಗಬಹುದು….!

ದಪ್ಪ ಮತ್ತು ಕಪ್ಪು ಉದ್ದನೆಯ ಕೂದಲಿಗಾಗಿ ನಾವು ಇನ್ನಿಲ್ಲದ ಕಸರತ್ತು ಮಾಡ್ತೇವೆ. ಆಹಾರ ಕ್ರಮದಲ್ಲಿ ಬದಲಾವಣೆಯ ಜೊತೆಗೆ ಕೂದಲಿನ ಬೆಳವಣಿಗೆಗೆ ಬೇಕಾದ ಉತ್ಪನ್ನಗಳನ್ನೂ ಬಳಸುತ್ತೇವೆ. ಕೂದಲಿನ ಶುಷ್ಕತೆಯ ಸಮಸ್ಯೆಯನ್ನು ತಪ್ಪಿಸಲು ವಾರಕ್ಕೆ ಎರಡು ಬಾರಿ ಚೆನ್ನಾಗಿ ಎಣ್ಣೆ ಮಸಾಜ್‌ ಮಾಡಿಕೊಂಡು ಸ್ನಾನ ಮಾಡುವುದು ಬಹುತೇಕರ ರೂಢಿ. ಆದರೆ ಕೂದಲಿಗೆ ಕೆಲವೊಂದು ನಿರ್ದಿಷ್ಟ ಎಣ್ಣೆಗಳನ್ನು ಅಪ್ಪಿತಪ್ಪಿಯೂ ಹಚ್ಚಬೇಡಿ. ಇದರಿಂದ ನಿಮ್ಮ ಕೂದಲು ಸಂಪೂರ್ಣವಾಗಿ ಉದುರಿ ಹೋಗಬಹುದು.

ನಿಂಬೆ ಎಣ್ಣೆ – ಅನೇಕರು ಕೂದಲಿಗೆ ನಿಂಬೆ ಎಣ್ಣೆಯನ್ನು ಬಳಸುತ್ತಾರೆ. ಆದರೆ ಇದನ್ನು ತಪ್ಪಿಸಿ. ನಿಂಬೆ ಎಣ್ಣೆಯಲ್ಲಿ ಆಸಿಡ್ ಮಟ್ಟವು ತುಂಬಾ ಹೆಚ್ಚಾಗಿರುತ್ತದೆ. ಅದು ಕೂದಲು ಕುಗ್ಗುವಿಕೆಗೆ ಕಾರಣವಾಗಬಹುದು. ಕೂದಲು ಉದರುವ ಸಮಸ್ಯೆ ಇದ್ದರೆ ನಿಂಬೆ ಎಣ್ಣೆಯನ್ನು ಬಳಸಲೇಬೇಡಿ. ಇದನ್ನು ಹಚ್ಚಿಕೊಳ್ಳುವುದರಿಂದ ಕೂದಲು ಪೂರ್ತಿಯಾಗಿ ಉದುರಿ ಹೋಗಬಹುದು.

ಕರ್ಪೂರ ಎಣ್ಣೆ –ಕರ್ಪೂರದ ಎಣ್ಣೆ ಕೂದಲಿನ ಬೆಳವಣಿಗೆಯನ್ನು ಉತ್ತೇಜಿಸುತ್ತದೆ ಎಂದು ಅನೇಕರು ಹೇಳುತ್ತಾರೆ. ಆದರೆ ಇದು ಕೂದಲಿಗೆ ತುಂಬಾ ಅಪಾಯಕಾರಿಯೂ ಹೌದು. ಇದು ನಮ್ಮ ನೆತ್ತಿ ಒಣಗುವಂತೆ ಮಾಡುತ್ತದೆ ಮತ್ತು ಚರ್ಮದ ಮೇಲೆ ತುರಿಕೆ, ದದ್ದು ಇತ್ಯಾದಿ ಸಮಸ್ಯೆಗಳು ಬರಬಹುದು. ಈ ಕಾರಣದಿಂದಾಗಿ ಕೂದಲು ಉದುರಿ ಹೋಗಬಹುದು.

ಆಲಿವ್ ಎಣ್ಣೆ- ಆಲಿವ್ ಎಣ್ಣೆಯನ್ನು ಬಳಸುವುದರಿಂದ ಕೂದಲು ಚೆನ್ನಾಗಿ ಬೆಳೆಯುತ್ತದೆ ಎಂದು ಅನೇಕರು ನಂಬಿದ್ದಾರೆ. ಆದರೆ ಆಲಿವ್ ಆಯಿಲ್‌ನಲ್ಲಿ ತುಂಬಾ ಜಿಡ್ಡಿನಂಶವಿದೆ. ಕೂದಲಿನ ರಂಧ್ರಗಳನ್ನು ಇದು ಸುಲಭವಾಗಿ ತಡೆಯುತ್ತದೆ. ಆಲಿವ್‌ ಆಯಿಲ್‌ ಹಚ್ಚಿಕೊಂಡ ಬಳಿಕ ಕೂದಲನ್ನು ಶುಚಿಗೊಳಿಸುವುದು ಕೂಡ ಕಷ್ಟ. ಇದರಿಂದ ಕೂದಲು ಉದುರಿ ಹೋಗುವ ಅಪಾಯವಿರುತ್ತದೆ. ಆದ್ದರಿಂದ ಇದನ್ನು ಬಳಸದಿರುವುದೇ ಉತ್ತಮ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read